ರಾಣಾ ಬ್ಯಾಟಿಂಗ್ ಪ್ರತಾಪ; ಕೆಕೆಆರ್ ಗೆಲುವಿನ ಆರಂಭ
Team Udayavani, Apr 11, 2021, 11:23 PM IST
ಚೆನ್ನೈ: ನಿತೀಶ್ ರಾಣಾ ಮತ್ತು ರಾಹುಲ್ ತ್ರಿಪಾಠಿ ಅವರ ಬ್ಯಾಟಿಂಗ್ ಸಾಹಸದಿಂದ ಹೈದರಾಬಾದ್‌ಗೆ
ದೊಡ್ಡ ಮೊತ್ತದ ಸವಾಲೊಡ್ಡಿದ ಕೋಲ್ಕತಾ ನೈಟ್‌ರೈಡರ್ ರವಿವಾರದ ಐಪಿಎಲ್ ಮುಖಾಮುಖೀಯಲ್ಲಿ 10 ರನ್ನುಗಳ ರೋಚಕ ಗೆಲುವು ಸಾಧಿಸಿದೆ.
ಕೆಕೆಆರ್ 6 ವಿಕೆಟಿಗೆ 187 ರನ್ ಪೇರಿಸಿದರೆ, ವಾರ್ನರ್ ಪಡೆ 5 ವಿಕೆಟ್ ಉಳಿಸಿಕೊಂಡೂ 177ರ ಗಡಿಯಲ್ಲಿ ನಿಂತಿತು. 10 ರನ್ ಆಗುವಷ್ಟರಲ್ಲಿ ವಾರ್ನರ್ ಮತ್ತು ಸಾಹಾ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ ಬಳಿಕ ಬೇರ್‌ಸ್ಟೊ-ಪಾಂಡೆ ಸೇರಿಕೊಂಡು ಹೋರಾಟವನ್ನು ಜಾರಿಯಲ್ಲಿರಿಸಿದರು. ಪಾಂಡೆ 61 ರನ್ ಮಾಡಿ ಅಜೇಯರಾಗಿ ಉಳಿದರೂ ತಂಡವನ್ನು ದಡ ಸೇರಿಸುವಲ್ಲಿ ವಿಫಲರಾದರು. ಬೇರ್‌ಸ್ಟೊ 55 ರನ್ ಹೊಡೆದರು. ಪ್ರಸಿದ್ಧ್ ಕೃಷ್ಣ 2 ವಿಕೆಟ್ ಕಿತ್ತರು.
ಕೆಕೆಆರ್ ಪರ ಎಡಗೈ ಆಟಗಾರ ರಾಣಾ 56 ಎಸೆತಗಳಿಂದ ಸರ್ವಾಧಿಕ 80 ರನ್ ಬಾರಿಸಿದರು (9 ಬೌಂಡರಿ, 4 ಸಿಕ್ಸರ್). ಎರಡನೇ ವಿಕೆಟಿಗೆ ರಾಣಾ-ತ್ರಿಪಾಠಿ ಜೋಡಿ 50 ಎಸೆತಗಳಿಂದ 93 ರನ್ ಪೇರಿಸಿತು. ತ್ರಿಪಾಠಿ ಗಳಿಕೆ 29 ಎಸೆತಗಳಿಂದ 53 ರನ್ (5 ಫೋರ್, 2 ಸಿಕ್ಸರ್). ಕೊನೆಯ ಹಂತದಲ್ಲಿ ದಿನೇಶ್ ಕಾರ್ತಿಕ್ ಮಿಂಚಿನ ಆಟವಾಡಿ 9 ಎಸೆತಗಳಿಂದ ಅಜೇಯ 22 ರನ್ ಹೊಡೆದರು.
ಸ್ಫೋಟಕ ಆರಂಭ
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕೆಕೆಆರ್‌ಗೆ ರಾಣಾ-ಗಿಲ್ ಸ್ಫೋಟಕ ಆರಂಭ ಒದಗಿಸಿದರು. ಪವರ್ ಪ್ಲೇ ಅವಧಿಯನ್ನು ಸಂಪೂ ರ್ಣವಾಗಿ ತಮ್ಮ ಬ್ಯಾಟಿಂಗಿಗೆ ಬಳಸಿಕೊಂಡ ಈ ಜೋಡಿ 6 ಓವರ್‌ಗಳಲ್ಲಿ ಭರ್ತಿ 50 ರನ್ ಪೇರಿಸಿತು.
ಪವರ್ ಪ್ಲೇ ಮುಗಿದೊಡನೆ ದಾಳಿಗಿಳಿದ ರಶೀದ್ ಖಾನ್ ತಮ್ಮ ಮೊದಲ ಓವರ್‌ನಲ್ಲೇ ಹೈದರಾಬಾದ್‌ಗೆ ಮೊದಲ ಯಶಸ್ಸು ತಂದಿತ್ತರು. ಸ್ಕೋರ್ 53 ರನ್ ಆದಾಗ 15 ರನ್ ಮಾಡಿದ ಗಿಲ್ ಬೌಲ್ಡ್ ಆದರು. ಅನಂತರ ಕ್ರೀಸ್ ಇಳಿದ ರಾಹುಲ್ ತ್ರಿಪಾಠಿ ಕೂಡ ಮುನ್ನುಗ್ಗಿ ಬೀಸತೊಡಗಿದರು.
