Police: ಪೊಲೀಸರಿಂದ ತಪ್ಪಿಸಿಕೊಳ್ಳಲು ಫ್ರೀಝರ್‌ನೊಳಗೆ ಅವಿತಿದ್ದ ಖದೀಮ ಸಾವು !

Team Udayavani, Jul 11, 2023, 6:04 PM IST

US POLICE CAR

ವಾಷಿಂಗ್ಟನ್‌: ಪೊಲೀಸರಿಂದ ತಪ್ಪಿಸಿಕೊಳ್ಳಲು ಖದೀಮರು ಬೇರೆ ಬೇರೆ ದಾರಿಗಳನ್ನು ಹುಡುಕಿಕೊಳ್ಳುವುದು ಸಹಜವೇ. ಆದರೆ ಇಲ್ಲೊಬ್ಬ ಖದೀಮನಿಗೆ ಪೋಲೀಸರಿಂದ ರಕ್ಷಿಸಿಕೊಳ್ಳಲು ಆತ ಮಾಡಿದ ಯೋಜನೆ ಆತನನ್ನೇ ಬಲಿ ಪಡೆದಿದೆ.

ಬ್ರಾಂಡನ್‌ ಲೀ ಬ್ರುಷ್‌ಮನ್‌ ಎಂಬಾತ ಅಮೇರಿಕದ ಮಿನಸೋಟಾ ಎಂಬಲ್ಲಿನ ಕುಖ್ಯಾತ ಖದೀಮನಾಗಿದ್ದು ಆತನ ಬಂಧನಕ್ಕೆ ವಾರೆಂಟ್‌ ಜಾರಿಯಾಗಿತ್ತು. ಹೀಗಾಗಿ ಪೊಲೀಸರು ಆತನ ಬೆನ್ನು ಬಿದ್ದಿದ್ದರು.

ಜೂ.26 ರಂದು ತನ್ನನ್ನು ಬಂಧಿಸಲು ಬಂದಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು 34 ವರ್ಷದ ಬ್ರಾಂಡನ್‌ ಲೀ ಖಾಲಿ ಮನೆಯೊಂದರಲ್ಲಿದ್ದ ಫ್ರೀಝರ್‌ ಒಳಗೆ ಅವಿತಿದ್ದಾನೆ. ಆದರೆ ಫ್ರೀಝರ್‌ನಿಂದ ಹೊರಬರಲಾರದೆ ಬ್ರಾಂಡನ್‌ ಲೀ ಅದರೊಳಗೆಯೇ ಮೃತಪಟ್ಟಿದ್ದಾನೆ.

ಸುಮಾರು 15 ದಿನಗಳ ಬಳಿಕ ಆತನನ್ನು ಹುಡುಕಾಡುತ್ತಿದ್ದ ಪೊಲೀಸರಿಗೆ ಆತ ಅವಿತುಕೊಳ್ಳಲು ಖಾಲಿ ಮನೆಯೊಳಗೆ ಬಂದ ಮಾಹಿತಿ ಸಿಕ್ಕಿದೆ. ಅದರಂತೆ ಮನೆಯೊಳಗೆ ಹುಡುಕಾಡಿದ ಪೊಲೀಸರು ಫ್ರೀಝರ್‌ನ ಒಳಗೆ ನೋಡಿ ಬೆಚ್ಚಿ ಬಿದ್ದಿದ್ದಾರೆ.!

ಬ್ರಾಂಡನ್‌ ಲೀ ಅವಿತಿದ್ದ ಮನೆಯನ್ನು ಕಳೆದ ಫೆಬ್ರವರಿಯಲ್ಲೇ ಮನೆಯನ್ನು ಖಾಲಿ ಮಾಡಲಾಗಿತ್ತು. ಎಪ್ರಿಲ್‌ ಬಳಿಕ ಮನೆಗೆ ಸಂಬಂಧಪಟ್ಟವರು ಯಾರೂ ಅಲ್ಲಿಗೆ ಬಂದಿರಲಿಲ್ಲ. ಈ ಮನೆಯಲ್ಲಿದ್ದ ಹಳೆಯ ಮಾದರಿಯ ಫ್ರೀಝರ್‌ನಲ್ಲಿ ಬ್ರಾಂಡನ್‌ ಲೀ ಅವಿತಿದ್ದು ಒಳಗಿನಿಂದ ಬಾಗಿಲು ತೆರೆಯುವ ಯಾವ ಆಯ್ಕೆಯೂ ಫ್ರೀಜರ್‌ನಲ್ಲಿ ಇರಲಿಲ್ಲ. ಹೀಗಾಗಿ ಆತ ಅದರಿಂದ ಹೊರಬರಲಾರದೆ ಮೃತಪಟ್ಟಿರಬಹುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಯಾವ ಕಾರಣಕ್ಕೆ ಬ್ರಾಂಡನ್‌ ಲೀ ಬಂಧನಕ್ಕೆ ವಾರೆಂಟ್‌ ಜಾರಿಯಾಗಿತ್ತು ಎಂಬ ಮಾಹಿತಿಯನ್ನು ಪೊಲೀಸರು ಹಂಚಿಕೊಂಡಿಲ್ಲ.

