Hindu ಬಾಲಕಿಯ ಅಪಹರಣ, ಮತಾಂತರ, ಮದುವೆ
ಪೋಷಕರೊಂದಿಗೆ ತೆರಳಲು ಅನುಮತಿ ನೀಡದ ಪಾಕ್ ನ್ಯಾಯಾಲಯ
Team Udayavani, Jun 11, 2023, 7:58 AM IST
ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂಗಳ ಮನೆಗೆ ನುಗ್ಗಿ, ಬಂದೂಕು ತೋರಿಸಿ 14 ವರ್ಷದ ಬಾಲಕಿಯನ್ನು ಅಪಹರಿಸಲಾಯಿತು. ನಂತರ ಆಕೆಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ, ಮುಸ್ಲಿಂ ಪುರುಷನೊಂದಿಗೆ ವಿವಾಹ ಮಾಡಲಾಗಿದೆ. ಬಾಲಕಿಯನ್ನು ಶನಿವಾರ ಬೆನ್‌ಜಿರಾಬಾದ್ ಜಿಲ್ಲಾ ನ್ಯಾಯಾಲಯದ ಎದುರು ಪೊಲೀಸರು ಹಾಜರುಪಡಿಸಿದರು. ತನ್ನ ಪೋಷಕರೊಂದಿಗೆ ತೆರಳುವುದಾಗಿ ಹೇಳಿದರೂ ಕೋರ್ಟ್ ಬಾಲಕಿಗೆ ಅನುಮತಿ ನೀಡಿಲ್ಲ.
ಬೆನ್‌ಜಿರಾಬಾದ್ ಜಿಲ್ಲೆಯ ಮನೆಯಿಂದ ಜೂ.2ರಂದು ಸೊಹನಾ ಶರ್ಮಾ ಕುಮಾರಿ(14)ಯನ್ನು ತಾಯಿಯ ಎದುರೇ ಬಂದೂಕು ತೋರಿಸಿ, ಮನೆಪಾಠ ಮಾಡುತ್ತಿದ್ದ ಶಿಕ್ಷಕ ಮತ್ತು ಆತನ ಸಹಚರರು ಅಪಹರಿಸಿದ್ದರು. ಈ ಕುರಿತು ಬಾಲಕಿಯ ತಂದೆ ದಿಲೀಪ್ ಕುಮಾರ್ ದೂರು ದಾಖಲಿಸಿದ್ದರು. ನಂತರ, ಬಾಲಕಿಯನ್ನು ಇಸ್ಲಾಂಗೆ ಮತಾಂತರಿಸಿ, ವಿವಾಹ ಮಾಡಿದ ವಿಡಿಯೋವನ್ನು ಪೋಷಕರಿಗೆ ಅಪಹರಣಕಾರರು ಕಳುಹಿಸಿದ್ದರು.
ಪೊಲೀಸರು ಪ್ರಕರಣ ಭೇದಿಸಿ, ಬಾಲಕಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆದರೆ ಬಾಲಕಿಯ ಇಚ್ಛೆಯ ವಿರುದ್ಧ ಕೋರ್ಟ್, ಆಕೆಯನ್ನು ಮಹಿಳಾ ಆಶ್ರಯ ತಾಣಕ್ಕೆ ಕಳುಹಿಸಿದೆ. “ಬಾಲಕಿಗೆ ಇನ್ನೂ 14 ವರ್ಷ. ಆದರೆ ಆಕೆಯ ಸಮ್ಮತಿಯಿಂದ ಮದುವೆ ಮಾಡಲಾಗಿದೆ ಎಂದು ಅಧಿಕಾರಿಗಳು ಪ್ರಮಾಣಪತ್ರ ನೀಡಿದ್ದಾರೆ. ಅಪ್ರಾಪ್ತ ವಯಸ್ಸಿನವಳಾದ ಅವಳ ಮದುವೆ ಕಾನೂನು ಬಾಹಿರ,’ ಎಂದು ಬಾಲಕಿಯ ತಂದೆ ಅವಲತ್ತುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.