ಕೆಂಜಾರು ತಂಗಡಿ ಪ್ರದೇಶದ ನಾಲ್ವರಲ್ಲಿ ಸೋಂಕು ಪತ್ತೆ ಹಿನ್ನೆಲೆ : 4 ಮನೆಗಳು ಸೀಲ್ ಡೌನ್
Team Udayavani, May 27, 2020, 4:35 PM IST
ಬಜಪೆ ; ಕೆಂಜಾರು ತಂಗಡಿ ಪ್ರದೇಶದ ಒಂದೇ ಮನೆಯ ನಾಲ್ಕು ಮಂದಿಗೆ ಕೋವಿಡ್ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದ ಸುತ್ತಲಿನ ನಾಲ್ಕು ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಸೋಂಕಿತರು ಮೇ 4 ರಂದು ಮಹಾರಾಷ್ಟ್ರದಿಂದ ಬಂದಿದ್ದು ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದರು ಎಂದು ತಿಳಿದು ಬಂದಿದೆ ಮೇ 20 ರಂದು ನಾಲ್ಕು ಮಂದಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು ಮಂಗಳವಾರ ನಾಲ್ವರ ವರದಿಯು ಪಾಸಿಟಿವ್ ಬಂದಿದ್ದು ಅವರನ್ನು ಮಂಗಳವಾರ ಸಂಜೆಯೇ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವರ ಪ್ರಾಥಮಿಕ ಸಂಪರ್ಕ ಹೊಂದಿದ ನಾಲ್ಕು ಮನೆಗಳನ್ನು ಇಂದು ಸೀಲ್ ಡೌನ್ ಮಾಡಲಾಗಿದ್ದು ನಾಲ್ಕು ಮನೆಯಲ್ಲಿ ಒಟ್ಟು 35 ಮಂದಿಯಿದ್ದು ಅದರಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದ 10 ಮಂದಿಯನ್ನು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ.
ಉಳಿದಂದಂತೆ ತಂಗಡಿ ಸಮೀಪದ 62 ಮನೆಗಳ ಸುಮಾರು 240 ಮಂದಿಯನ್ನು ಕಂಟೈನ್ಮೆಂಟ್ ಝೋನ್ ಗೆ ಒಳಪಡಲಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.