“Kohli Restaurant”: “ಕೊಹ್ಲಿ ರೆಸ್ಟೋರೆಂಟ್”ನಲ್ಲಿ ಆರ್‌ಸಿಬಿ ಕ್ರಿಕೆಟಿಗರು
Team Udayavani, Apr 6, 2023, 7:22 AM IST
ಕೋಲ್ಕತಾ: ಆರ್‌ಸಿಬಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಉದ್ಯಮಗಳಲ್ಲಿ ಬಂಡವಾಳ ಹೂಡಿರುವುದು, ಹಲವು ರೆಸ್ಟೋರೆಂಟ್‌ಗಳನ್ನು ಹೊಂದಿರುವುದು ಕೆಲವರಿಗಷ್ಟೇ ಗೊತ್ತು. ಕೊಹ್ಲಿ ಅನೇಕ ರೆಸ್ಟೋರೆಂಟ್‌ಗಳ ಮಾಲಕ. ಮುಂಬಯಿ, ಹೊಸದಿಲ್ಲಿ, ಕೋಲ್ಕತಾ, ಪುಣೆ ಮೊದಲಾದೆಡೆ ಐಷಾರಾಮಿ ಸ್ಟಾರ್ ಹೊಟೇಲ್‌ಗಳನ್ನು ಹೊಂದಿದ್ದಾರೆ.
“ಬಾರ್ ಒನ್8 ಕಮ್ಯೂನ್” ಎಂಬುದು ಕೊಹ್ಲಿ ರೆಸ್ಟೋರೆಂಟ್‌ಗಳ ಬ್ರ್ಯಾಂಡ್‌ನೇಮ್. ಕೋಲ್ಕತಾದಲ್ಲಿ ಇದು 2021ರಲ್ಲಿ ಆರಂಭವಾಗಿತ್ತು. ಕೆಕೆಆರ್ ವಿರುದ್ಧ ಪಂದ್ಯವಾಡಲು ಬಂದಿರುವ ಆರ್‌ಸಿಬಿ ಕ್ರಿಕೆಟಿಗರು ಸ್ವತಃ ವಿರಾಟ್ ಕೊಹ್ಲಿ ಅವರೊಂದಿಗೆ “ಒನ್8 ರೆಸ್ಟೋರೆಂಟ್”ಗೆ ಭೇಟಿ ನೀಡಿ ಪಂದ್ಯ ಹಾಗೂ ಇನ್ನಿತರ ವಿಷಯದ ಕುರಿತು ಚರ್ಚೆ ನಡೆಸಿದರು.
ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿ ಈ ರೆಸ್ಟೋರೆಂಟ್‌ನ ವಿಶೇಷ. ಹಳೆಯ ಕಾಲದ ವಿನ್ಯಾಸ ಹಾಗೂ ಪೀಠೊಪಕರಣಗಳೆಲ್ಲ ಕೋಲ್ಕತಾ ಮಹಾನಗರಿಯ ಗತಕಾಲದ ಚಿತ್ರಣವನ್ನು ಕಣ್ಮುಂದೆ ಅನಾವರಣಗೊಳಿಸುತ್ತದೆ.
ವಿರಾಟ್ ಕೊಹ್ಲಿ ಒಡೆತನದ “ಒನ್8 ರೆಸ್ಟೋರೆಂಟ್”ಗೆ ಆರ್‌ಸಿಬಿಯ ಪ್ರಮುಖ ಕ್ರಿಕೆಟಿಗರಾದ ಫಾ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್ ಮೊದಲಾದವರು ಭೇಟಿ ನೀಡಿದರು.
ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ಆಟಗಾರರು ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ವೇಳೆ ಕ್ರಿಕೆಟ್ ಅಭಿಮಾನಿಗಳು ಹೊರಗಡೆ ಜಮಾಯಿಸಿದ ದೃಶ್ಯ ಕಂಡುಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.