ಕೇರಳದಲ್ಲೀಗ ಬಿಸಿಗಾಳಿಗಿಂತ ಚಿನ್ನದ ಬಿರುಗಾಳಿ!
Team Udayavani, Mar 8, 2021, 6:40 AM IST
ಕರಾವಳಿ ಭಾಗದಲ್ಲಿ ಬೇಸಗೆಯ ಧಗೆ ಆರಂಭವಾಗಿ ಕೆಲವು ದಿನಗಳಾಗಿವೆ. ಈ ಬಾರಿಯ ತಾಪಮಾನ ಕಂಡ ಊರ ಹಿರಿಯರು, ಈ ಬೇಸಗೆ ಇನ್ನಷ್ಟು ಕಷ್ಟ ಎನ್ನುತ್ತಿದ್ದಾರೆ. ಅದೂ ಕರಾವಳಿಯ ಅಂಚಿನಲ್ಲೇ ಇರುವ ಕೇರಳದಲ್ಲಂತೂ ಈ ತಾಪಮಾನ ತುಸು ಇನ್ನೂ ಹೆಚ್ಚು. ಯಾಕೆಂದರೆ ಮೊನ್ನೆವರೆಗೂ ತಣ್ಣಗೆ ಬೀಸುತ್ತಿದ್ದ ಗಾಳಿಯೂ ದಿನೇದಿನೆ ಬಿಸಿಯಾಗತೊಡಗಿದೆ. ಅದೂ ಚಿನ್ನದ ಬಿರುಗಾಳಿ.
ಕಳೆದ ಚುನಾವಣೆವರೆಗೂ ಇಲ್ಲಿ ಇದ್ದದ್ದು ಎರಡೇ ತಂಡಗಳು. ಪ್ರದರ್ಶನ ಗೊಳ್ಳುತ್ತಿದ್ದುದೂ ಹಳೆಯ ಕಥಾನಕಗಳೇ. ಕೇರಳ ಹಾಗೂ ತಮಿಳುನಾಡುಗಳ ವಿಶೇಷ ಗೊತ್ತಿರಬಹುದು. ಅಲ್ಲಿ ಏಕ ವ್ಯಕ್ತಿ ಪ್ರದರ್ಶನಗಳೇ ಇಲ್ಲ. ಏನಿದ್ದರೂ ತಂಡಗಳಂತೆಯೇ. ಒಂದು ಬಗೆಯಲ್ಲಿ ಕ್ರಿಕೆಟ್‌ನಲ್ಲಿ ದೊಡ್ಡವರನ್ನೆಲ್ಲ ಸೇರಿಸಿ “ವಿಶೇಷ ಇಲೆವನ್’ ಎಂದು ಆಡಿಸುತ್ತಾರಲ್ಲಾ ಹಾಗೆಯೇ. ಆದರೆ ಈ ಬಾರಿ ಕೇರಳದಲ್ಲಿ ಕೊಂಚ ವಿಭಿನ್ನವಾಗಿದೆ. ಎಲ್‌ಡಿಎಫ್ ಹಾಗೂ ಯುಡಿಎಫ್ ಜತೆಗೆ ಪ್ರದರ್ಶನಕ್ಕೆ ಬಿಜೆಪಿಯೂ ಸೇರಿಕೊಂಡಿದೆ.
ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಎಲ್‌ಡಿಎಫ್ ನ್ನು ಮುನ್ನಡೆಸುತ್ತಿರುವವರು. ಇದ ರಲ್ಲಿ ಎಡಪಕ್ಷಗಳದ್ದೇ ಸಾರಥ್ಯ. ಯುಡಿಎಫ್ನಲ್ಲಿ ಕಾಂಗ್ರೆಸ್ ದೊಡ್ಡ ರಾಷ್ಟ್ರೀಯ ಪಕ್ಷ. ಎರಡೂ ತಂಡಗಳೂ ಶಂಖ ಊದಿಯಾಗಿವೆ. ಎನ್‌ಡಿಎ ಯೂ ಹಿಂದೆ ಬಿದ್ದಿಲ್ಲ. ಅವರ ವಿಜಯ ಯಾತ್ರೆಯೂ ಆರಂಭವಾಗಿದೆ.
ಸದ್ಯಕ್ಕೆ ಪಿಣರಾಯ್ ವಿಜಯನ್ ಮುಖಕ್ಕೆ ರಾಚುತ್ತಿರುವುದು ಚಿನ್ನ ಕಳ್ಳಸಾ ಗಣೆಯ ಆರೋಪಕ್ಕೆ ಅಂಟಿಕೊಂಡಿರುವ ಬಿಸಿಬೂದಿ. ಚಿನ್ನ ಕಳ್ಳಸಾಗಣೆ ಸಂಬಂಧಿ ಸಿದ ಸ್ವಪ್ನಾ ಸುರೇಶ್ ಪ್ರಕರಣದಲ್ಲಿ ಸಿಎಂ ಕಚೇರಿಯ ಪಾತ್ರದ ಕುರಿತು ಆರೋ ಪಗಳು ಕೇಳಿಬರುತ್ತಿವೆ.
ಅದಕ್ಕೆ ಪಿಣರಾಯ್ ವಿಜಯನ್, “ಸುಂಕ ಇಲಾಖೆಯ ಅಧಿಕಾರಿಗಳು ಕೇಂದ್ರದ ತಾಳಕ್ಕೆ ಕುಣಿಯುತ್ತಿ ದ್ದಾರೆ. ಅವರೆಲ್ಲ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ದ್ದಾರೆ. ಅದಕ್ಕೆ ಪ್ರತಿಯಾಗಿ ಇಂದು ತಿರುವನಂತಪುರದಲ್ಲಿ ಬಿಜೆಪಿ ಪರ ಚುನಾವಣ ಪ್ರಚಾರವನ್ನು ಕೈಗೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ, ಚಿನ್ನದ ಹಗರಣ ಕುರಿತೇ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಎ. 6 ರಂದು ನಡೆಯುವ ಚುನಾವಣೆಯಲ್ಲಿ ಸದ್ಯಕ್ಕೆ ಜೋರಾದ ಪ್ರದರ್ಶನ ಆರಂಭ ವಾಗಿರುವುದು ಇವರಿಬ್ಬರದ್ದೇ. ಕಾಂಗ್ರೆಸ್‌ನ ವರಿಷ್ಠ ರಾಹುಲ್ ಗಾಂಧಿ ಚುನಾವಣ ಪ್ರಚಾರವನ್ನು ಕೈಗೊಂಡಿದ್ದಾರೆ. ಆದರೆ ಬಿಸಿಗಾಳಿಯ ತೀವ್ರತೆಯನ್ನು ಹೆಚ್ಚಿ ಸುವತ್ತ ಗಮನಕೊಟ್ಟಿದ್ದು ಕಡಿಮೆ.
ಸದ್ಯದ ವಾತಾವರಣದಲ್ಲಿ ಹಣಾ ಹಣಿಯ ವರಸೆ ಎಲ್‌ಡಿಎಫ್ ಮತ್ತು ಯುಡಿಎಫ್ ನಿಂದ ಎಲ್‌ಡಿಎಫ್ ಮತ್ತು ಬಿಜೆಪಿಯ ಕಡೆಗೆ ತಿರುಗಿದಂತಿದೆ. ಬಿಜೆಪಿ ಕಳೆದ ಬಾರಿ ಗೆದ್ದದ್ದು ಒಂದು ಕ್ಷೇತ್ರ. ಈ ಬಾರಿ ಕಣ್ಣಿಟ್ಟಿರುವುದು 15-16 ಕ್ಷೇತ್ರಗಳತ್ತ.
ಕಳೆದ ಎರಡು ವಿಧಾನಸಭಾ ಚುನಾವಣೆಗಳನ್ನು ಅವಲೋಕಿಸಿದರೆ ಕೇರಳದಲ್ಲಿ ಎರಡೂ ಹಳೇ ತಂಡಗಳ ನಿದ್ದೆ ಕೊಂಚ ಹಾಳಾಗಿದೆ. ಮತ ಗಳಿಕೆಯನ್ನೇ ಲೆಕ್ಕ ಹಾಕೋಣ. ಎಲ್‌ಡಿಎಫ್ 2016 ರ ಚುನಾವಣೆಯಲ್ಲಿ ಶೇ. 43.48ರಷ್ಟು (ಚಲಾವಣೆಯಾದ ಒಟ್ಟು ಮತಗಳಲ್ಲಿ) ಮತ ಪಡೆದು 91 ಸ್ಥಾನ ಗಳಿಸಿ ಅಧಿಕಾರ ಪಡೆಯಿತು. ಮತ ಗಳಿಕೆ ಪ್ರಮಾಣ 2011 ರಲ್ಲಿ ಶೇ. 44. 94ರಷ್ಟಿತ್ತು. ಯುಡಿಎಫ್ 2016ರಲ್ಲಿ ಶೇ. 38.81ರಷ್ಟು ಮತ ಗಳಿಸಿತು. ಪಡೆದ ಸ್ಥಾನಗಳು 47. ಈ ಪ್ರಮಾಣ 2011ರಲ್ಲಿ ಶೇ. 45. 83ರಷ್ಟಿತ್ತು. 2011ರಲ್ಲಿ ಲೆಕ್ಕಕ್ಕೇ ಇಲ್ಲದ ಎನ್‌ಡಿಎ 2016ರ ಚುನಾವಣೆಯಲ್ಲಿ ಶೇ. 14.96ರಷ್ಟು ಮತ ಗಳಿಸಿ ಒಂದು ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು.
ಈ ಬಿಸಿಗಾಳಿ ಯಾರ ಪಾಲಿಗೆ ಬಿರುಗಾಳಿಯಾಗಿ ಪರಿಣಮಿಸುತ್ತದೋ ಕಾದು ನೋಡಬೇಕು.
– ಅಶ್ವಘೋಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.