ಯೋಧನ ರಕ್ಷಿಸಿದಾಕೆ ಈಗ ಕೇರಳ ಬಿಜೆಪಿ ಅಭ್ಯರ್ಥಿ
ಜವಾನನ ಪ್ರಾಣ ಕಾಪಾಡಿ, ಕೈಗೆ ಹಾನಿಮಾಡಿಕೊಂಡಿದ್ದ ದಿಟ್ಟೆ
Team Udayavani, Dec 6, 2020, 10:40 PM IST
ಪಾಲಕ್ಕಾಡ್: ಸಿಐಎಸ್‌ಎಫ್ ಯೋಧನ ಜೀವ ರಕ್ಷಿಸುವ ಸಾಹಸದಲ್ಲಿ ಕೈಗೆ ಗಂಬೀರ ಹಾನಿ ಮಾಡಿಕೊಂಡು, ನಂತರ ಆತನನ್ನೇ ವರಿಸಿದ್ದ ದಿಟ್ಟ ಮಹಿಳೆ ಈಗ ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ!
ಕೇರಳದ ಯೋಧ ವಿಕಾಸ್ ಅವರ ಕೈಹಿಡಿದಿರುವ ಛತ್ತೀಸ್‌ಗಢ ಮೂಲದ ಜ್ಯೋತಿ ಅವರ ಸಾಹಸಗಾಥೆ ಇದು. 30 ವರ್ಷದ ಜ್ಯೋತಿ, ಡಿ.10ರಂದು ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಯ ಸ್ಪರ್ಧಾ ಕಣದಲ್ಲಿದ್ದಾರೆ.
ಯೋಧನನ್ನು ಕಾಪಾಡಿದಳು!: ಛತ್ತೀಸಗಢದ ದಾಂತೇವಾಡದಲ್ಲಿ ಈಕೆ ಬಿಎಸ್ಸಿ ನರ್ಸಿಂಗ್ ಓದುತ್ತಿದ್ದಳು. ಈ ವೇಳೆ ಜ್ಯೋತಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಈಕೆಯ ಮುಂದಿನ ಸೀಟ್‌ನಲ್ಲಿ ಕೂತಿದ್ದ ವಿಕಾಸ್ ಗಾಢ ನಿದ್ರೆಗೆ ಜಾರಿದ್ದರು. ಅವರ ತಲೆ ಕಿಟಕಿಯಿಂದ ಹೊರಗೆ ಚಾಚಿತ್ತು.
ವೇಗದಲ್ಲಿ ಮುನ್ನುಗ್ಗಿ ಬಂದ ಟ್ರಕ್ಕನ್ನು ಜ್ಯೋತಿ ಕೂಡಲೇ ಗಮನಿಸಿದಳು. ಇನ್ನೇನು ವಿಕಾಸ್ ಶಿರಕ್ಕೆ ಅಪಾಯ ಎದುರಾಗುತ್ತದೆ ಎಂಬ ಸುಳಿವು ಸಿಕ್ಕ ತಕ್ಷಣವೇ ಈಕೆ ಎಚ್ಚೆತ್ತು, ಯೋಧನ ಶಿರವನ್ನು ಬಸ್ಸಿನೊಳಕ್ಕೆ ಎಳೆದಿದ್ದಾಳೆ. ಯೋಧ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಜ್ಯೋತಿಯ ಕೈ ಮಾತ್ರ ಟ್ರಕ್ಕಿಗೆ ಬಡಿದು, ಗಂಭೀರ ಹಾನಿಗೊಳಗಾಯಿತು. ನಂತರ ಇವರಿಬ್ಬರ ನಡುವೆ ಪ್ರೀತಿ ಚಿಗುರಿ, ಪರಸ್ಪರ ವಿವಾಹವಾದರು.
ಮೋದಿ ಅಭಿಮಾನಿ: “ನರೇಂದ್ರ ಮೋದಿ ಅವರ ಆಡಳಿತ ನನಗೆ ಬಹಳ ಇಷ್ಟವಾಗಿದೆ. ಬಿಜೆಪಿ ನನ್ನನ್ನು ಅಭ್ಯರ್ಥಿಯಾಗಿ ನಿಲ್ಲಲು ಕೇಳಿಕೊಂಡಾಗ, ಕಣ್ಮುಚ್ಚಿಕೊಂಡು ಒಪ್ಪಿಕೊಂಡೆ’ ಎನ್ನುತ್ತಾರೆ, ಜ್ಯೋತಿ. ಈಕೆಯ ದಿಟ್ಟತನ ನೋಡಿ ಬಿಜೆಪಿ ಟಿಕೆಟ್ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.