ಕೊರಟಗೆರೆ ಕುರುಬರ ನಡೆ ಡಾ.ಜಿ.ಪರಮೇಶ್ವರ್ ಕಡೆ; ಜಾಗೃತಿ ಸಮಾವೇಶ

ಪರಮೇಶ್ವರ್ ರವರ ಸೋಲಿಗೆ ಕುರುಬ ಸಮುದಾಯ ಕಾರಣ ಎಂಬ ಕಳಂಕ ಹೋಗಲಾಡಿಸಿ...!

Team Udayavani, Mar 27, 2023, 6:19 PM IST

1-wer3rrewrewr

ಕೊರಟಗೆರೆ: ರಾಜ್ಯದಲ್ಲಿ ಭ್ರಷ್ಟಾಚಾರದೊಂದಿಗೆ ದುರಾಡಳಿತ ನಡೆಸುತ್ತಿರುವ ಹಾಗೂ ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿರುವ ಬಿಜೆಪಿ ಪಕ್ಷದ ಸರ್ಕಾರವನ್ನು 2023 ರ ಚುನಾವಣೆ ಕಿತ್ತೋಗಿಯುವ ಸಂಕಲ್ಪದ ವಿಷೇಶ ಚುನಾವಣೆಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬ ಸಮಾಜ ಹಮ್ಮಿಕೊಂಡಿದ್ದ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಕುರುಬರ ಜಾಗೃತಿ ಸಮಾವೇಶ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ-2022-23 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಜಾತಿ ವ್ಯವಸ್ಥೆಯ ಹೋರಾಟದಲ್ಲಿ ಬಸವಣ್ಣ ನವರು ಮೊದಲಿಗರಾಗಿದ್ದು ಎರಡನೇ ವ್ಯಕ್ತಿ ಕನಕದಾಸರಾಗಿದ್ದಾರೆ, ಕನಕದಾಸರು ಇತಿಹಾಸದಲ್ಲಿ ಅಜೇಯರಾಗಿ ಕುರುಬ ಸಮಾಜಕ್ಕೆ ಸೀಮಿತವಾಗದೆ ಎಲ್ಲಾ ಮನು ಕುಲದ ಅಭಿವೃದ್ದಿಗೆ ಜನಿಸಿದ ವ್ಯಕ್ತಿಯಾದರೆ ಮತ್ತೊಬ್ಬ ಕುರುಬ ಸಮುದಾಯದ ಸಂಗೋಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮರೊಡನೆ ಸ್ವಾತಂತ್ರಕ್ಕಾಗಿ ಹೋರಾಟವನ್ನು ಪ್ರಪ್ರಥಮವಾಗಿ ಪ್ರಾರಂಭಿಸಿದ ವ್ಯಕ್ತಿಯಾಗಿದ್ದು ಕುರುಬ ಸಮುದಾಯ ದೇಶದಲ್ಲಿ ಹಾಲಿನಂತ ಮನಸ್ಸಿರುವ ಹಾಲು ಮತಸ್ಥರು ಎಂದು ಇತಿಹಾಸದಲ್ಲಿ ಬರೆದಿದೆ ಎಂದರು.

ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ೮ ವರ್ಷ ಒಟ್ಟಿಗೆ ಸೌಹಾರ್ಧತೆಯಿಂದ ಕೆಲಸ ಮಾಡಿದ್ದೇನೆ ನನ್ನ ಮತ್ತು ಸಿದ್ದರಾಮಯ್ಯನವರ ಸ್ನೇಹ ಬಹಳ ಉತ್ತಮವಾದ ಸ್ನೇಹ ವಾಗಿದೆ. ನಾವಿಬ್ಬರು ವಿರೋಧಿಗಳು ಎಂಬ ಸುಳ್ಳು ಸುದ್ದಿಯನ್ನು ವಿರೋಧ ಪಕ್ಷದವರು ಸೃಷ್ಟಿಸುತ್ತಿರುವ ಗೊಂದಲವಾಗಿದೆ, ಸಿದ್ದರಾಮಯ್ಯನವರು ರಾಜ್ಯದಲ್ಲಿ ಅಧಿಕಾರ ಸ್ವೀಕರಿಸಿದ ಕೇವಲ ಅರ್ಧ ಗಂಟೆಯಲ್ಲಿ ರಾಜ್ಯದ ಗ್ರಾಮೀಣ ಜನತೆಗೆ ಅನ್ನಭಾಗ್ಯ ಯೋಜನೆ ಅದೇಶ ಮಾಡಿ ಉಚಿತ ಅಕ್ಕಿ ವಿತರಣೆ ಮಾಡಿದ ವ್ಯಕ್ತಿಯಾಗಿದ್ದು ಮತ್ತೆ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು ಅಧಿಕಾರ ಸ್ವೀಕರಿಸಿದ ಒಂದು ತಿಂಗಳಲ್ಲಿ ಅನ್ನಭಾಗ್ಯ ಯೋಜನೆ ಯಲ್ಲಿ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು. ಹಾಗೂ ಇದರೊಂದಿಗೆ ಪ್ರತಿ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂಗಳು, ಪ್ರತಿ ಮನೆಗೆ ೨೦೦ ಯೂನಿಟ್ ವಿದ್ಯುತ್ ಉಚಿತ ಹಾಗೂ ನಿರುದ್ಯೋಗಿ ಪದವಿಧರರಿಗೆ ಪ್ರತಿ ತಿಂಗಳು ೩ ಸಾವಿರ ರೂಗಳು, ಡಿಪ್ಲೊಮ ಪದವಿಧರರಿಗೆ 1500 ನಿರುದ್ಯೋಗಿ ಭತ್ಯೆ ನೀಡಲಾಗುವುದು ಎಂದರು.

ರಾಹುಲ್‌ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ತೆಗೆಯುವ ಮೂಲಕ ಸಂವಿಧಾನದಲ್ಲಿನ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ. ಇಂತ ಸರ್ಕಾರವನ್ನು ಕಿತ್ತೋಗೆಯಲು ಹಾಗೂ ಹಕ್ಕು ರಕ್ಷಣೆಗಾಗಿ ಪ್ರತಿಯೊಬ್ಬರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕೈ ಜೋಡಿಸಿ ಎಂದು ಮನವಿ ಮಾಡಿದರು.

ಕಳೆದ 5 ವರ್ಷಗಳಲ್ಲಿ ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ 2500 ಕೋಟಿ ಹಣ ತಂದಿದ್ದು ರಾಜ್ಯದಲ್ಲಿ ಕೊರಟಗೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರಮಾಡುವ ಕನಸು ನನ್ನದಾಗಿದ್ದು 2023 ರ ವಿಧಾನ ಸಭಾ ಚುನಾವಣೆಯಲ್ಲಿ ನನಗೆ ಮತ್ತೆ ಆಶ್ರೀರ್ವಾದ ಮಾಡುವ ಮೂಲಕ ಸಿದ್ದರಾಮಯ್ಯರೊಂದಿಗೆ ನಾನು ಕೈ ಜೋಡಿಸಲು ಅವಕಾಶ ಮಾಡಿಕೊಡುವ ಮೂಲಕ ಕ್ಷೇತ್ರ ಅಭಿವೃದ್ದಿಗೆ ಸಹಕರಿಸುವಂತೆ ಮನವಿ ಮಾಡಿ, ತಾಲೂಕಿನಲ್ಲಿ ಅಪೂರ್ಣಗೊಂಡ ಸಮುದಾಯ ಭವನ ಪೂರ್ಣಗೊಳಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.

