KSRTC ಟಿಕೆಟ್ ಪರೀಕ್ಷಕರಿಗೆ ಬಾಡಿ ಕೆಮರಾ ! ಮಂಗಳೂರು, ಪುತ್ತೂರು ವಿಭಾಗಕ್ಕೂ ವಿಸ್ತರಣೆ
Team Udayavani, Mar 8, 2021, 5:50 AM IST
ಮಹಾನಗರ: ಬಸ್‌ಗಳಲ್ಲಿ ಟಿಕೆಟ್ ನೀಡುವ ವಿಚಾರದಲ್ಲಿ ಆಗಾಗ ಉಂಟಾಗುವ ಗೊಂದಲವನ್ನು ಸರಿಪಡಿಸಿ ಪಾರದರ್ಶಕ ಸ್ಥಿತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಟಿಕೆಟ್ ಪರೀಕ್ಷಕರಿಗೆ (ಟಿಕೆಟ್ ಚೆಕ್ಕಿಂಗ್ ಮಾಡುವವರು) ಬಾಡಿ ಕೆಮರಾ ಅಳವಡಿಸಲು ಕೆಎಸ್ಸಾರ್ಟಿಸಿ ಮುಂದಾಗಿದೆ. ಇದೀಗ ಈ ನೂತನ ಯೋಜನೆ ಮಂಗಳೂರು ಮತ್ತು ಪುತ್ತೂರು ವಿಭಾಗಕ್ಕೂ ವಿಸ್ತರಣೆಗೊಂಡಿದೆ.
ಟಿಕೆಟ್ ನೀಡುವ ವಿಚಾರದಲ್ಲಿ ಕೆಲವರಲ್ಲಿ ಗೊಂದಲವಿತ್ತು. ಇದು ಕೆಲವು ಬಾರಿ ವಾಗ್ವಾದಕ್ಕೂ ಕಾರಣವಾಗುತ್ತಿತ್ತು. ಟಿಕೆಟ್ ಪರಿಶೀಲಿಸುವವರು ಸರಿ ಯಾಗಿ ತಪಾಸಣೆ ನಡೆಸುತ್ತಿಲ್ಲ,ವಿನಾ ಕಾರಣ ನಿರ್ವಾಹಕರ ವಿರುದ್ಧ ದೂರು ದಾಖಲಾಗುತ್ತದೆ. ನಿರ್ವಾಹಕರು ಪ್ರಯಾಣಿಕರಿಗೆ ಕೆಲವು ಸಂದರ್ಭದಲ್ಲಿ ಟಿಕೆಟ್ ನೀಡುವುದಿಲ್ಲ ಇತ್ಯಾದಿ ಆರೋ ಪಗಳು ಬರುತ್ತಿತ್ತು. ಇದು ಕೆಎಸ್ಸಾರ್ಟಿಸಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು. ಇದನ್ನು ಹೋಗಲಾಡಿಸಲು ಇದೀಗ ನಿಗಮ ಹೊಸ ತಂತ್ರವನ್ನು ಅಳವಡಿಸುತ್ತಿದೆ.
ನಿರ್ವಾಹಕರು ಮತ್ತು ಪ್ರಯಾ ಣಿಕರೊಂದಿಗೆ ಪಾರದರ್ಶಕ ಸ್ಥಿತಿ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಟಿಕೆಟ್ ಚೆಕ್ಕಿಂಗ್ ಮಾಡುವವರು ಇನ್ನು ಮುಂದೆ ಬಾಡಿ ಕೆಮರಾ ಅಳವಡಿಸಬೇಕಾಗುತ್ತದೆ. ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 10 ಮಂದಿ ಟಿಕೆಟ್ ಪರೀಕ್ಷಕರಿದ್ದಾರೆ. ಅವರಿಗೆ ಬಾಡಿ ಕೆಮರಾಗಳು ಈಗಾಗಲೇ ಮಂಜೂರಾಗಿದ್ದು, ತಾಂತ್ರಿಕ ಸಮಸ್ಯೆ ಯಿಂದ 2 ಬಾಡಿ ಕೆಮರಾಗಳು ಕಾರ್ಯ ನಿರ್ವಹಿಸುತ್ತಿದೆ. ಪುತ್ತೂರು ವಿಭಾಗದಲ್ಲಿ 5 ಮಂದಿಗೆ ಬಾಡಿ ಕೆಮರಾ ನೀಡಲಾಗಿದೆ.
ಅಳವಡಿಕೆ ಹೇಗೆ?
