ದೇಣಿಗೆ ಕೊಡದೆ ಲೆಕ್ಕ ಕೇಳಲು ಸಿದ್ದರಾಮಯ್ಯ, ಕುಮಾರಸ್ವಾಮಿ ಯಾರು?
Team Udayavani, Feb 18, 2021, 8:55 PM IST
ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿಯವರು ರಾಮ ಮಂದಿರ ನಿರ್ಮಾಣಕ್ಕೆ ಒಂದು ರೂ. ಕೊಡಲಿಲ್ಲ. ದೇಣಿಗೆ ಲೆಕ್ಕ ಕೊಡಿ ಎಂದು ಕೇಳಲು ಕುಮಾರಸ್ವಾಮಿ, ಸಿದ್ದರಾಮಯ್ಯ ಯಾರು? ಎಂದು ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.
ರಾಮಮಂದಿರ ನಿರ್ಮಾಣ, ದೇಣಿಗೆ ಸಂಗ್ರಹ ವಿಚಾರದಲ್ಲಿ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ನಗರದಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, 10 ರೂ. ದೇಣಿಗೆ ನೀಡದ ಇವರು ಲೆಕ್ಕ ಕೇಳಲು ಯಾರು. ದೇಣಿಗೆ ಕೊಟ್ಟವರಿಗೆ ಲೆಕ್ಕ ಕೇಳಲು ಯೋಗ್ಯತೆಯಿದೆ. ದೇಣಿಗೆ ನೀಡದ ಮನೆಗಳಿಗೆ ಗುರುತು ಹಾಕಿದ್ದರೆ ಅದನ್ನು ಎಚ್.ಡಿ. ಕುಮಾರಸ್ವಾಮಿಯವರು ತೋರಿಸಲಿ.
ನಾಲಿಗೆ ಇದೆ ಎಂದು ಏನು ಬೇಕಾದರೂ ಮಾತನಾಡಬಹುದೇ? ಮುಸ್ಲಿಮರು, ಕ್ರೈಸ್ತರೇ ದೇಣಿಗೆ ನೀಡಿದ ಮೇಲೆ ಇವರಿಬ್ಬರಿಗೆ ಏನು ರೋಗ? ಸಿದ್ಧರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗಳು ಅಸಹ್ಯ ಹುಟ್ಟಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ದೇಶದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಮಳಿಗೆ: ಸದಾನಂದ ಗೌಡ
ಗೋಮಾತೆ ಶಾಪದಿಂದ ಸಿದ್ಧರಾಮಯ್ಯ ಅಧಿಕಾರ ಕಳೆದುಕೊಂಡರು. ಈಗ ಕ್ಷೇತ್ರವನ್ನೂ ಕಳೆದುಕೊಂಡು ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ. ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಗಳು. ಇಲ್ಲದಿದ್ದರೆ ನಾನು ಬೇರೆ ಭಾಷೆ ಪ್ರಯೋಗಿಸುತ್ತಿದ್ದೆ. ಕೋತಿಗಳು ಸಹ ಇವರಿಬ್ಬರಂತೆ ಮಾತನಾಡುವುದಿಲ್ಲ ಎಂದು ಕಿಡಿ ಕಾರಿದರು.
ಮೀಸಲಾತಿಗಾಗಿ ಕುರುಬ ಸಮುದಾಯ ನಡೆಸಿದ ಸಮಾವೇಶ ಯಶಸ್ವಿಯಾಗಿರುವುದು ಸಿದ್ದರಾಮಯ್ಯನವರಿಗೆ ಕಿರಿಕಿರಿ ತಂದಿದೆ. ಸಮಾವೇಶಕ್ಕೆ ಲಕ್ಷ ಲಕ್ಷ ಜನ ಬಂದಿದ್ದರು. ಸಮುದಾಯದ ಸ್ವಾಮೀಜಿಗಳು ಹೋಗಿ ಕರೆದರೂ ಹೋರಾಟ, ಸಮಾವೇಶಕ್ಕೆ ಸಿದ್ದರಾಮಯ್ಯ ಬರಲಿಲ್ಲ. ಇದು ನನಗೆ ನೋವು ತಂದಿದೆ. ಮಾಧ್ಯಮಗಳಲ್ಲಿ ಪಾದಯಾತ್ರೆ ನೋಡಿ, ಕುರುಬ ಸುನಾಮಿಯನ್ನು ಕಂಡು ಸಿದ್ದರಾಮಯ್ಯ ಗಾಬರಿಯಾದರು ಎಂದು ತಿರುಗೇಟು ನೀಡಿದರು.
