ಕೇರಳಿಗರಿಗೆ ದೇಶದ ಸಂಸ್ಕೃತಿ ಬಗ್ಗೆ ಗೌರವವಿದೆ
Team Udayavani, Mar 31, 2021, 6:45 AM IST
ಕೇರಳ ಸಾಮಾಜಿಕವಾಗಿ ಮುಂದುವರಿದಿರುವ ರಾಜ್ಯ. ಇಲ್ಲಿ ಎಲ್ಲ ರೀತಿಯ ರಾಜಕೀಯವಾಗಿ ತಿಳಿವಳಿಕೆ ಇರುವ ಜನರಿದ್ದಾರೆ. ಇಲ್ಲಿ ಬಂದು ಕೆಲಸ ಮಾಡುವುದು ಒಳ್ಳೆಯ ಅನುಭವ.
ಇಲ್ಲಿ ನಮ್ಮ ಶಕ್ತಿ ಹೆಚ್ಚಿಸಿಕೊಳ್ಳಲು ಒಳ್ಳೆಯ ಅವಕಾಶ ಇತ್ತು. ಹೀಗಾಗಿ ಎಲ್ಲ ವರ್ಗದ, ಎಲ್ಲ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲ ಧರ್ಮದ ಪ್ರಮುಖರು, ಬಿಷಪ್‌ಗ್ಳನ್ನು, ಸಮಾಜ ಸುಧಾರಣೆಯಲ್ಲಿ ತೊಡಗಿರುವವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ. ನಮ್ಮ ಬಗ್ಗೆ ಹೇಳಿಕೊಳ್ಳುತ್ತಿದ್ದೇವೆ. ಅಲ್ಲದೇ ನಮ್ಮ ಬಗ್ಗೆ ಅವರಿಗೆ ಇರುವ ಅಭಿಪ್ರಾಯ ವನ್ನು ತಿಳಿಯುವ ಪ್ರಯತ್ನ ಮಾಡುತ್ತಿದ್ದೇವೆ.
ಈಗಿರುವ ಎಲ್‌ಡಿಎಫ್ ಸರಕಾರದ ಬಗ್ಗೆ ಯಾರಿಗೂ ಸಮಾಧಾನವಿಲ್ಲ. ಕೇರಳ ಜನರ ಮನಃಸ್ಥಿತಿಗೆ ಈಗಿನ
ಎಲ್‌ಡಿಎಫ್ ಮತ್ತು ಯುಡಿಎಫ್ ಎರಡೂ ಪಕ್ಷಗಳು ಅಪ್ರಸ್ತುತವಾಗಿವೆ. ಇಲ್ಲಿನ ಆರ್ಥಿಕ ತೆಯ ವೇಗಕ್ಕೆ ಅವ ರಿಗೆ ಹೊಂದಾಣಿಕೆ ಆಗುತ್ತಿಲ್ಲ. ಅವರು ಬದಲಾವಣೆ ಬಯಸುತ್ತಿದ್ದಾರೆ.
ಇಲ್ಲಿನ ಸಾಮಾನ್ಯ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಗೌರವ ಇದೆ. ಮುದ್ರಾ ಯೋಜನೆ, ಪ್ರಧಾನಿ ಸಮ್ಮಾನ, ಉಜ್ವಲ ಯೋಜನೆಗಳು, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕೊಡುತ್ತಿರುವ ಆದ್ಯತೆ ಬಗ್ಗೆ ಇಲ್ಲಿನ ಜನರಿಗೆ ಹೆಮ್ಮೆ ಇದೆ. ಕ್ರಿಶ್ಚಿಯನ್ ಸಮುದಾಯದವರು ಪ್ರಧಾನಿ ಬಗ್ಗೆ ಗೌರವ ಹೊಂದಿದ್ದಾರೆ. ಕೊರೊನಾ ಸಂದರ್ಭದಲ್ಲಿ ಮಧ್ಯ ಪ್ರಾಚ್ಯದಲ್ಲಿ ಸಿಲುಕಿಕೊಂಡವರನ್ನು ವಾಪಸ್ ಕರೆತಂದ ಬಗ್ಗೆ ಇಲ್ಲಿನ ಅಲ್ಪಸಂಖ್ಯಾಕರಿಗೆ ಧನ್ಯತಾ ಭಾವ ಇದೆ.
ಭಾಷೆ ಸಮಸ್ಯೆಯಾಗಿಲ್ಲ: ಇಲ್ಲಿನ ತುಂಬಾ ಜನರಿಗೆ ಇಂಗ್ಲಿಷ್ ಭಾಷೆ ಅರ್ಥವಾಗುತ್ತದೆ. ಪ್ರಮುಖರು ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ. ನಮ್ಮ ಭಾವನೆಗಳು, ನಮ್ಮ ಆಸಕ್ತಿ, ಶ್ರದ್ಧೆ, ನಮ್ಮ ಜವಾಬ್ದಾರಿ ಬಗ್ಗೆ ಅವರಿಗೆ ಆಸಕ್ತಿಯಿದೆ. ಇವರು ನಮ್ಮವರಲ್ಲಿ ಒಬ್ಬರು ಎನ್ನುವ ರೀತಿ ಜನರೊಂದಿಗೆ ನಡೆದುಕೊಳ್ಳುವ ಕೆಲಸ ಮಾಡಿದ್ದೇವೆ.
