ಶಾಸಕರ ದತ್ತು ಶಾಲೆಗೆ ಕಟ್ಟಡವೇ ಸುಭದ್ರವಾಗಿಲ್ಲ! ನೂತನ ಸರ್ಕಾರಿ ಪ್ರೌಢಶಾಲೆಯ ಅವ್ಯವಸ್ಥೆ
Team Udayavani, Dec 10, 2020, 12:51 PM IST
ಕೋಲಾರ: ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ ತಾವು ದತ್ತು ಪಡೆದ 3 ಶಾಲೆ ಪೈಕಿ ಜಿಲ್ಲಾ ಕೇಂದ್ರದ ನೂತನ ಸರ್ಕಾರಿ ಪ್ರೌಢಶಾಲೆಗೆ ಕಟ್ಟಡವೇ ಸುಭದ್ರವಾಗಿಲ್ಲ. ಸುಮಾರು 40 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಶಾಲಾಕಟ್ಟಡಕ್ಕೆಈಗಲೂ
ಮೂಲಭೂತ ಸೌಕರ್ಯಗಳಿಲ್ಲ. ವಿಶ್ವೇಶ್ವರಯ್ಯ ಕ್ರೀಡಾಂಗಣ ಹಾಗೂ ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿಯೇ ಶಾಲೆ ಇದ್ದರೂ, ದುರಸ್ತಿಗೆ ಯಾರೂ ಗಮನಹರಿಸಿಲ್ಲ. ಉಸ್ತುವಾರಿ ಸಚಿವರು ಇದೇ ಶಾಲೆ ಮುಂದೆಯೇ ರಾಷ್ಟ್ರೀಯ ಹಬ್ಬಗಳಿಗೆ ಧ್ವಜ ಹಾರಿಸಲು ಹೋದರೂ ಶಾಲೆಯ ಅಧ್ವಾನದ ಪರಿಸ್ಥಿತಿ ಅವಲೋಕಿಸಿಲ್ಲ.
ಕೊಠಡಿ ಶಿಥಿಲ: ಸುಮಾರು 30 ವರ್ಷಗಳಿಂದಲೂ ಶಾಲಾ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿದಿಲ್ಲ. ಇದೇ ಶಿಥಿಲಗೊಂಡಿರುವ ಕಟ್ಟಡದಲ್ಲಿ ಪದವಿ ಪೂರ್ವ ಕಾಲೇಜು ನಡೆಯುತ್ತಿದ್ದು, ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಪ್ರೌಢ ಶಾಲೆಯಲ್ಲಿ 262 ಮಂದಿ ವ್ಯಾಸಂಗ ಮಾಡುತ್ತಿದ್ದು, 4 ಕೊಠಡಿ ಸಂಪೂರ್ಣ ಶಿಥಿಲಗೊಂಡಿದೆ. ನೆಲಹಾಸು ಕಿತ್ತು ಬಂದಿದ್ದು,
ತೇಪೆಗಳನ್ನು ತಾತ್ಕಾಲಿಕವಾಗಿ ಹಾಕಲಾಗಿದೆ. ಮಳೆ ಬಂದರೆ ಸೋರುತ್ತದೆ. ಆಗಾಗ್ಗೆಚಾವಣಿ ಸಿಮೆಂಟ್ ಕುಸಿಯುತ್ತಿರುತ್ತದೆ.
ಕಾರಿಡಾರ್ ಚಾವಣಿಯೂ ಕುಸಿಯುತ್ತಾ ಸಿಮೆಂಟ್ ಕಬ್ಬಿಣದ ಅಸ್ಥಿಪಂಜರ ಕಾಣುವಂತಾಗಿದೆ.
ಇದನ್ನೂ ಓದಿ:ಮತದಾರರಿಗೆ ಆಮಿಷವೊಡ್ಡಿದರೆ ನಿರ್ದಾಕ್ಷಿಣ್ಯಕ್ರಮ : ಜಿಲ್ಲಾಧಿಕಾರಿ ಎಚ್ಚರಿಕೆ
ತಾರಸಿ ಕುಸಿತ ಭೀತಿ: ಕೆಲವೊಮ್ಮೆ ಶಿಕ್ಷಕರ ವಿಶ್ರಾಂತಿ ಕೊಠಡಿಯಲ್ಲಿಯೇ ತಾರಸಿ ಸಿಮೆಂಟ್ ಕುಸಿದು ಬಿದ್ದು, ಶಿಕ್ಷಕಿಯೊಬ್ಬರು ಗಾಯಗೊಂಡ ಘಟನೆಯೂ ಜರುಗಿದೆ. ತರಗತಿಗಳಲ್ಲಿ ಇದೇ ಪರಿಸ್ಥಿತಿ ಇದ್ದು ವಿದ್ಯಾರ್ಥಿಗಳು ಯಾವಾಗ ತಾರಸಿ ಕುಸಿಯುತ್ತದೋ
ಎಂದು ಭೀತಿಯಿಂದಲೇ ಎಚ್ಚರ ವಹಿಸಬೇಕಾಗಿದೆ. ಈ ಕಟ್ಟಡದಲ್ಲಿ ನಡೆಯುವ ಶಾಲಾಕಾಲೇಜಿಗೆವಿದ್ಯಾರ್ಥಿಗಳು ಸುತ್ತಮುತ್ತಲ ಗ್ರಾಮಗಳಿಂದ ಬರು ತ್ತಿದ್ದು, ಬಹುತೇಕಸಾರಿಗೆಸಂಸ್ಥೆಬಸ್‌ಗಳನ್ನೇಅವಲಂಬಿಸಿದ್ದಾರೆ.
ಶಾಲೆಯಲ್ಲಿ ಇಬ್ಬರು ದೈಹಿಕ ಶಿಕಣ ಶಿಕ್ಷಕರಿದ್ದಾರೆ. ಸಿಬ್ಬಂದಿ ವರ್ಗಕ್ಕೆ ಇಬ್ಬರು ಶಿಕ್ಷಕರ ಕೊರತೆ ಇದೆಯಾದರೂ ಸಮಸ್ಯೆ ಇಲ್ಲದಂತೆ ನೋಡಿ ಕೊಳ್ಳಲಾಗುತ್ತಿದೆ.
– ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ
Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.