ಶೀಘ್ರದಲ್ಲಿ ‘ಕೆಜಿಎಫ್ 3’ ಚಿತ್ರೀಕರಣ ಪ್ರಾರಂಭಿಸುವುದಿಲ್ಲ: ಕಾರ್ಯಕಾರಿ ನಿರ್ಮಾಪಕ
Team Udayavani, May 15, 2022, 7:52 PM IST
ಕೆಜಿಎಫ್ 3, ಚಿತ್ರೀಕರಣ, ಕಾರ್ಯಕಾರಿ ನಿರ್ಮಾಪಕ,
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ”ಕೆಜಿಎಫ್ ಚಾಪ್ಟರ್ 2” ಭಾರಿ ಯಶಸ್ಸಿನ ಬಳಿಕ ಚಾಪ್ಟರ್ 3 ಕುರಿತು ಸುದ್ದಿ ಹೊರ ಬಂದ ಬೆನ್ನಲ್ಲೇ ”ಶೀಘ್ರದಲ್ಲಿ ಚಿತ್ರೀಕರಣ ಪ್ರಾರಂಭಿಸುವುದಿಲ್ಲ” ಎಂದು ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸ್ಪಷ್ಟನೆ ನೀಡಿದ್ದಾರೆ.
”ಹರಿದಾಡುತ್ತಿರುವ ಸುದ್ದಿಗಳೆಲ್ಲ ಊಹಾಪೋಹ. ನಮ್ಮ ಮುಂದೆ ಸಾಕಷ್ಟು ರೋಚಕ ಯೋಜನೆಗಳೊಂದಿಗೆ, ಹೊಂಬಾಳೆ ಫಿಲ್ಮ್ಸ್ ಶೀಘ್ರದಲ್ಲೇ ಕೆಜಿಎಫ್ ಅಧ್ಯಾಯ 3 ಅನ್ನು ಪ್ರಾರಂಭಿಸುವುದಿಲ್ಲ. ಅದರ ಕೆಲಸವನ್ನು ಪ್ರಾರಂಭಿಸಿದಾಗ ನಾವು ಅಬ್ಬರದಿಂದ ನಿಮಗೆ ತಿಳಿಸುತ್ತೇವೆ.” ಎಂದು ಟ್ವೀಟ್ ಮಾಡಿದ್ದಾರೆ.
The news doing the rounds are all speculation. With a lot of exciting projects ahead of us , we @hombalefilms will not be starting #KGF3 anytime soon. We will let you know with a bang when we start the work towards it.
— Karthik Gowda (@Karthik1423) May 14, 2022
ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವು ಸಾವಿರ ಕೋಟಿ ರೂ. ಗಳಿಕೆಯನ್ನು ದಾಟಿದ ಬೆನ್ನಲ್ಲೇ ಮೂರನೇ ಅಧ್ಯಾಯದ ಕುರಿತು ನಿರ್ಮಾಪಕ ವಿಜಯ್ ಕಿರಗಂದೂರು ಮಾಹಿತಿ ಬಹಿರಂಗ ಪಡಿಸಿದ್ದರು. ಚಿತ್ರ 2024 ರಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ದೃಢಪಡಿಸಿದ್ದರು. ಅದಲ್ಲದೆ ಹೊಸ ಪಾತ್ರಗಳೊಂದಿಗೆ “ಮಾರ್ವೆಲ್ ಶೈಲಿಯ” ವಿಶ್ವವನ್ನು ರಚಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದರು.ಆದರೆ ಈಗ ಕಾರ್ಯಕಾರಿ ನಿರ್ಮಾಪಕರ ಹೇಳಿಕೆ ಯು-ಟರ್ನ್ ತೆಗೆದುಕೊಂಡ ಹಾಗೆ ಕಾಣುತ್ತಿದೆ.
ಕೆಜಿಎಫ್ ಅಧ್ಯಾಯ 1 , ಡಿಸೆಂಬರ್ 21 , 2018 ರಲ್ಲಿ ಬಿಡುಗಡೆಯಾಗಿತ್ತು. 250 ಕೋಟಿ ರೂ ಗೂ ಹೆಚ್ಚು ಬಾಕ್ಸ್ ಆಫೀಸ್ ಗಳಿಕೆ ಕಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.