![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Mar 12, 2022, 5:16 PM IST
Image Source: OpIndia
ತಿರುವನಂತಪುರಂ: ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯದ (ಐಎಸ್‌ಕೆಪಿ) ಸದಸ್ಯ, ಕೇರಳ ಮೂಲದ ಯುವಕ ತನ್ನ ಮದುವೆಯ ದಿನದಂದೇ ಆತ್ಮಾಹುತಿ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಭಯೋತ್ಪಾದಕ ಸಂಘಟನೆಯ ಮುಖವಾಣಿಯಾದ ವಾಯ್ಸ್ ಆಫ್ ಖುರಾಸನ್ ವರದಿ ಮಾಡಿದೆ.
ನಜೀಬ್ ಅಲ್ ಹಿಂದಿ (23) ಎಂಬ ಯುವಕ 2017ರ ಆಗಸ್ಟ್‌ನಲ್ಲಿ ನಾಪತ್ತೆಯಾಗಿದ್ದು, ಐಎಸ್‌ಕೆಪಿ ಸೇರಲು ಅಫ್ಘಾನಿಸ್ಥಾನಕ್ಕೆ ತೆರಳಿದ್ದ ಎಂದು ಶಂಕಿಸಲಾಗಿದೆ.
ಹೆಡ್ ಲೈನ್ಸ್ ಟುಡೇ ವರದಿಯ ಪ್ರಕಾರ, ಐಎಸ್‌ಕೆಪಿ ತನ್ನ ಪ್ರಕಟಣೆಯಲ್ಲಿ ನಜೀಬ್‌ನನ್ನು ಕೇರಳದ 23 ವರ್ಷದ ಎಂಜಿನಿಯರಿಂಗ್ (M.Tech) ವಿದ್ಯಾರ್ಥಿ ಎಂದು ವಿವರಿಸಿದೆ. ಅವರ ಸಾವಿನ ಕಾರಣ ಅಥವಾ ಸಂದರ್ಭಗಳ ಕುರಿತು ಲೇಖನವು ಯಾವುದೇ ಹೆಚ್ಚಿನ ವಿವರಗಳನ್ನು ಒದಗಿಸಿಲ್ಲ.
ನಜೀಬ್ ಸಂಘಟನೆಯ ಸ್ನೇಹಿತರ ಒತ್ತಡಕ್ಕೆ ಮಣಿದು ವಿವಾಹವಾಗಲು ನಿರ್ಧರಿಸಿದ್ದ ಎಂದು ಹೇಳಲಾಗಿದೆ. ಐಎಸ್‌ಕೆಪಿಯೊಂದಿಗೆ ನಂಟು ಹೊಂದಿದ್ದ ಪಾಕಿಸ್ಥಾನಿ ಕುಟುಂಬಕ್ಕೆ ಸೇರಿದ ಹುಡುಗಿಯೊಬ್ಬಳೊಂದಿಗೆ ಮದುವೆಯಾಗಲು ಹೊರಟಿದ್ದ ವೇಳೆಯೇ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
You seem to have an Ad Blocker on.
To continue reading, please turn it off or whitelist Udayavani.