ಟಿಕೆಟ್ ಪರೀಕ್ಷಕರಿಗೆ ಬಸ್‌ಗಳಲ್ಲಿ ಟಿಕೆಟ್ ತಪಾಸಣೆ ಮಾಡುವಾಗ ತಮ್ಮ ಅಂಗಿಯ ಜೇಬಿಗೆ ಬಾಡಿ ಕೆಮರಾ ವನ್ನು ಅಳವಡಿಸಲಾಗುತ್ತದೆ. ಟಿಕೆಟ್ ತಪಾಸಣೆ ಮಾಡಿದ ಬಳಿಕ ಬಸ್‌ನಿಂದ ಇಳಿದಾಗ ಆ ಕೆಮರಾವನ್ನು ಆಫ್ ಮಾಡಲಾಗುತ್ತದೆ. ಅವರು ಬಸ್‌ನೊಳಗೆ ತಪಾಸಣೆ ನಡೆಸಿದ ಎಲ್ಲ ವಿಚಾರಗಳು ಆ ಕೆಮರಾದಲ್ಲಿ ರೆಕಾರ್ಡ್ ಆಗುತ್ತದೆ. ಅಧಿಕಾರಿಗಳು ಹೇಳುವಂತೆ ಸುಮಾರು ಒಂದು ತಿಂಗಳವರೆಗೆ ಈ ರೆಕಾರ್ಡ್ ಅನ್ನು ಸ್ಟೋರೇಜ್ ಮಾಡಲಾಗುತ್ತದೆ. ಟಿಕೆಟ್ ತಪಾಸಣೆಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದರೆ ಮೇಲಧಿಕಾರಿಗಳು ಈ ರೆಕಾರ್ಡ್ ಅನ್ನು ಪರಿಶೀಲನೆ ಮಾಡುತ್ತಾರೆ.
ಬಿಎಂಟಿಸಿ ಯಲ್ಲಿ ಮೊದಲ ಪ್ರಯೋಗ
ಟಿಕೆಟ್ ತಪಾಸಣ ಅಧಿಕಾರಿಗಳಿಗೆ ಬಾಡಿ ಕೆಮರಾಗಳನ್ನುಈ ಹಿಂದೆಯೇ ಬಿಎಂಟಿಸಿಯಲ್ಲಿ ಅಳವಡಿಸಲಾಗಿದೆ. ಮಾರ್ಗ ತಪಾಸಣೆ ವೇಳೆ ಅಧಿಕಾರಿಗಳು, ನಿರ್ವಾಹಕರ ನಡುವೆ ವಾಗ್ವಾದಗಳು, ಜಗಳಗಳು ನಡೆಯುತ್ತಿತ್ತು. ಇದನ್ನು ಕೊನೆಗಾಣಿಸುವ ಉದ್ದೇಶದಿಂದ ತಪಾಸಣೆ ಅಧಿಕಾರಿಗಳಿಗೆ ಬಾಡಿ ಕೆಮರಾ ನೀಡಲು ನಿರ್ಧರಿಸಲಾಗಿತ್ತು. ಮೊದಲ ಹಂತದಲ್ಲಿ ಸುಮಾರು 80 ಬಾಡಿ ಕೆಮರಾ ಖರೀದಿಸಲು ನಿರ್ಧರಿಸಲಾಗಿತ್ತು. ಬಳಿಕ ಈಗಾಗಲೇ ಕೆಎಸ್ಸಾರ್ಟಿಸಿ, ಈಶಾನ್ಯ, ವಾಯವ್ಯ, ಕರ್ನಾಟಕ ಸಾರಿಗೆಯಲ್ಲಿಯೂ ಅಳವಡಿಸಲಾಗುತ್ತಿದೆ.
ಪೂರ್ಣಮಟ್ಟದಲ್ಲಿ ಅಳವಡಿಕೆ
ಟಿಕೆಟ್ ತಪಾಸಣೆಯ ವೇಳೆ ಪಾರದರ್ಶ ಕತೆ ಕಾಪಾಡುವ ಉದ್ದೇಶದಿಂದ ಈಗಾಗಲೇ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗಕ್ಕೆ 10 ಬಾಡಿ ಕೆಮರಾಗಳು ಬಂದಿವೆ. ಅದರಲ್ಲಿ ಸದ್ಯ 2 ಕೆಮರಾಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸದ್ಯದಲ್ಲಿಯೇ ಪೂರ್ಣಮಟ್ಟದಲ್ಲಿ ಈ ಉಪಕ್ರಮ ಅಳವಡಿಸಲಾಗುತ್ತದೆ.
– ಕಮಲ್ ಕುಮಾರ್, ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.