ಎಚ್.ಡಿ. ಕುಮಾರಸ್ವಾಮಿಯವರ ಆಟಕ್ಕೆ ಅವರ ತಂದೆ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ಸಿದ್ದರಾಮಯ್ಯನವರ ಮಾತನ್ನು ಕಾಂಗ್ರೆಸ್‌ನವರೇ ಒಪ್ಪುವುದಿಲ್ಲ. ಮತ್ತೆ ಅವರ ಸರ್ಕಾರ ಅಧಿಕಾರಕ್ಕೆ ಬರದಿರುವುದಕ್ಕೆ ಧರ್ಮ ವಿರೋಧಿ ಚಟುವಟಿಕೆ, ರಾಷ್ಟ್ರ ವಿರೋಧಿ ನಡವಳಿಕೆಯೇ ಕಾರಣ ಎಂದು ದೂರಿದರು.
ಇದನ್ನೂ ಓದಿ:ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ : ರಾಮಕೃಷ್ಣನ ಸಾವಿಗೆ ನಟ ಯಶ್ ಸಂತಾಪ
ನನಗೆ ಸಿದ್ದರಾಮಯ್ಯನವರು ಆಡಿದ ಮಾತಿನಿಂದ ನೋವಾಗಿದೆ. ಈಗ ಸಿದ್ದರಾಮಯ್ಯ ಕುರುಬ ಸಮಾವೇಶ ಮಾಡುವುದಕ್ಕೆ ನನ್ನ ಅಭ್ಯಂತರ ಇಲ್ಲ. ಆದರೆ ರಾಜಕಾರಣ ಮಾಡುವುದನ್ನು ಒಪ್ಪುವುದಿಲ್ಲ. ಕಾಗಿನೆಲೆ ಸ್ವಾಮೀಜಿಗಳು ಅವರ ಮನೆಗೆ ಹೋದಾಗ ತಮ್ಮ ಬೆಂಬಲವಿದೆ ಎಂದಿದ್ದ ಸಿದ್ದರಾಮಯ್ಯ ಅವರು ನಂತರ ಆರ್‌ಎಸ್‌ಎಸ್ ಹಣ ಪಡೆದಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯನವರ ಈ ಸ್ವಭಾವ ಒಳ್ಳೆಯದಲ್ಲ. 70 ವರ್ಷ ಕಾಂಗ್ರೆಸ್ ಇತ್ತಲ್ಲ, ಆಗ ಮಂಡಕ್ಕಿ ತಿನ್ನುತ್ತಿದ್ದರೆ?
ಎಚ್.ಡಿ.ದೇವೇಗೌಡರ ಅಧಿಕಾರಾವಧಿಯಲ್ಲಿ ಸಿದ್ದರಾಮಯ್ಯನವರು ಸಚಿವರಾಗಿದ್ದಾಗ ಏಕೆ ಮಾಡಲಿಲ್ಲ. ತಾನೇ ಹಿಂದುಳಿದ ವರ್ಗಗಳ ಚಾಂಪಿಯನ್, ದಲಿತ ಚಾಂಪಿಯನ್ ಎನ್ನುವ ಸಿದ್ದರಾಮಯ್ಯನವರು ಈಗ ಬರೀ ವೋಟಿಗಾಗಿ ಚಾಂಪಿಯನ್ನಾ ಎಂದು ಪ್ರಶ್ನಿಸಿದರು.
ಮೀಸಲಾತಿಗಾಗಿ ನಾನಾ ಸಮುದಾಯಗಳು ನಡೆಸುತ್ತಿರುವ ಹೋರಾಟವನ್ನು ನಾನು ಸ್ವಾಗತಿಸುತ್ತೇನೆ. ಅರ್ಹತೆಯಿರುವ ಸಮುದಾಯಗಳಿಗೆ ಮೀಸಲಾತಿ ಸಿಗಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಇದನ್ನೂ ಓದಿ:ಉದ್ಯಮಿಗಳ ಮನೆ ಬಾಗಿಲಿಗೆ ಸರ್ಕಾರ, ಜನಸ್ನೇಹಿ ಇಲಾಖೆಗೆ ಮೊದಲ ಆದ್ಯತೆ : ಸಚಿವ ನಿರಾಣಿ ಘೋಷಣೆ
ರಾಜ್ಯದಲ್ಲಿ ಮೀಸಲಾತಿಗಾಗಿ ಹೋರಾಟಗಳು ನಡೆಯುತ್ತಿರೋದು ಒಳ್ಳೆಯದು. ಕುಗ್ಗಿ ಹೋಗಿರುವ ದನಿಗಳಿಗೆ ಮೀಸಲಾತಿ ಅಗತ್ಯವಿದೆ. ಕುಲಶಾಸ್ತ್ರೀಯ ಅಧ್ಯಯನ, ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಪರಿಶೀಲಿಸಿ ಮುಖ್ಯಮಂತ್ರಿಗಳು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.