ಕೊಕ್ಕರೆ ಬೆಳ್ಳೂರು ಪಕ್ಷಿಧಾಮದಲ್ಲಿ ಹಕ್ಕಿ ಜ್ವರದ ಆತಂಕ ಬೇಡ
Team Udayavani, Jan 9, 2021, 12:07 PM IST
ಭಾರತೀನಗರ: ಇಲ್ಲಿಗೆ ಸಮೀಪದ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರಿನಲ್ಲಿ ಹೆಜ್ಜಾರ್ಲೆ (ಪೆಲಿಕಾನ್) ಹಕ್ಕಿಗಳ ಸಾವು
ಮತ್ತೆ ಪುನಾರಂಭಗೊಂಡಿದ್ದು ಹಕ್ಕಿಜ್ವರದಿಂದಲೇ ಹೆಜ್ಜಾರ್ಲೆಗಳು ಸಾವನ್ನಪ್ಪಿರುವ ಕುರಿತು ಸ್ಪಷ್ಟವಾಗಿ ಇನ್ನೂ ತಿಳಿದು ಬಂದಿಲ್ಲ. ಈಗಾಗಲೇ ಹಕ್ಕಿಗಳ ಕಳೇಬರವನ್ನು ಪರೀಕ್ಷೆಗೆ ರವಾನಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ.
ಆತಂಕ ಸೃಷ್ಟಿ: ಈಗಾಗಲೇ ಕೊಕ್ಕರೆ ಬೆಳ್ಳೂರಿನ ಪಕ್ಷಿಧಾಮಕ್ಕೆ 120 ಪೆಲಿಕಾನ್ ಹಕ್ಕಿಗಳು ಬಂದಿದ್ದು, ಇವುಗಳು ಈಗಾಗಲೇ
ಮೊಟ್ಟೆ ಇಟ್ಟು ಮರಿಮಾಡಿವೆ. ಆದರೆ, ಮರಿಗಳ ಲೆಕ್ಕ ಇನ್ನೂ ಸಿಕ್ಕಿಲ್ಲ. ಈ ಹಕ್ಕಿಗಳನ್ನು ನೋಡಲು ದೇಶ-ವಿದೇಶಗಳಿಂದ
ಪಕ್ಷಿ ಪ್ರಿಯರು ಆಗಮಿಸುತ್ತಿದ್ದಾರೆ. ಆದರೆ, ಹಕ್ಕಿಗಳ ಸಾವು ಪಕ್ಷಿಪ್ರಿಯರಿಗೆ ಆತಂಕ ಸೃಷ್ಟಿಸಿದೆ.
ಹಕ್ಕಿ ಜ್ವರ ಇಲ್ಲ: ಜಿಲ್ಲಾ ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್ ಪಕ್ಷಿಧಾಮಕ್ಕೆ ಭೇಟಿ ನೀಡಿ ಹಕ್ಕಿ ಜ್ವರದ ಲಕ್ಷಣಗಳ ಬಗ್ಗೆ ಸಾರ್ವಜನಿರಿಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಕೂಳಗೆರೆ ಆರೋಗ್ಯಾಧಿಕಾರಿ ಡಾ.ಸತೀಶ್, ಪಶುವೈದ್ಯಾಧಿಕಾರಿ ಡಾ.ಸತೀಶ್, ಆರೋಗ್ಯ ಇಲಾಖೆ ಸಿಬ್ಬಂದಿ ವಿಜಯ್‌ಕುಮಾರ್, ಶಾಂಭವಿ, ಆಶಾಕಾರ್ಯಕರ್ತೆಯರು, ಹೆಜ್ಜಾರ್ಲೆ ಬಳಗದ ಅಧ್ಯಕ್ಷ ನಿಂಗೇಗೌಡ, ಗ್ರಾಪಂ ಸದಸ್ಯ ಕೆಂಪರಾಜು, ದೇವರಾಜು, ರಾಜಣ್ಣ, ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಡಿವೈಎಸ್ಪಿ ರವಿಶಂಕರ್‌ಗೆ ರಾಷ್ಟ್ರಪತಿ ಪದಕ
ಹಕ್ಕಿಗಳ ಚಲನ-ವಲನಗಳ ವೀಕ್ಷಣೆ: ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ಡಾ.ಆರ್.ಮಂಜುನಾಥ್, ಸಹಾಯಕ ನಿರ್ದೇಶಕರಾದ ಹನುಮೇಗೌಡ, ಮುಖ್ಯ ಪಶುವೈದ್ಯಾಧಿಕಾರಿ ಡಾ.ಕೃಷ್ಣಪ್ಪ, ಡಾ.ಗೋವಿಂದ್ ಅವರು ಹಕ್ಕಿಗಳ ಚಲನ-ವಲನಗಳನ್ನು ವೀಕ್ಷಣೆ ಮಾಡಿದರು. ಹಕ್ಕಿ ಜ್ವರದ ಸೂಕ್ಷ್ಮತೆ ಬಗ್ಗೆಯೂ ಪರೀಕ್ಷಿಸಿದರು. ಯಾವುದೇ ರೀತಿಯ ಜ್ವರದ ಲಕ್ಷಣ ಕಂಡುಬಂದಿಲ್ಲ.
ಜಂತು ಹುಳುಗಳಿಂದ ಹೆಜ್ಜಾರ್ಲೆ ಸಾವು
ಡಿ.26ರ 2020 ರಂದು ಮೃತಪಟ್ಟ ಪೆಲಿಕಾನ್ ಹಕ್ಕಿಯ ಕಳೆ ಬರಹ ಮಾದರಿ ಪರೀಕ್ಷೆಗೆ ಬನ್ನೇರುಘಟ್ಟದ ಪ್ರಯೋಗಾಲಯಕ್ಕೆ
ಕಳುಹಿಸಲಾಗಿತ್ತು. ಪಕ್ಷಿಯ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು ಸಾವಿಗೆ ಜಂತು ಹುಳುಗಳ ಬಾಧೆಯೇ ಕಾರಣ ಎಂದು ವರದಿ ಬಂದಿದೆ. ಜ.1 ಮತ್ತು 5 ರಂದು ಮರಣ ಹೊಂದಿದ ಪೆಲಿಕಾನ್ ಹಕ್ಕಿಗಳ ಅಂಗಾಂಗ ಮಾದರಿಯನ್ನು ಉತ್ತರಪ್ರದೇಶದ
ಐವಿಆರ್‌ಐ (ಇಂಡಿಯನ್ ವೆಟ ರ್ನರಿ ರೀಸರ್ಚ್ ಇನ್ಸ್ ಟಿಟ್ಯೂಟ್) ಸಂಸ್ಥೆಗೆ ಕಳುಹಿಸಿದ್ದು ವರದಿಯ ನಿರೀಕ್ಷೆಯ ಲ್ಲಿದ್ದೇವೆಂದು
ಪಶುವೈದ್ಯಾಧಿಕಾರಿ ಡಾ.ಸತೀಶ್ ತಿಳಿಸಿದರು.
– ಅಣ್ಣೂರು ಸತೀಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.