ಸಲಿಂಗಿ ದಂಪತಿಗಳ ಮಗುವಿನ ನಾಮಕರಣ ಸಮಾರಂಭ; ಹಿತೈಷಿಗಳು ಭಾಗಿ
Team Udayavani, Mar 9, 2023, 7:20 PM IST
ಕೋಝಿಕ್ಕೋಡ್:ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿದ ಕೇರಳದ ಸಲಿಂಗಿ ದಂಪತಿಗಳು ಅಂತಾರಾಷ್ಟ್ರೀಯ ಮಹಿಳಾ ದಿನದಂದು ತಮ್ಮ ನವಜಾತ ಶಿಶುವಿಗೆ ನಾಮಕರಣ ಸಮಾರಂಭವನ್ನು ನಡೆಸಿದ್ದಾರೆ.
ಬುಧವಾರ ಸಂಜೆ ನಡೆದ ಸಮಾರಂಭದಲ್ಲಿ ಮಗುವಿಗೆ ”ಜಬಿಯಾ ಜಹದ್” ಎಂದು ನಾಮಕರಣ ಮಾಡಲಾಯಿತು, ಇದರಲ್ಲಿ ಹಲವಾರು ಟ್ರಾನ್ಸ್‌ಜೆಂಡರ್ ಸಮುದಾಯದ ವ್ಯಕ್ತಿಗಳು ಮತ್ತು ಸಮಾಜದ ವಿವಿಧ ಕ್ಷೇತ್ರಗಳ ಹಿತೈಷಿಗಳು ಭಾಗವಹಿಸಿದ್ದರು.
ಉತ್ಸುಕರಾದ ಜಿಯಾ ಪಾವಲ್ ಮತ್ತು ಜಹದ್ ಅವರು ತಮ್ಮ ಮಗು ಸಮಾಜದಲ್ಲಿ ಬೆಳಕನ್ನು ಹರಡಲಿ ಎಂದು ಹಾರೈಸಿದರು. ಮಗುವಿನ ಲಿಂಗವನ್ನು ಬಹಿರಂಗಪಡಿಸಲು ಅವರು ಬಯಸುವುದಿಲ್ಲ ಎಂಬ ಅವರ ಹಿಂದಿನ ಘೋಷಣೆಯ ಬಗ್ಗೆ ಕೇಳಿದಾಗ, ಪಾವಲ್ ಅದನ್ನು ಜಗತ್ತಿಗೆ ಬಹಿರಂಗಪಡಿಸುವ ಸಂದರ್ಭಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.
ಮಗುವಿಗೆ ಇಟ್ಟ ಹೆಣ್ಣಿನ ಹೆಸರಿನ ಕುರಿತು ಕೇಳಿದಾಗ “ಈಗ ಅದು ಎಲ್ಲರಿಗೂ ಸ್ಪಷ್ಟವಾಗಿದೆ. ನಮ್ಮ ಮಗುವಿನ ಜನನವು ಎಲ್ಲರಿಗೂ ತಿಳಿಯಬೇಕೆಂದು ನಾವು ನಿಜವಾಗಿಯೂ ಬಯಸಿದ್ದೇವೆ. ನನ್ನ ಆಸೆ ಈಡೇರಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಈ ಸಮಾರಂಭ ಕನಸಾಗಿತ್ತು” ಎಂದು ಅವರು ಹೇಳಿದರು.
ಕಳೆದ ತಿಂಗಳು ಇಲ್ಲಿನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಆಕೆಯ ಸಂಗಾತಿ ಜಹಾದ್,ಮುಂದಿನ ಆರು ತಿಂಗಳವರೆಗೆ ನಮಗೆ ಸಂಪೂರ್ಣವಾಗಿ ವಿಶ್ರಾಂತಿ ಪಡೆಯಬೇಕಾಗಿದೆ” ಎಂದು ಟ್ರಾನ್ಸ್‌ಮ್ಯಾನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!
Video: ನೋಡಲು ಪೆಟ್ರೋಲ್ ಟ್ಯಾಂಕರ್… ಇದರ ಒಳಗಿರುವುದು ಮಾತ್ರ ರಾಶಿ ರಾಶಿ ದನಗಳು
Tragedy: ದೇವಸ್ಥಾನದಲ್ಲೇ ಕುಸಿದು ಬಿದ್ದು ವ್ಯಕ್ತಿ ಮೃತ್ಯು, CCTVಯಲ್ಲಿ ಸೆರೆಯಾಯ್ತು ದೃಶ್ಯ
Viral Video: ಮದ್ಯ ಸೇವಿಸಿ ನಡುರಸ್ತೆಯಲ್ಲೇ ಮೂತ್ರ ವಿಸರ್ಜಿಸಿದ ಪೊಲೀಸ್ ಪೇದೆ.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.