![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 19, 2021, 2:59 PM IST
ಕೊಚ್ಚಿ: ಕಾಫಿ ಶಾಪ್‌ನಿಂದ ಬಂದ ಆದಾಯದಿಂದಲೇ ಪತ್ನಿಯೊಂದಿಗೆ 26 ದೇಶಗಳನ್ನು ಸುತ್ತಿ ಖ್ಯಾತಿ ಹೊಂದಿದ್ದ ಕೇರಳದ 76 ವರ್ಷದ ವಿಜಯನ್ ಅವರು ಶುಕ್ರವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ದಂಪತಿಗಳು 2007 ರಲ್ಲಿ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದರು.ಅವರ ಮೊದಲ ಗಮ್ಯಸ್ಥಾನ ಇಸ್ರೇಲ್ ಆಗಿತ್ತು, ಕಳೆದ ಹಲವಾರು ವರ್ಷಗಳಿಂದ ಅವರು ಬ್ರಿಟನ್, ಫ್ರಾನ್ಸ್, ಆಸ್ಟ್ರಿಯಾ, ಈಜಿಪ್ಟ್, ಯುಎಇ, ಯುಎಸ್ ಮತ್ತು ಹೆಚ್ಚಿನ ದೇಶಗಳಿಗೆ ಪ್ರವಾಸ ಮಾಡಲು ತಮ್ಮ ಕಾಫಿ ಅಂಗಡಿಯಲ್ಲಿನ ಉಳಿತಾಯದ ಹಣವನ್ನೇ ಬಳಸಿಕೊಂಡಿದ್ದರು ಎನ್ನುವುದು ಕುತೂಹಲಕ್ಕೆ ಕಾರಣವಾಗಿತ್ತು.
ಕಳೆದ ತಿಂಗಳು, ವಿಜಯನ್ – ಮೋಹನಾ ದಂಪತಿ ರಷ್ಯಾ ಪ್ರವಾಸ ಕೈಗೊಳ್ಳುವುದಾಗಿ ಪ್ರಕಟಿಸಿದ್ದರು, ಆ ಆಸೆ ವಿಧಿಯ ಆಟದ ಮುಂದೆ ಈಡೇರಿಲ್ಲ.
2019 ರಲ್ಲಿ ದಂಪತಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸವನ್ನು ಮಹೇಂದ್ರ ಗ್ರೂಪ್ ಚೇರ್ಮೆನ್ ಆನಂದ್ ಮಹೇಂದ್ರ ಪ್ರಾಯೋಜಕತ್ವದಲ್ಲಿ ಕೈಗೊಂಡಿದ್ದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.