ಗೋರಖ್‌ಪುರ 63 ಶಿಶುಗಳ ಸಾವಿನ ದುರಂತ : ಡಾ. ಕಫೀಲ್ ಖಾನ್ ವಜಾ
Team Udayavani, Nov 11, 2021, 7:15 PM IST
ಲಕ್ನೋ : 2017ರ ಆಗಸ್ಟ್‌ನಲ್ಲಿ ಉತ್ತರ ಪ್ರದೇಶದ ಗೋರಖ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜಿನಲ್ಲಿ ಆಮ್ಲಜನಕ ಸಿಲಿಂಡರ್‌ಗಳಿಲ್ಲದ ಕಾರಣಕ್ಕೆ 63 ಶಿಶುಗಳು ಅಸುನೀಗಿದ ಪ್ರಕರಣದ ಓರ್ವ ಆರೋಪಿಯಾಗಿರುವ ಡಾ. ಕಫೀಲ್ ಖಾನ್ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಉನ್ನತ ಸರಕಾರಿ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
‘ಆಸ್ಪತ್ರೆಯಲ್ಲಿ ಮಕ್ಕಳ ಸಾವಿಗೆ ಕಾರಣವಾದ ಸಂದರ್ಭಗಳ ತನಿಖೆಯಲ್ಲಿ ಡಾ. ಕಫೀಲ್ ಖಾನ್ ತಪ್ಪಿತಸ್ಥರೆಂದು ಕಂಡುಬಂದ ನಂತರ ಅವರನ್ನು ವಜಾಗೊಳಿಸಲಾಗಿದೆ’ ಎಂದು ಯುಪಿ ವೈದ್ಯಕೀಯ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
‘ಈ ವಿಷಯವು ನ್ಯಾಯಾಲಯದಲ್ಲಿರುವುದರಿಂದ, ಡಾ ಖಾನ್ ಅವರ ವಜಾಗೊಳಿಸಿದ ಬಗ್ಗೆ ವಿವರವಾದ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಲಾಗುವುದು’ ಎಂದು ಕುಮಾರ್ ಹೇಳಿದರು.
ದುರುದ್ದೇಶಪೂರಿತ
ತನ್ನ ವಜಾಗೊಳಿಸಿದ ವರದಿಗಳ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಡಾ ಖಾನ್, ‘ನ್ಯಾಯಾಲಯವು ಈ ಹಿಂದೆ ನನಗೆ ಕ್ಲೀನ್ ಚಿಟ್ ನೀಡಿತ್ತು, ಆದರೂ ನನ್ನನ್ನು ಹೇಗೆ ವಜಾಗೊಳಿಸಲಾಗಿದೆ ಎಂದು ತಿಳಿಯುತ್ತಿಲ್ಲ. ನನ್ನನ್ನು ವಜಾಗೊಳಿಸಲು ಅವರಿಗೆ ಅಧಿಕಾರವಿಲ್ಲ. ಅವರು ಉತ್ತರ ಪ್ರದೇಶ ಲೋಕಸೇವಾ ಆಯೋಗದಿಂದ (ಯುಪಿಎಸ್‌ಸಿ) ನನ್ನನ್ನು ಅಮಾನತುಗೊಳಿಸಲು ಆದೇಶವನ್ನು ತೆಗೆದುಕೊಳ್ಳಬೇಕಾಗಿತ್ತು’ ಎಂದರು.
‘ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಪ್ರಕರಣದಲ್ಲಿ ಅಮಾನತುಗೊಂಡ ಎಂಟು ಜನರ ಪೈಕಿ ನನ್ನನ್ನು ಹೊರತುಪಡಿಸಿ ಇತರ ಏಳು ಜನರ ಅಮಾನತು ರದ್ದುಗೊಳಿಸಲಾಗಿದೆ. ನ್ಯಾಯಾಲಯವು ಅವರೆಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಶಿಕ್ಷೆ ವಿಧಿಸಿದೆ ಆದರೆ ಗೌರವಾನ್ವಿತ ನ್ಯಾಯಾಲಯವು ವೈದ್ಯಕೀಯ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ನನಗೆ ಕ್ಲೀನ್ ಚಿಟ್ ನೀಡಿದೆ, ”ಎಂದು ಡಾ ಖಾನ್ ಹೇಳಿದ್ದಾರೆ.