ಜನರೊಂದಿಗೆ ನಮ್ಮ ನಡವಳಿಕೆ, ಸದ್ಯದ ವಿಷಯಗಳನ್ನು ಮಾತನಾ ಡುವ ವಿಚಾರ ಅವರಿಗೆ ಹೆಚ್ಚು ಇಷ್ಟವಾಗುತ್ತದೆ. ನಾನೂ ಅವರೊಳ ಗೊಬ್ಬನಾಗುವ ಪ್ರಯತ್ನ ಮಾಡುತ್ತಿದ್ದೇನೆ. ಶಬರಿಮಲೆಗೆ ಹೋಗುವ ಮೂಲಕ ಅಲ್ಲಿನ ಜನರ ಸಂಸ್ಕೃತಿಯನ್ನು ಗೌರವಿಸಿದೆ.
ಅಲ್ಲಿನ ಜನರ ಜತೆೆಗೆ ಸೇರಿ ಊಟ ಮಾಡುತ್ತ ಅವರೊಂದಿಗೆ ಬೆರೆಯುವ ಕೆಲಸ ಮಾಡುತ್ತಿದ್ದೇನೆ. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುತ್ತಿರುವವರ ಜತೆೆ ಸಂವಾದ ಮಾಡುವ ಮೂಲಕ ಅವರ ಜತೆೆ ಬೆರೆತು ಎಲ್ಲ ಧರ್ಮಗಳ ಸಮಾಜ ಸುಧಾರಕ ರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಶಿಕ್ಷಣ ಸಂಸ್ಥೆಗಳ ಜತೆೆ ಸಂವಾದ, ಸಾಮಾಜಿಕವಾಗಿ ಜನರಿಗೆ ಹತ್ತಿರ ವಾಗುವ ಚುನಾವಣ ಕಾರ್ಯತಂತ್ರವನ್ನು ಹೇಗೆ ಮಾಡಬೇಕೋ ಹಾಗೆ ಸ್ಥಳೀಯ ಕಾಯಕರ್ತರನ್ನು ಬಳಸಿಕೊಂಡು ಮಾಡಿದ್ದೇವೆ.
ಕ್ರಿಶ್ಚಿಯನ್ನರು, ಮುಸ್ಲಿಮರು ಗೌರವ ಇಟ್ಟುಕೊಂಡಿದ್ದಾರೆ: ನಮ್ಮನ್ನು ಬಿಜೆಪಿಯವರು ಅಂತ ಅಲ್ಲಿನ ಕ್ರಿಶ್ಚಿಯನ್ ಸಮುದಾಯ ದೂರ ಏನೂ ಇಟ್ಟಿಲ್ಲ. ನಮ್ಮ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ. ನಾವು ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತೇವೆ. ನಾವು ಯಾರನ್ನೂ ವಿರೋಧ ಮಾಡುವುದಿಲ್ಲ ಎಂದು ಹೇಳುತ್ತೇವೆ. ಅಲ್ಲಿ ಯಾವುದೇ ಧರ್ಮದವರಾದರೂ ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುತ್ತಾರೆ.
ಅಲ್ಲಿನ ಮುಸ್ಲಿಂ ಸಮುದಾಯದವರೂ ನಮ್ಮ ಪಕ್ಷದ ನಾಯಕರ ಜತೆೆ ಸಂಬಂಧ ಇಟ್ಟುಕೊಂಡಿದ್ದಾರೆ. ಅವರೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದೇವೆ. ಚುನಾವಣೆ ಅನಂತರವೂ ಅವರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ಹೋಗುತ್ತೇವೆ. ಚುನಾವಣೆಗಿಂತಲೂ ಅವರಿಗೆ ದೇಶದ ಸಂಸ್ಕೃತಿ ಬಗ್ಗೆ ಗೌರವ ಇದೆ.
ನಾವೆಲ್ಲರೂ ಭಾರತೀಯರು ಅನ್ನುವ ಭಾವನೆ ಅವರಲ್ಲಿದೆ. ಅವರೊಂದಿಗೆ ನಿರಂತರ ಮಾತುಕತೆ ನಡೆಸಿದರೆ ನಮ್ಮೊಂದಿಗೆ ಬೆರೆಯಲು ಬಯಸುತ್ತಾರೆ. ದೊಡ್ಡ ಮಟ್ಟದಲ್ಲಿ ವಿಶ್ವಾಸ ನಂಬಿಕೆ ಮೂಡಿಸುವ ಕೆಲಸವಾಗಬೇಕು. ಅದನ್ನು ನಾವು ಮಾಡುತ್ತಿದ್ದೇವೆ.