10 ಓವರ್ ಮುಕ್ತಾಯಕ್ಕೆ ಒಂದಕ್ಕೆ 83 ರನ್ ಬಾರಿಸಿದ ಕೆಕೆಆರ್ ದೊಡ್ಡ ಮೊತ್ತದ ಸೂಚನೆ ನೀಡಿತು. ಆಗ ರಾಣಾ ಅವರ ಅರ್ಧ ಶತಕ ಕೂಡ ಪೂರ್ತಿಗೊಂಡಿತು. ವಿಜಯ್ ಶಂಕರ್ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ರಾಣಾ ಫಿಫ್ಟಿ ಪೂರೈಸಿದರು.
ಸ್ಕೋರ್ ಪಟ್ಟಿ
ಕೋಲ್ಕತಾ ನೈಟ್‌ರೈಡರ್
ನಿತೀಶ್ ರಾಣ ಸಿ ಶಂಕರ್ ಬಿ ನಬಿ 80
ಶುಭಮನ್ ಗಿಲ್ ಬಿ ರಶೀದ್ 15
ರಾಹುಲ್ ತಿಪಾಠಿ ಸಿ ಸಾಹಾ ಬಿ ನಟರಾಜನ್ 53
ಆ್ಯಂಡ್ರೆ ರಸೆಲ್ ಸಿ ಪಾಂಡೆ ಬಿ ರಶೀದ್ 5
ಇಯಾನ್ ಮಾರ್ಗನ್ ಸಿ ಸಮದ್ ಬಿ ನಬಿ 2
ದಿನೇಶ್ ಕಾರ್ತಿಕ್ ಔಟಾಗದೆ 22
ಶಕಿಬ್ ಅಲ್ ಹಸನ್ ಸಿ ಸಮದ್ ಬಿ ಭುವನೇಶ್ವರ್ 3
ಇತರ 7
ಒಟ್ಟು (6 ವಿಕೆಟಿಗೆ) 187
ವಿಕೆಟ್ ಪತನ: 1-53, 2-146, 3-157, 4-160, 5-160, 6-187.
ಬೌಲಿಂಗ್;
ಭುವನೇಶ್ವರ್ ಕುಮಾರ್ 4-0-45-1
ಸಂದೀಪ್ ಶರ್ಮ 3-0-35-0
ಟಿ. ನಟರಾಜನ್ 4-0-37-1
ಮೊಹಮ್ಮದ್ ನಬಿ 4-0-32-2
ರಶೀದ್ ಖಾನ್ 4-0-24-2
ವಿಜಯ್ ಶಂಕರ್ 1-0-14-0
ಹೈದರಾಬಾದ್
ವೃದ್ಧಿಮಾನ್ ಸಾಹಾ ಬಿ ಶಕಿಬ್ 7
ಡೇವಿಡ್ ವಾರ್ನರ್ ಸಿ ಕಾರ್ತಿಕ್ ಬಿ ಪ್ರಸಿದ್ಧ 3
ಮನೀಷ್ ಪಾಂಡೆ ಔಟಾಗದೆ 61
ಜಾನಿ ಬೇರ್‌ಸ್ಟೊ ಸಿ ರಾಣ ಬಿ ಕಮಿನ್ಸ್ 55
ಮೊಹಮ್ಮದ್ ನಬಿ ಸಿ ಮಾರ್ಗನ್ ಬಿ ಪ್ರಸಿದ್ಧ 14
ವಿಜಯ್ ಶಂಕರ್ ಸಿ ಮಾರ್ಗನ್ ಬಿ ರಸೆಲ್ 11
ಅಬ್ದುಲ್ ಸಮದ್ ಔಟಾಗದೆ 19
ಇತರ 7
ಒಟ್ಟು (5 ವಿಕೆಟಿಗೆ) 177
ವಿಕೆಟ್ ಪತನ: 1-10, 2-10, 3-102, 4-131, 5-150
ಬೌಲಿಂಗ್;
ಹರ್ಭಜನ್ ಸಿಂಗ್ 1-0-8-0
ಪ್ರಸಿದ್ಧ ಕೃಷ್ಣ 4-0-35-2
ಶಕಿಬ್ ಅಲ್ ಹಸನ್ 4-0-34-1
ಪಾಟ್ ಕಮಿನ್ಸ್ 4-0-30-1
ಆ್ಯಂಡ್ರೆ ರಸೆಲ್ 3-0-32-1
ವರುಣ್ ಚರ್ಕವರ್ತಿ 4-0-36-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.