‘ಬಿಆರ್‌ಡಿ ವೈದ್ಯಕೀಯ ಕಾಲೇಜಿನಿಂದ ನನ್ನನ್ನು ವಜಾಗೊಳಿಸಿರುವ ಕುರಿತು ಪ್ರಧಾನ ಕಾರ್ಯದರ್ಶಿ ಅಲೋಕ್ ಕುಮಾರ್ ಬುಧವಾರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ, ಆದರೆ ಅವರು ಇನ್ನೂ ಯಾವುದೇ ಪತ್ರವನ್ನು ನೀಡಿಲ್ಲ’ ಎಂದು ಡಾ ಖಾನ್ ಹೇಳಿದರು.
‘ನನ್ನನ್ನು ಆಗಸ್ಟ್ 22, 2017 ರಂದು ಅಮಾನತುಗೊಳಿಸಲಾಗಿತ್ತು, ಮಾರ್ಚ್ 5, 2019 ರಂದು, ಅಲಹಾಬಾದ್ ಹೈಕೋರ್ಟ್ ವಿಚಾರಣೆಯನ್ನು ಕೊನೆಗೊಳಿಸುವಂತೆ ಉತ್ತರ ಪ್ರದೇಶ ಸರಕಾರವನ್ನು ಕೇಳಿತ್ತು. ಏಪ್ರಿಲ್ 18, 2019 ರಂದು ಹೈಕೋರ್ಟ್ ನನಗೆ ಕ್ಲೀನ್ ಚಿಟ್ ನೀಡಿತ್ತು’ ಎಂದು ”ಡಾ. ಖಾನ್ ಹೇಳಿದರು.
‘ನಾನು ಜೈಲಿನಲ್ಲಿದ್ದಾಗ, ಸರಕಾರವು ಫೆಬ್ರವರಿ 24, 2020 ರಂದು ಮತ್ತೆ ನನ್ನ ವಿರುದ್ಧ ತನಿಖೆಯನ್ನು ಆರಂಭಿಸಿತು, ಆಗಸ್ಟ್ 6, 2021 ರಂದು, ಅಂದಿನ ಮುಖ್ಯ ಕಾರ್ಯದರ್ಶಿ ಮಾಂಶು ಕುಮಾರ್ ಅವರ ತನಿಖಾ ವರದಿಯನ್ನು ಹಿಂಪಡೆಯುತ್ತಿರುವುದಾಗಿ ನ್ಯಾಯಾಲಯದ ಮುಂದೆ ಘೋಷಿಸಿತ್ತು’ ಎಂದು ಡಾ ಖಾನ್ ಹೇಳಿದರು.
‘ಡಾ.ಖಾನ್ ಅವರನ್ನು ವಜಾಗೊಳಿಸಿದ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರಾ, ಇದು ದುರುದ್ದೇಶಪೂರಿತ ಮತ್ತು ಖಾನ್ ಅವರಿಗೆ ಕಿರುಕುಳ ನೀಡುವ ಉದ್ದೇಶವನ್ನು ಹೊಂದಿದೆ’ಎಂದು ಹೇಳಿದ್ದಾರೆ.
‘ಸಂವಿಧಾನಕ್ಕಿಂತ ಮೇಲಲ್ಲ ಎಂಬುದನ್ನು ಸರಕಾರ ಗಮನದಲ್ಲಿಟ್ಟುಕೊಳ್ಳಬೇಕು. ನ್ಯಾಯಕ್ಕಾಗಿ ಡಾ ಖಾನ್ ಅವರ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷವು ಇರುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
MUST WATCH
ಹೊಸ ಸೇರ್ಪಡೆ
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.