ಅಧಿಕಾರಕ್ಕೇರುವ ಗುರಿ: ನನ್ನನ್ನು ಇಲ್ಲಿನ ಜನರು ಒಳ್ಳೆಯ ಮನಸ್ಸಿನಿಂದ ಸ್ವೀಕರಿಸಿದರು. ಮುಂದಿನ ದಿನಗಳಲ್ಲಿ ಅವರೊಂದಿಗೆ ನಿರಂತರ ಸಂಬಂಧ ಇಟ್ಟುಕೊಳ್ಳುವ ಕೆಲಸ ಮಾಡುತ್ತೇನೆ. ಇಲ್ಲಿ ಬಿಜೆಪಿಯ ಬಗ್ಗೆ ಉತ್ತಮ ವಾತಾವರಣ ನಿರ್ಮಾಣ ಆಗಿದೆ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಸಮಾಜ ವಿಂಗಡನೆ ಮಾಡಿ ಹಿಡಿತದಲ್ಲಿ ತೆಗೆದುಕೊಂಡಿದ್ದಾರೆ. ಅವರಿಂದ ಹೊರಗೆ ಬರಲು ಇಲ್ಲಿನ ಜನರು ಬಯಸುತ್ತಿದ್ದಾರೆ.
ಈ ವಿಧಾನಸಭೆ ಚುನಾವಣೆಯಲ್ಲಿ 115 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಎಐಎಡಿಎಂಕೆ, ನಾಡಾರ್ ಕಾಂಗ್ರೆಸ್, ಎಲ್‌ಜೆಪಿ ಸೇರಿ ಸ್ಥಳೀಯ ಪಕ್ಷಗಳ ಜತೆೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಸ್ಥಳೀಯವಾಗಿ ಬಿಜೆಪಿ ಭದ್ರವಾಗಿದೆ. ಪಕ್ಷದ ಕೇಡರ್, ಸಂಘಟನೆ ಅದ್ಭುತವಾಗಿದೆ. ಆದರೆ ಸಮಾಜ ಒಡೆದವರ ಕಪಿಮುಷ್ಠಿಯಿಂದ ಹೊರ ತರಬೇಕಿದೆ. ಆ ಕೆಲಸ ಮಾಡಿದರೆ, ಇನ್ನೂ ಹೆಚ್ಚಿನ ಮಟ್ಟದಲ್ಲಿ ಬಲಗೊಳ್ಳಲು ಅವಕಾಶವಿದೆ.
ಸದ್ಯದ ಪರಿಸ್ಥಿತಿಯಲ್ಲಿ ಎಲ್‌ಡಿಎಫ್, ಯುಡಿಎಫ್ ಹಾಗೂ ಎನ್‌ಡಿಎ ನಡುವೆ ತ್ರಿಕೋನ ಸ್ಪರ್ಧೆ ಇದೆ. ನಾವು ಎನ್‌ಡಿಎ ಸರಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಆ ಮಟ್ಟದಲ್ಲಿ ಇಲ್ಲ ಅಂದರೆ ಬರಿ ಓಟು ಪಡೆಯುವುದರಿಂದ ಏನೂ ಆಗುವುದಿಲ್ಲ. ಸರಕಾರ ಬರುತ್ತೆ ಅಂದರೇನೆ ಮತಗಳು ಬೀಳ್ಳೋದು. ಸರಕಾರ ಬರುವ ವಿಶ್ವಾಸ ಕೂಡ ಇದೆ.
– ಡಾ| ಸಿ.ಎನ್.ಅಶ್ವತ್ಥ ನಾರಾಯಣ, ಕೇರಳ ಬಿಜೆಪಿ ಪ್ರಚಾರ ಉಸ್ತುವಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬುಲ್ಡೋಜರ್ ಅಂದ್ರೆ ಚಪ್ಪಾಳೆ!
ಉ. ಪ್ರದೇಶದ ಬಾಲಿಯಖೇರಿ ಬ್ಲಾಕ್ ನ ಸ್ವೀಪರ್ ಪತ್ನಿಯೇ ಬ್ಲಾಕ್ ನ ಮುಖ್ಯಸ್ಥೆಯಾಗಿ ಅಧಿಕಾರ
ಜೈಲಿನಿಂದಲೇ ನಾಮಪತ್ರ ಸಲ್ಲಿಸಿ, ಚುನಾವಣೆ ಗೆದ್ದ ಅಖೀಲ್ ಗೊಗೊಯ್
ಮೇ 5ರಂದು 3ನೇ ಬಾರಿ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಪ್ರಮಾಣವಚನ ಸ್ವೀಕಾರ
ಇಂತಹ ಹಲವು ಸೋಲನ್ನು ನೋಡಿದ್ದೇನೆ: ಚುನಾವಣಾ ಸೋಲಿನ ಬಳಿಕ ಅಣ್ಣಾಮಲೈ ಪ್ರತಿಕ್ರಿಯೆ
MUST WATCH
ಹೊಸ ಸೇರ್ಪಡೆ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.