ಕುಕ್ಕೆ ಸುಬ್ರಹ್ಮಣ್ಯ : ವಾರ್ಷಿಕ ಆದಾಯ 68.94 ಕೋ.ರೂ. : ಕಳೆದ ಬಾರಿಗಿಂತ 29 ಕೋ.ರೂ. ಕಡಿಮೆ


Team Udayavani, Apr 18, 2021, 6:40 AM IST

ಕುಕ್ಕೆ ಸುಬ್ರಹ್ಮಣ್ಯ : ವಾರ್ಷಿಕ ಆದಾಯ 68.94 ಕೋ.ರೂ. : ಕಳೆದ ಬಾರಿಗಿಂತ 29 ಕೋ.ರೂ. ಕಡಿಮೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು 2020 ಎಪ್ರಿಲ್‌ನಿಂದ 2021 ಮಾರ್ಚ್‌ 31ರ ತನಕದ ಆರ್ಥಿಕ ವರ್ಷದಲ್ಲಿ 68,94,88,039.17 ರೂ. ಆದಾಯ ಗಳಿಸಿದೆ.

ಕಳೆದ ವರ್ಷ ಮಾ. 17ರಿಂದ ಸೆ. 8ರ ತನಕ ದೇವಸ್ಥಾನವು ಲಾಕ್ ಡೌನ್‌ ಹಿನ್ನೆಲೆಯಲ್ಲಿ ಸಂಪೂರ್ಣ ಬಂದ್‌ ಆಗಿತ್ತು. ಈ 6 ತಿಂಗಳ ಅವಧಿಯಲ್ಲಿ ಶ್ರೀ ದೇವಳಕ್ಕೆ ಯಾವುದೇ ಆದಾಯ ಇರಲಿಲ್ಲ. ಬಳಿಕ ಸೆ. 15ರಿಂದ ಮಾ. 31ರ ತನಕ ಶ್ರೀ ದೇವಳಕ್ಕೆ ಬಂದ ಆದಾಯ ಇದಾಗಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.

2019-20ನೇ ಆರ್ಥಿಕ ವರ್ಷದಲ್ಲಿ 98,92,24,193.34 ರೂ. ಆದಾಯ ಗಳಿಸಿತ್ತು. ಕೊರೊನಾ ಕಾರಣ ಕಳೆದ ವರ್ಷಕ್ಕಿಂತ ಈ ಬಾರಿ 29,97,36,154.17 ರೂ. ಕಡಿಮೆ ಆದಾಯ ಬಂದಿದೆ ಎಂದರು.

ಆದಾಯ
ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯವು ಬರುತ್ತದೆ. ಗುತ್ತಿಗೆಗಳಿಂದ 72,35,331 ರೂ., ತೋಟದ ಉತ್ಪನ್ನದಿಂದ 15,64,681 ರೂ., ಕಟ್ಟಡ ಬಾಡಿಗೆಯಿಂದ 37,11,409ರೂ, ಕಾಣಿಕೆಯಿಂದ 3,34,69,717 ರೂ., ಕಾಣಿಕೆ ಹುಂಡಿಯಿಂದ 12,75,11,301 ರೂ., ಹರಕೆ ಸೇವೆಗಳಿಂದ 24,10,63,401 ರೂ., ಅನುದಾನದಿಂದ 80,196 ರೂ., ಹೂಡಿಕೆಯಿಂದ ಬಂದ ಬಡ್ಡಿ 20,49,00,424 ರೂ., ಉಳಿತಾಯ ಖಾತೆ ಮತ್ತು ಇತರ ಖಾತೆಗಳಿಂದ ಬಂದ ಬಡ್ಡಿ 36,72,645 ರೂ., ಸಂಕೀರ್ಣ ಜಮೆಗಳಿಂದ 2,63,07,139 ರೂ., ಅನ್ನಸಂತರ್ಪಣೆ ನಿಧಿಯಿಂದ 3,54,61,982 ರೂ., ಅಭಿವೃದ್ಧಿ ನಿಧಿ 9,20,908 ರೂ., ಶಾಶ್ವತ ಸೇವಾ ಮೂಲಧನ 35,88,900 ರೂ. ಹೀಗೆ ಒಟ್ಟು 68 ಕೋಟಿ 94 ಲಕ್ಷದ 88 ಸಾವಿರದ 039.17 ರೂ. ಆದಾಯ ದೇವಸ್ಥಾನಕ್ಕೆ ಬಂದಿದೆ.

ಭಕ್ತರ ಅನುಕೂಲತೆಗೆ ಆದ್ಯತೆ
ನಿತ್ಯವೂ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ಭಕ್ತರ ಅನುಕೂಲಕ್ಕಾಗಿ ಸುಮಾರು 180 ಕೋಟಿ ರೂ. ವೆಚ್ಚದಲ್ಲಿ ಮಾಸ್ಟರ್‌ ಪ್ಲಾನ್‌ ಯೋಜನೆಯ ಹಲವಾರು ಕಾಮಗಾರಿಗಳು ನಡೆಯುತ್ತಿವೆ. ಭಕ್ತರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ, ಶ್ರೀ ಕ್ಷೇತ್ರದಲ್ಲಿ ಸಾಕಷ್ಟು ವಸತಿಗೃಹಗಳ ನಿರ್ಮಾಣ, ಶೌಚಾಲಯಗಳ ನಿರ್ಮಾಣ, ಸಮಗ್ರ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಹಾಗೂ ಕ್ಷೇತ್ರದ ವ್ಯಾಪ್ತಿಯಲ್ಲಿರುವ ರಸ್ತೆಗಳ ವಿಸ್ತರಣೆ ಮುಂತಾದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ತಿಳಿಸಿದರು.

ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ವನಜಾ ವಿ. ಭಟ್‌ ಸುಬ್ರಮಣ್ಯ, ಶೋಭಾ ಗಿರಿಧರ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

2(1

Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್‌ ಆಕರ್ಷಣೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.