ಕೆಪಿಸಿಸಿ ಕಾರ್ಯದರ್ಶಿ ಹಾಗೂ ಯುವನಾಯಕ ವಿಕೇತ್ ರಾಜ್ ಮೌರ್ಯ ಮಾತನಾಡಿ, ರಾಜ್ಯದಲ್ಲಿ ಕಳೆದ ೨೦೧೩ ರಲ್ಲಿ ಸಿದ್ದರಾಮಯ್ಯನವರು 5 ವರ್ಷಗಳ ಕಾಲ ಸದೃಢ ಸರ್ಕಾರ ನಡೆಸಲು ಮುಖ್ಯ ಕಾರಣಿಕರ್ತರಾದ ಡಾ.ಜಿ.ಪರಮೇಶ್ವರ ರವರನ್ನು ನಾವು ಕುರುಬ ಸಮುದಾಯ ಅಭಿನಂದಿಸಬೇಕು ಮುಂದಿನ 2023 ರ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡುವುದು ಖಚಿತವಾಗಿದ್ದು ಸರ್ಕಾರದಲ್ಲಿ ಡಾ.ಜಿ.ಪರಮೇಶ್ವರ ಉನ್ನತ ಸ್ಥಾನ ಪಡೆಯುವುದು ಖಚಿತವಾಗಿದೆ. ಕೊರಟಗೆರೆ ಅಭಿವೃಧ್ದಿಯಲ್ಲಿ ರಾಜ್ಯದಲ್ಲಿಯೇ ಕೊರಟಗೆರೆ ಮಾದರಿ ಕ್ಷೇತ್ರವಾಗುವುದರಲ್ಲಿ ಅನುಮಾನವಿಲ್ಲ.2012  ರಲ್ಲಿ ಡಾ.ಜಿ.ಪರಮೇಶ್ವರ ರವರ ಸೋಲಿಗೆ ಕುರುಬ ಸಮುದಾಯ ಕಾರಣ ಎಂಬ ಕಳಂಕವಿದ್ದು ಅದನ್ನು ಹೋಗಲಾಡಿಸಲು 2023 ರಲ್ಲಿ ಡಾ.ಜಿ.ಪರಮೇಶ್ವರ ರವರನ್ನು ಅಭೂತ ಪೂರ್ವವಾಗಿ ಗೆಲ್ಲಿಸಬೇಕು ಎಂದರು

ವಿರೋಧ ಪಕ್ಷದವರು ತಮ್ಮ ಭಾಷಣಗಳಲ್ಲಿ ಒಂದೊಂದು ಕಡೆ ಒಂದೊಂದು ರೀತಿ ಭಾಷಣ ಮಾಡುತ್ತಾರೆ ಒಂದು ಕಡೆ ಭಾಷಣದಲ್ಲಿ ಡಾ.ಜಿ.ಪರಮೇಶ್ವರ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ಮತ್ತೊಂದು ಕಡೆ ಭಾಷಣದಲ್ಲಿ ಸಿದ್ದರಾಮಯ್ಯನವರಿಗೂ ಮತ್ತು ಡಾ.ಜಿ.ಪರಮೇಶ್ವರ ರಿಗೂ ಆಗುವುದಿಲ್ಲ ಎಂದು ಎತ್ತಿಕಟ್ಟುತ್ತಿದ್ದಾರೆ ಅದನ್ನು ಯಾರು ಪರಿಗಣಿಸಬಾರದು ಎಂದ ಅವರು ಈ ಬಾರಿ ಚುನಾವಣೆಯಲ್ಲಿ ಕುರುಬರ ನಡೆ ಪರಮೇಶ್ವರ್ ಕಡೆ ಎಂದು ಸಭೆಯಲ್ಲಿ ಎಲ್ಲರೂ ಎರಡೂ ಕೈಗಳನ್ನು ಎತ್ತುವ ಮೂಲಕ ತಮ್ಮ ಬೆಂಬಲ ವಕ್ತ ಪಡಿಸಿದರು.

