ಕೃಷ್ಣ ವೆಡ್ಸ್ ಮಿಲನಾ: ಪ್ರೇಮಿಗಳ ದಿನದಂದು ಹಸೆಮಣೆ ಏರಲಿದ್ದಾರೆ “ಲವ್ ಮಾಕ್ಟೇಲ್” ಜೋಡಿ
Team Udayavani, Nov 3, 2020, 7:41 PM IST
“ಲವ್ ಮಾಕ್ಟೇಲ್’ ಸಿನೆಮಾ ಮೂಲಕ ಚಂದನವನದಲ್ಲಿ ಹೆಚ್ಚಿನ ಪ್ರಸಿದ್ಧಿ ಪಡೆದ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಸಿನಿಮಾ ಹಿಟ್ ಆದ ಖುಷಿಯಲ್ಲಿಯೇ ತಾವು ಪ್ರೀತಿ ಮಾಡುತ್ತಿರುವ ವಿಚಾರವನ್ನು ಈ ಸಿನಿಮಾ ರಿಲೀಸ್ ಆದ ಮೇಲೆ ಬಹಿರಂಗಡಿಸಿದ್ದರು. ಈ ವಿಚಾರ ತಿಳಿದ ಕೂಡಲೇ ಇಡೀ ಸ್ಯಾಂಡಲ್‌ವುಡ್ ಇವರ ಪ್ರೀತಿಗೆ ಶುಭ ಹಾರೈಸಿದ್ದರು.
ಅಭಿಮಾನಿಗಳು ಕೂಡ ಈ ತಾರ ಜೋಡಿಯ ಅನ್ಯೂನ್ಯತೆ ನೋಡಿ ಫಿದಾ ಆಗಿದ್ದರು. ಅಲ್ಲದೇ ಅಂದಿನಿಂದ ಈ ಜೋಡಿ ಎಲ್ಲೇ ಹೋದರೂ ಬಂದರೂ, ಯಾವುದೇ ಕಾರ್ಯಕ್ರಮಗಳಿಗೆ ತೆರಳಿದರೂ ಮದುವೆ ಯಾವಾಗ ಎಂಬ ಪ್ರಶ್ನೆಯನ್ನೇ ಕೇಳುತ್ತಿದ್ದರು. ಸಲ್ಲದಕ್ಕೆ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಚರ್ಚೆ ನಡೆದಿದ್ದವು.
ಆದರೆ ತಮ್ಮ ಅಭಿಮಾನಿಗಳ ಕುತೂಹಲಕ್ಕೆ ಬ್ರೇಕ್ ಹಾಕಿರುವ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನಾ ತಮ್ಮ ವಿವಾಹ ದಿನಾಂಕವನ್ನು ಬಹಿರಂಗ ಮಾಡಿದ್ದಾರೆ.
ನಮ್ಮ ಮದುವೆ 14 ಫೆಬ್ರವರಿ 2021, ನಮ್ಮನ್ನು ಆಶೀರ್ವದಿಸಿ
I am happy to announce that, We are getting married on Feb 14th 2021, Bless us pic.twitter.com/Ey3VfIJKr0— darling krishna (@darlingkrishnaa) November 3, 2020
ಕಳೆದ 6 ವರ್ಷಗಳಿಂದ ಪ್ರೀತಿ ಮಾಡುತ್ತಿರುವ ಕೃಷ್ಣ ಹಾಗೂ ಮಿಲನಾ ಯಾವಾಗ ಮದುವೆಯಾಗುತ್ತಾರೆ ಎಂಬ ಪ್ರಶ್ನೆ ಕೆಲವರಿಗೆ ಕಾಡಿತ್ತು. ಇದಕ್ಕೀಗ ಉತ್ತರ ಸಿಕ್ಕಿದೆ. ಮುಂಬರುವ 2021ರ ಫೆಬ್ರವರಿ 14 ಪ್ರೇಮಿಗಳ ದಿನದಂದೇ ಕೃಷ್ಣ ಹಾಗೂ ಮಿಲನಾ ಹಸೆಮಣೆ ಏರಲಿದ್ದಾರಂತೆ. ಈ ಕುರಿತು ಕೃಷ್ಣ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಮಾಹಿತಿ ನೀಡಿದ್ದಾರೆ. ‘ನಮ್ಮ ಮದುವೆ 14 ಫೆಬ್ರವರಿ 2021, ನಮ್ಮನ್ನು ಆಶೀರ್ವದಿಸಿ’ ಎಂದು ಕೃಷ್ಣ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.