ದುರಸ್ತಿ ಭಾಗ್ಯ ಕಾಣದ ಕೋಣಿ- ಕೋಟೇಶ್ವರ ರಸ್ತೆ : ಅಲ್ಲಲ್ಲಿ ಹೊಂಡ- ಗುಂಡಿ
Team Udayavani, Mar 28, 2021, 7:07 PM IST
ಬಸ್ರೂರು : ಕುಂದಾಪುರ – ತೀರ್ಥಹಳ್ಳಿ ಹೆದ್ದಾರಿಯ ಕೋಣಿ ಬಳಿಯಿಂದ ಕೋಟೇಶ್ವರಕ್ಕೆ ಸಂಚರಿಸುವ ಒಳ ರಸ್ತೆಯು ಹಲವು ವರ್ಷಗಳಿಂದ ಹದಗೆಟ್ಟಿದ್ದು, ಇನ್ನೂ ದುರಸ್ತಿಗೆ ಕಾಲ ಕೂಡ ಬಂದಿಲ್ಲ. ಅಲ್ಲಲ್ಲಿ ಅನೇಕ ಕಡೆಗಳಲ್ಲಿ ಹೊಂಡ- ಗುಂಡಿಗಳಿದ್ದು, ಸಂಚಾರ ದುಸ್ತರವಾಗಿದೆ.
ಈ ಕೋಣಿ – ಕೋಟೇಶ್ವರ ಸಂಪರ್ಕ ರಸ್ತೆ ಕಿರಿದಾಗಿದ್ದು, ಈ ರಸ್ತೆಯಲ್ಲಿ ಉದ್ದಕ್ಕೂ ಹೊಂಡಗಳೇ ತುಂಬಿದ್ದು ಎದುರಿನಿಂದ ಬೇರೊಂದು ವಾಹನ ಬಂದರೆ ಎಡಕ್ಕೆ ತಿರುಗಿಸಿದರೆ ಇಲ್ಲಿ ಚರಂಡಿಗೆ ಬೀಳುವ ಸಾಧ್ಯತೆ ಇದೆ.
ಈ ರಸ್ತೆಯ ಆರಂಭದಲ್ಲಿ ಸುಮಾರು 150 ಮೀ.ಗಳಷ್ಟೆ ಕೋಣಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುತ್ತದೆ. ಅಲ್ಲಿಂದ ಹಂಗಳೂರು ಗ್ರಾ.ಪಂ. ವ್ಯಾಪ್ತಿ ಆರಂಭ ವಾಗುತ್ತದೆ. ಇಲ್ಲೂ ರಸ್ತೆ ತುಂಬಾ ಹೊಂಡಗಳೇ ತುಂಬಿವೆ. ಈ ರಸ್ತೆಯಲ್ಲಿ ಮುಂದೆ ಹೋದರೆ ಕೋಟೇಶ್ವರ ವ್ಯಾಪ್ತಿ ಆರಂಭವಾಗುತ್ತದೆ.
ಇದನ್ನೂ ಓದಿ :ಚೀನಾ ಸೇನೆಗೆ ಭಾರತ ತಕ್ಕ ಪಾಠ ಕಲಿಸಿದೆ: ಸಂಸದ ತೇಜಸ್ವಿ ಸೂರ್ಯ
ಇದು ಕುಂದಾಪುರ – ತೀರ್ಥಹಳ್ಳಿ ಹೆದ್ದಾರಿಯಿಂದ ಕೋಟೇಶ್ವರ – ಹಾಲಾಡಿ ಜಿಲ್ಲಾ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ.ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದರೂ ಕೋಣಿ – ಕೋಟೇಶ್ವರ ಸಂಪರ್ಕ ರಸ್ತೆಗೆ ದುರಸ್ತಿ ಭಾಗ್ಯ ಬಂದಿಲ್ಲ. ಈ ರಸ್ತೆಯಲ್ಲಿ ಕುಂದಾಪುರಕ್ಕೆ ಹೋಗದೆ ಕೋಟೇಶ್ವರ ಮತ್ತಿತರ ಪ್ರದೇಶಗಳಿಗೆ ಹೋಗಬಹುದಾಗಿದೆ.
ವಿಶೇಷವೆಂದರೆ ಕುಂದಾಪುರ ಅಗ್ನಿಶಾಮಕ ಠಾಣೆಯಿರುವುದೂ ಈ ಕೋಣಿಯ ಇಕ್ಕಟ್ಟಿನ ರಸ್ತೆಗಳ ಮಧ್ಯೆ. ತುರ್ತಾಗಿ ಸಾಗಬೇಕಾದರೆ ಎದುರಿನಿಂದ ಯಾವ ವಾಹನವೂ ಬರಬಾರದು. ದ್ವಿಚಕ್ರ ವಾಹನ ಸವಾರರು ಸೇರಿದಂತೆ ಯಾವುದೇ ವಾಹನವೂ ಈ ರಸ್ತೆಯಲ್ಲಿ ಸರಾಗವಾಗಿ ಸಾಗುವಂತಿಲ್ಲ. ಸಂಬಂಧಪಟ್ಟ ಇಲಾಖೆ ತತ್‌ಕ್ಷಣ ಸರಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.