Kerala: ಕೇರಳದ ಖ್ಯಾತ ಚಿತ್ರಕಾರ ʻಆರ್ಟಿಸ್ಟ್ ನಂಬೂದರಿʼ ನಿಧನ
Team Udayavani, Jul 8, 2023, 6:53 PM IST
ತಿರುವನಂತಪುರಂ: ತಮ್ಮ ಸಾಹಿತ್ಯಿಕ ಚಿತ್ರಣಗಳು, ಶಿಲ್ಪಗಳು ಮತ್ತು ರೇಖಾ ರೇಖಾಚಿತ್ರಗಳ ಮೂಲಕ ಕೇರಳದಲ್ಲಿ ʻಆರ್ಟಿಸ್ಟ್ ನಂಬೂದರಿʼ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಚಿತ್ರಕಾರ ಕೆ.ಎಂ. ವಾಸುದೇವನ್ ನಂಬೂದರಿ ಅವರು ವಯೋಸಹಜ ಅನಾರೋಗ್ಯದಿಂದಾಗಿ ತಮ್ಮ 98 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ನಂಬೂದರಿ ಅವರು 1925 ರ ಸೆಪ್ಟೆಂಬರ್‌ನಲ್ಲಿ ಕೇರಲದ ಮಲಪ್ಪುರಂ ಜಿಲ್ಲೆಯ ಪೊನ್ನಾನಿ ಎಂಬಲ್ಲಿ ಜನಿಸಿದ್ದರು. ಬಾಲಕನಾಗಿದ್ದಾಗಲೇ ತಮ್ಮ ಮನೆಯ ಬಳಿಯ ದೇವಾಲಯವೊಂದರಲ್ಲಿ ಕೆತ್ತಲಾಗಿದ್ದ ಶಿಲ್ಪಕಲೆಗಳನ್ನು ಕಂಡು ಪ್ರೇರೇಪಿತರಾಗಿದ್ದ ಅವರು ಅದನ್ನು ಮನೆಯ ಹಿತ್ತಲಿನಲ್ಲಿ ಮರಳಿನ ಮೂಲಕ ರಚಿಸುತ್ತಿದ್ದರು.
ಚಿತ್ರಕಲೆಯಲ್ಲಿ ಪರಿಣತಿ ಪಡೆದ ಬಳಿಕ ಅವರು ಚಿತ್ರಕಲೆಯಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಿದ್ದರು. ಅದಲ್ಲದೇ ಖ್ಯಾತ ಮಲಯಾಳಿ ಲೇಖಕರಾದ ಶಿವಶಂಕರ ಪಿಳ್ಳೈ, ಎಂ.ಟಿ ವಾಸುದೇವನ್ ನಾಯರ್, ವಿ.ಕೆ.ಎನ್ ಅವರ ಕಾದಂಬರಿಗಳಿಗೆ ಚಿತ್ರಗಳನ್ನು ಬರೆದು ಕೊಟ್ಟಿದ್ದರು.
ಕೇರಳ ಲಲಿತ ಕಲಾ ಅಕಾಡಮಿಯ ಅಧ್ಯಕ್ಷರೂ ಆಗಿದ್ದ ನಂಬೂದರಿ ಅವರಿಗೆ, ಅಕಾಡಮಿ ಕೊಡಮಾಡುವ ರಾಜಾ ರವಿ ವರ್ಮ ಪ್ರಶಸ್ತಿಯೂ ದೊರಕಿದೆ.
ಚಿತ್ರಕಾರ ಕೆ.ಎಂ. ವಾಸುದೇವನ್ ನಂಬೂದರಿ ಅವರ ನಿಧನಕ್ಕೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಚುನಾವಣೆಗಳು ಬ್ಯಾಲೆಟ್ ನಿಂದ ನಡೆಯಬೇಕು, ಬುಲೆಟ್ ಗಳಿಂದ ಅಲ್ಲ: ಪ.ಬಂಗಾಳ ರಾಜ್ಯಪಾಲ
Shri K M Vasudevan Namboothiri Ji will be remembered through his iconic art works. He was widely respected for his creativity and efforts to popularise aspects relating to history and culture. Pained by his demise. My thoughts are with his family in this sad hour. Om Shanti.
— Narendra Modi (@narendramodi) July 7, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.