ಕೊರಟಗೆರೆ: ಹೈಕೋರ್ಟ್ ಮೆಟ್ಟಿಲೇರಿದ ಆರ್ಚಕರ ಜಗಳ
ಭಾರಿ ವಿವಾದ ಸೃಷ್ಟಿ ಮಾಡಿದ್ದ ಕ್ಯಾಮೇನಹಳ್ಳಿ ದೇವಾಲಯದ ಸಂಘರ್ಷ
Team Udayavani, Apr 7, 2022, 11:55 AM IST
ಕೊರಟಗೆರೆ: ಕಳೆದ ಮೂರು- ನಾಲ್ಕು ತಿಂಗಳಿಂದ ಭಾರಿ ವಿವಾದ ಸೃಷ್ಟಿ ಮಾಡಿದ್ದ ಕ್ಯಾಮೇನಹಳ್ಳಿ ದೇವಾಲಯದ ಅರ್ಚಕರ ಮತ್ತು ಸೇವಾ ಸಮಿತಿಯ ಗಲಾಟೆಯ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿ ಮಾಡಿದ ಈ ವಿಷಯವು ಕಮನಿಯ ಕ್ಷೇತ್ರದಿಂದ ರಾಜ್ಯದ ಹೈಕೋರ್ಟ್ ಅಂಗಳಕ್ಕೆ ತಲುಪಿದೆ.
ತಹಶೀಲ್ದಾರ್ ಆಂಜನೇಯ ಸ್ವಾಮಿ ದೇವಾಲಯದ ಕಲ್ಯಾಣ ಮಂಟಪದಲ್ಲಿ ಸೇವಾ ಸಮಿತಿಯ ಸದಸ್ಯರು ಮತ್ತು ಅಧ್ಯಕ್ಷರ ಸಭೆ ಕರೆದು ದೇವಾಲಯದ ಅಭಿವೃದ್ದಿಯ ಸಭೆ ನಡೆಸುತ್ತಿರುವ ವಿಷಯ ಹೊನ್ನಾರನಹಳ್ಳಿ ಮತ್ತು ಅಕ್ಕಾಜಿಹಳ್ಳಿ ಸೇರಿದಂತೆ ಸಾರ್ವಜನಿಕ ವಲಯಕ್ಕೆ ತಿಳಿದು ಕ್ಷಣಾರ್ಧದಲ್ಲಿ ಕಲ್ಯಾಣ ಮಂಟಪದ ಸಮೀಪ ಜಮಾವಣೆಗೊಂಡರು.
ಅರ್ಚಕರನ್ನು ನೇಮಿಸುವ ಸಲುವಾಗಿ ಸಾರ್ವಜನಿಕರು ತಹಶೀಲ್ದಾರ್ ಬಹಿರಂಗವಾಗಿ ಸಭೆ ನಡೆಸಿ ಸಾರ್ವಜನಿಕರ ಸಮಕ್ಷಮದಲ್ಲಿ ಅರ್ಚಕರನ್ನು ನೇಮಿಸುವಂತೆ ಆಗ್ರಹಿಸಿದರು.ತಹಶೀಲ್ದಾರ್ ರವರು ಪ್ರಾಂಗಣದಲ್ಲಿ ಬಹಿರಂಗವಾಗಿಯೇ ಸಭೆ ನಡೆಸಿ ಜನಾಭಿಪ್ರಾಯ ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಹೊನ್ನಾರನಹಳ್ಳಿ ರಾಮಣ್ಣ ಮಾತನಾಡಿ, ಶ್ರೀ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ಹಾಗೂ ಯಾವುದೇ ಸಂದರ್ಭದಲ್ಲೂ ಅಕ್ಕಾಜಿಹಳ್ಳಿ ಹಾಗೂ ಹೊನ್ನಾರನಹಳ್ಳಿಯಿಂದ ಈ ದೇವರಿಗೆ ಸಂಬಂಧಿಸಿದ ಮನೆತನದವರು ದೇವಾಲಯದ ಕಸ ತೆಗೆಯುವುದರಿಂದ ಹಿಡಿದು ರಥೋತ್ಸವ ಕೊನೆಗೊಳ್ಳುವವರೆಗೂ, ಈ ಗ್ರಾಮದವರಿಂದಲೇ ಕಾರ್ಯಕ್ರಮ ನಡೆಯುತ್ತಿರುವ ಪದ್ದತಿಯು ತಲಾತಲಾಂತರ ದಿಂದಲು ನಡೆದುಕೊಂಡು ಬಂದಿದೆ. ಇಂತಹ ಸಂದರ್ಭದಲ್ಲಿ ಕಳೆದ ಐದಾರು ತಿಂಗಳ ಹಿಂದೆ ಸಮಿತಿ ರಚನೆ ಮಾಡುವುದಾಗಿ ಸರ್ಕಾರ ಹೇಳಿ ಕೇವಲ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಮಾತ್ರ ಸಮಿತಿಗೆ ನೇಮಿಸುವಂತೆ ಮಾನ್ಯ ಲೋಕಸಭಾ ಸದಸ್ಯರಾದ ಬಸವರಾಜು ರವರ ಆದೇಶದಂತೆ ಜಿಲ್ಲಾಧಿಕಾರಿ ರವರು ಏಕಪಕ್ಷೀಯವಾಗಿ ಸಮಿತಿ ರಚನೆಮಾಡಿರುತ್ತಾರೆ. ಆದರೆ ಈ ಸಮಿತಿಯವರು ಈ ಎರಡು ಗ್ರಾಮದವರನ್ನು ಕಡೆಗಣಿಸಿ ತಮಗೆ ಬೇಕಾದವರನ್ನು ಸಮಿತಿಗೆ ಸೇರಿಸಿಕೊಂಡು ಅರ್ಚಕರ ವಿಚಾರವಾಗಿ ರಾಜಕೀಯ ಪ್ರೇರಿತವಾಗಿ ಅರ್ಚಕರನ್ನು ವಜಾಗೊಳಿಸಿ ಆ ಜಾಗಕ್ಕೆ ಬೇರೆ ಅರ್ಚಕರನ್ನು ನೇಮಿಸುವಂತೆ ವಿವಾದ ಸೃಷ್ಟಿಸಿ ದೇವಸ್ಥಾನದ ವಿಚಾರವನ್ನು ಹಳ್ಳಿಯಿಂದ ಹೈಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ.ಇಂತಹ ಸಮಿತಿಯು ಈ ದೇವಾಲಯಕ್ಕೆ ಬೇಕಾಗಿಲ್ಲ ಇಷ್ಟೆಲ್ಲ ವಿವಾದಕ್ಕೆ ಕಾರಣ ಮುಜರಾಯಿ ಇಲಾಖೆಯ ಶಿರಸ್ತೆದಾರ್ ಚಿಕ್ಕರಾಜು ರವರು ಇಲಾಖೆಯಲ್ಲಿ ರಾಜಕೀಯವಾಗಿ ವಿವಾದ ಸೃಷ್ಟಿ ಮಾಡಿಸಿ ಸಮಿತಿಯ ಸದಸ್ಯರನ್ನು ಪ್ರಚೋದಿಸುತ್ತಿದ್ದಾರೆ. ಇವರು ಕಛೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿಲ್ಲದೇ , ಭೂಮಾಫಿಯದವರ ಜೊತೆ ಸೇರಿ ರಾಜಕೀಯ ವ್ಯಕ್ತಿಗಳಂತೆ ವರ್ತಿಸುತ್ತಿದ್ದಾರೆ ಆದ್ದರಿಂದ ಇಂತಹ ಅಧಿಕಾರಿಯನ್ನು ವರ್ಗಾಯಿಸುವಂತೆ ಮನವಿ ಪತ್ರ ನೀಡುವ ಮುಖೇನ ಆರೋಪಿಸಿದರು.