ಇದನ್ನೂ ಓದಿ: ಯುವಕನನ್ನು ನಗ್ನಗೊಳಿಸಿ ಹಲ್ಲೆ: ಐವರನ್ನು ವಶಕ್ಕೆ ಪಡೆದ ಪೊಲೀಸರು; ವಿಡಿಯೋ ವೈರಲ್

ಟಾಪ್ ನ್ಯೂಸ್

5-mng

Mangaluru: ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡುವ ದಿನ ಕಾರ್ಯಕ್ರಮ

Transfer of 23 IAS officers including five District Collectors

IAS transfer; ಐವರು ಜಿಲ್ಲಾಧಿಕಾರಿಗಳು ಸೇರಿ 23 ಐಎಎಸ್ ಅಧಿಕಾರಿಗಳ ವರ್ಗಾವಣೆ

4-punjalkatte

Ajilamogaru: ನೀರು ಪಾಲಾದ ಮೈಕಲ್ ರ ಮೃತದೇಹ ಪತ್ತೆ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ಆಯ್ಕೆ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ನಿಯೋಜನೆ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

2-kushtagi

ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ; ಚಾಲಕ ಸಾವು; ಹಲವು ಪ್ರಯಾಣಿಕರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jaishankar

Border ಅತಿಕ್ರಮಣ ಬೇಡ: ಚೀನಕ್ಕೆ ಭಾರತ ಎಚ್ಚರಿಕೆ

UK Polls: ಬ್ರಿಟನ್‌ ಸಂಸತ್‌ ಚುನಾವಣೆ-ರಿಷಿ ಪಕ್ಷಕ್ಕೆ ಸೋಲು, ಲೇಬರ್‌ ಪಕ್ಷ ಜಯಭೇರಿ?

UK Polls: ಬ್ರಿಟನ್‌ ಸಂಸತ್‌ ಚುನಾವಣೆ-ರಿಷಿ ಪಕ್ಷಕ್ಕೆ ಸೋಲು, ಲೇಬರ್‌ ಪಕ್ಷ ಜಯಭೇರಿ?

Pak ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ: ಇಮ್ರಾನ್‌ ಖುಲಾಸೆ

Pak ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ: ಇಮ್ರಾನ್‌ ಖುಲಾಸೆ

UK Election 2024: ಇಂದು ಬ್ರಿಟನ್‌ನಲ್ಲಿ ಸಂಸತ್‌ ಚುನಾವಣೆ… ನಾಳೆ ಫ‌ಲಿತಾಂಶ

UK Election 2024: ಇಂದು ಬ್ರಿಟನ್‌ನಲ್ಲಿ ಸಂಸತ್‌ ಚುನಾವಣೆ… ನಾಳೆ ಫ‌ಲಿತಾಂಶ

1-sadsad

Italy; ಕೈ ತುಂಡಾದ ಭಾರತೀಯ ಕಾರ್ಮಿಕನನ್ನು ರಸ್ತೆಗೆ ಎಸೆದ ಮಾಲಕ ಅರೆಸ್ಟ್

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Jigar

Jigar; ತೆರೆಗೆ ಬಂತು ಪ್ರವೀಣ್ ತೇಜ್ ನಟನೆಯ ಜಿಗರ್

5-mng

Mangaluru: ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡುವ ದಿನ ಕಾರ್ಯಕ್ರಮ

Transfer of 23 IAS officers including five District Collectors

IAS transfer; ಐವರು ಜಿಲ್ಲಾಧಿಕಾರಿಗಳು ಸೇರಿ 23 ಐಎಎಸ್ ಅಧಿಕಾರಿಗಳ ವರ್ಗಾವಣೆ

4-punjalkatte

Ajilamogaru: ನೀರು ಪಾಲಾದ ಮೈಕಲ್ ರ ಮೃತದೇಹ ಪತ್ತೆ

3-kushtagi

Kushtagi: ಕಳ್ಳರ ಅಟ್ಟಹಾಸಕ್ಕೆ 13 ಶ್ರೀಗಂಧದ ಮರ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.