ಕುರುಬರ ನಡೆ ಡಾ.ಜಿ.ಪರಮೇಶ್ವರ್ ಕಡೆ

2013 ರಲ್ಲಿ ಡಾ.ಜಿ.ಪರಮೇಶ್ವರ ರವರ ಸೋಲಿಗೆ ಕುರುಬ ಸಮುದಾಯ ಕಾರಣ ಎಂಬ ಕಂಳಂಕವಿದ್ದು ಅದನ್ನು ಹೋಗಲಾಡಿಸಲು 2023 ರಲ್ಲಿ ಡಾ.ಜಿ.ಪರಮೇಶ್ವರ ರವರನ್ನು ಅಭೂತ ಪೂರ್ವವಾಗಿ ಕುರುಬ ಸಮಾಜ ಬೆಂಬಲಿಸುವ ಮೂಲಕ ಕಳಂಕವನ್ನು ಹೋಗಲಾಡಿಸಬೇಕಿದೆ ಈ ಬಾರಿ ಚುನಾವಣೆಯಲ್ಲಿ ಕುರುಬರ ನಡೆ ಪರಮೇಶ್ವರ ಕಡೆ ಎಂದು ಕುರುಬ ಜಾಗೃತಿ ಸಭೆಯಲ್ಲಿ ಎಲ್ಲರೂ ಎರಡೂ ಕೈಗಳನ್ನು ಎತ್ತುವ ಮೂಲಕ ಡಾ.ಜಿ.ಪರಮೇಶ್ವರ ರವರಿಗೆ ತಮ್ಮ ಬೆಂಬಲ ವಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಪುರವರ ಮಾಜಿ ಜಿ.ಪಂ.ಸದಸ್ಯ ತಿಮ್ಮಯ್ಯ, ಸುಭಾಷ್ ಪಿಯು ಕಾಲೇಜು ಸಂಸ್ಥಾಪಕ ಗಂಗರಾಜು ಸೇರಿದಂತೆ ಇನ್ನಿತರ ಕುರುಬ ಮುಖಂಡರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಡಾ.ಜಿ.ಪರಮೇಶ್ವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು. ವೇದಿಕೆಯಲ್ಲಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಮೈಲಾರಪ್ಪ, ಕಾಳಿದಾಸ ವಿದ್ಯಾವರ್ಧಕ ಸಂಘದ ನಿದೇರ್ಶಕ ಜಿ.ಡಿ.ನಾಗಭೂಷಣ್, ಯುವ ಮುಖಂಡ ಹಾಗೂ ಪತ್ರಕರ್ತ ರಂಗಧಾಮಯ್ಯ, ಕೆ.ಪಿ.ಸಿ.ಸಿ ಸದಸ್ಯ ಎ.ಡಿ.ಬಲರಾಮಯ್ಯ, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಯುವಕಾಂಗ್ರೆಸ್ ಮುಖಂಡ ಗುರುಪ್ರಸಾದ್, ಬಂದ್ರೇಹಳ್ಳಿ ನಾಗರಾಜು, ಮಧುಗಿರಿ ಎಂ.ಜಿ.ಶ್ರೀನಿವಾಸ್, ಮಾಜಿ ಜಿ.ಪಂ.ಸದಸ್ಯ ಪುರವರ ತಿಮ್ಮಯ್ಯ, ಕುರುಬ ಸಮುದಾಯದ ಮುಖಂಡರುಗಳಾದ ನಾರಾಯಣಪ್ಪ, ದೇವರಾಜು, ಪುರವರ ಕರಿಯಣ್ಣ, ಗಂಗರಾಜು, ಕೆಂಪಣ್ಣ, ಈರಮಲ್ಲಣ್ಣ, ಹೆಚ್.ವೀರಣ್ಣ, ನಿವೃತ್ತ ಮುಖ್ಯಶಿಕ್ಷಕ ಕೆ.ಎಂ.ನಾಗಪ್ಪ, ಕೆಂಪರಂಗಪ್ಪ, ಬೈರವ್, ಲಕ್ಷ್ಮೀಪ್ರಸಾದ್, ಉಮಾಶಂಕರ್, ಚಂದ್ರಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

4-kunigal

Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

14-kunigal

Kunigal: ಟೈರ್ ಸ್ಪೋಟಗೊಂಡು ಕಾರು ಪಲ್ಟಿ: ಐಟಿ ಉದ್ಯೋಗಿ ದುರ್ಮರಣ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.