ಮಲ್ಲಿಕಾರ್ಜುನ ಮಾತನಾಡಿ ಈ ದೇವಾಲಯಕ್ಕೆ ನಮ್ಮ ಮುತ್ತಾತನ ಕಾಲದಿಂದಲು ನಮ್ಮ ಕುಟುಂಬ ಸೇವೆ ಮಾಡಿಕೊಂಡು ಬಂದಿದೆ. ನಮಗೆ ಯಾವ ವಿಷಯವು ತಿಳಿಸದೇ ಸಮಿತಿ ರಚನೆ ಮಾಡಿರುವುದು ಬಹಳ ನೋವುಂಟು ಮಾಡಿದೆ. ಅಲ್ಲದೇ ಈಗೀರುವ ಕೃಷ್ಣಾಚಾರ್ ಮತ್ತು ರಾಮಾಚಾರ್ ರವರು ಬರುವ ಭಕ್ತಾದಿಗಳಿಗೆ ತಾರತಮ್ಯ ತೋರದೇ ಎಲ್ಲರಿಗಿ ಸಮಾನವಾಗಿ ಅಭಿಷೇಕ ಪೂಜೆ ಸೇರಿದಂತೆ ಸ್ವಾಮಿಯ ದರ್ಶನಕ್ಕೆ ಯಾವುದೇ ವಿಘ್ನಗಳಿಲ್ಲದೇ ಬರುವ ಭಕ್ತಾದಿಗಳೊಂದಿಗೆ ಬಹಳ ವಿನಯಪೂರ್ವಕವಾಗಿ ನಡೆದುಕೊಳ್ಳುತ್ತಿದ್ದಾರೆ. ಹಾಗೂ ಅವರು ಆಗಮ ಮತ್ತು ಆಗಮದ ಪ್ರಕಾರ ದೀಕ್ಷೆ ಪಡೆದು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಅವರನ್ನು ಅರ್ಚಕರ ಹುದ್ದೆಯಿಂದ ತೆಗೆದುಹಾಕಲು ಅವರ ತಪ್ಪುಗಳನ್ನು ತಿಳಿಸದೇ ಅವರನ್ನು ಕೆಲಸದಿಂದ ತೆಗೆದುಹಾಕಲು ರಾಜಕೀಯ ಪಿತೂರಿ ಮಾಡುತ್ತಿದ್ದಾರೆ. ಇವರುಗಳನ್ನು ವಜಾಗೊಳಿಸಿದ್ದೇ ಆದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರವಾದ ಹೋರಾಟ ಮಾಡುವುದಾಗಿ ಇವರ ಜೊತೆಯಲ್ಲಿ ಸಾರ್ವಜನಿಕರು ಒಕ್ಕೊರಲಾಗಿ ಹೇಳಿದರು.
ಇಂದು ನಾವು ದೇವಾಲಯದ ಅಭಿವೃದ್ಧಿ ವಿಚಾರವಾಗಿ ಸಮಿತಿಯೊಂದಿಗೆ ಚರ್ಚಿಸಲು ಸಭೆ ಸೇರಿದ್ದೇವು. ಏಕಾಏಕಿ ಸಾರ್ವಜನಿಕರು ಜಮಾಯಿಸಿ ಅರ್ಚಕರ ವಿಚಾರವಾಗಿ ಚರ್ಚಿಸುವಂತೆ ಕೋರಿದ ಹಿನ್ನೆಲೆ ಅರ್ಚಕರ ವಿಚಾರ ಕೈಗೊಳ್ಳಲಾಯಿತು. ಸಾರ್ವಜನಿಕರು ಈಗಿರುವ ರಾಮಾಚಾರ್ ರವರನ್ನ ಪ್ರಧಾನ ಅರ್ಚಕರನ್ನಾಗಿ ನೇಮಕ ಮಾಡಲು ಮನವಿ ಮಾಡಿದರು. ಅದರಂತೆ ನಾವು ಈ ಹಿಂದಿನ ಕಡತಗಳನ್ನು ಪರಿಶೀಲಿಸಿದಾಗ ಸುಮಾರು ಆರು ತಲೆಮಾರಿನಿಂದ ರಾಮಾಚಾರ್ ರವರ ಪೂರ್ವಜರೇ ಈ ದೇವಾಲಯದ ಪ್ರಧಾನ ಅರ್ಚಕರಾಗಿರುದು ತಿಳಿದುಬಂದಿದೆ. ಇಲ್ಲಿ ನಡೆದ ಎಲ್ಲಾ ವಿಚಾರವನ್ನು ನಾವು ಸಭಾ ನಡವಳಿ ತಯಾರಿಸಿ ಜಿಲ್ಲಾಧಿಕಾರಿಗಳು ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸುತ್ತೇನೆ.
ನಾಹೀದಾ ಜ಼ಮ್ ಜ಼ಮ್ ತಹಶೀಲ್ದಾರ್
ಈ ದೇವಾಲಯಕ್ಕೆ ಮದ್ವಸಾರ ಮತ್ತು ಆಗಮಸಾರ ತಂತ್ರದಲ್ಲಿ ಪೂಜೆ ಸಲ್ಲಿಸಿಸುವ ಅರ್ಚಕರನ್ನು ನೇಮಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರವನ್ನು ಸಲ್ಲಿಸಿದ್ದೆವು. ಅದರಂತೆ ಅರ್ಚಕರನ್ನು ನೇಮಿಸಲು ಸಂಬಂಧ ಪಟ್ಟ ಅಧಿಕಾರಿಗಳು ಕೆಲಸಮಾಡಿರುತ್ತಾರೆ. ಇದರಲ್ಲಿ ನಮ್ಮ ಸಮಿತಿಯ ಯಾವ ರಾಜಕೀಯ ಮಾಡಿಲ್ಲ.
ಬಾಲರಾಜು ,ಸೇವಾ ಸಮಿತಿ ಅಧ್ಯಕ್ಷ. ಕ್ಯಾಮೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.