ಕಾಂಗ್ರೆಸ್ ಕೊಟ್ಟ ಸಿಎಂ ಹುದ್ದೆ ಉಳಿಸಿಕೊಳ್ಳದ ಕುಮಾರಸ್ವಾಮಿ: ಎಂ.ಲಕ್ಷ್ಮಣ್ ಲೇವಡಿ
ಕಾಂಗ್ರೆಸ್ ಒಕ್ಕಲಿಗರನ್ನು ಮುಖ್ಯಮಂತ್ರಿ ಮಾಡಿದೆ... ಜೆಡಿಎಸ್ 21 ಸ್ಥಾನ ಗೆಲ್ಲಲು ಸಾಧ್ಯವಿಲ್ಲ...
Team Udayavani, Mar 17, 2023, 5:24 PM IST
ಪಿರಿಯಾಪಟ್ಟಣ :ಕಾಂಗ್ರೆಸ್ ಕೊಟ್ಟ ಸಿಎಂ ಹುದ್ದೆಯನ್ನು ಉಳಿಸಿಕೊಳ್ಳುವ ಜಾಣ್ಮೆ ತಾಳ್ಮೆಯನ್ನು ತೋರದ ಕುಮಾರಸ್ವಾಮಿಯವರು ವೀರನೂ ಆಲ್ಲ, ಶೂರನೂ ಅಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಲೇವಡಿ ಮಾಡಿದರು.
ತಾಲೂಕಿನ ಚಪ್ಪರದಹಳ್ಳಿ ಹಾಗೂ ಹಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಬೈಕ್ ರ‍್ಯಾಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಯಾವುದೇ ಷರತ್ತು ಇಲ್ಲದೆ ಕೇವಲ 37 ಸ್ಥಾನ ಗೆದ್ದಿದ್ದ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸ್ಥಾನವನ್ನು ದಾನ ಕೊಟ್ಟೆವು, ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ಇವರು ಹಣ ಮತ್ತು ಅಧಿಕಾರಕ್ಕೆ ಆಸೆಪಟ್ಟು ಸಚಿವರ ಮತ್ತು ಶಾಸಕರ ವಿಶ್ವಾಸ ದ್ರೋಹ ಬಗೆದು ವೆಸ್ಟೆಂಡ್ ಹೊಟೇಲ್ ನಲ್ಲಿ ಕುಳಿತು ಅಧಿಕಾರ ಕೈಚೆಲ್ಲಿದ ಇವರು ಈಗ ಕಾಂಗ್ರೆಸ್ ಬಗ್ಗೆ ಹಾದಿ ಬೀದಿಯಲ್ಲಿ ಬೈದುಕೊಂಡು ಓಡಾಡುತ್ತಿದ್ದಾರೆ. ನಮ್ಮ ಸಮಾಜದವರು ಜೆಡಿಎಸ್ ಬೆಂಬಲಿಸಿದರೆ ಮಾತ್ರ ಒಕ್ಕಲಿಗರು ಬೇರೆ ಪಕ್ಷದಲ್ಲಿದ್ದರೆ ಅವರು ಒಕ್ಕಲಿಗರಲ್ಲ ಎಂಬ ಸಂಚು ರೂಪಿಸುವ ಹುನ್ನಾರ ಮಾಡಿದ್ದಾರೆ, ಆದರೆ ಇವರಿಗೆ ತಿಳಿದಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಒಕ್ಕಲಿಗರನ್ನು ಮುಖ್ಯಮಂತ್ರಿ ಮಾಡಿದೆ, ಪ್ರಸ್ತುತ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ, ಕೃಷ್ಣೇ ಬೈರೇಗೌಡ, ಕೃಷ್ಣಪ್ಪ, ರಾಮಲಿಂಗಾರೆಡ್ಡಿ, ವಾಸು, ಸತ್ಯನಾರಾಯಣ, ವೆಂಕಟೇಶ್ ಸೇರಿದಂತೆ ಇನ್ನೂ ಅನೇಕರನ್ನು ಮಂತ್ರಿಗಳನ್ನಾಗಿ ಮಾಡಿದೆ, ಮುಂದೆಯೂ ಅನೇಕ ಸ್ಥಾನಮಾನಗಳನ್ನು ಅಲಂಕರಿಸಲಿದ್ದಾರೆ ಆದ್ದರಿಂದ ಒಕ್ಕಲಿಗರು ಕಾಂಗ್ರೆಸ್ ಜೊತೆ ಕೈಜೋಡಿಸಬೇಕು ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆಯಾಗಿದೆ ಎಂದು ಸ್ಮೃತಿ ಇರಾನಿ, ಶೋಭಾ ಕಾರಂದ್ಲಾಜೆ ಸಿಲಿಂಡರ್ ಗಳನ್ನು ಹೊತ್ತು ಬೀದಿಯಲ್ಲಿ ಒದ್ದಾಡಿದರು. ಈಗ ಸಿಲಿಂಡ್ ಬೆಲೆ ರೂ.1150 ಆಗಿದ್ದರೂ ಕಾಣುತ್ತಿಲ್ಲ, ಬಿಜೆಪಿ ಸರ್ಕಾರ ಜನ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ಜನ ಸಾಮಾನ್ಯರ ಬದುಕನ್ನು ನಾಶಪಡಿಸಿದೆ. ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ, ಶ್ರೀಸಾಮಾನ್ಯರು ಬೆಲೆ ಏರಿಕೆಯಿಂದ ನಲುಗಿದ್ದಾರೆ ಆದರಿಂದ ಬಿಜೆಪಿಯನ್ನು ಕಿತ್ತೊಗೆಯಬೇಕು. ಕುಟುಂಬಕ್ಕೆ ಸೀಮಿತವಾದ ಜೆಡಿಎಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಕೇವಲ 21 ಸ್ಥಾನ ಗೆಲ್ಲಲು ಸಾಧ್ಯವಿಲ್ಲ ಹಾಗಾಗಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕೆ.ವೆಂಕಟೇಶ್ ರನ್ನು ಗೆಲ್ಲಿಸಿಕೊಡಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡುತ್ತೇವೆ ಎಂದರು.
ಮಾಜಿ ಶಾಸಕ ಕೆ.ವೆಂಕಟೇಶ್ ಮಾತನಾಡಿ, ಜನರ ಆಸೊತ್ತರಗಳ ಪರ ಕೆಲಸ ಮಾಡುವವರಿಗೆ ಜನತೆ ಬೆಂಬಲ ನೀಡಬೇಕು. ಆದರೆ ಬಿಜೆಪಿ ಧಾರ್ಮಿಕ ಬಾವನೆಗಳನ್ನು ಕೆದಕಿ ಜಾತಿ ಹೆಸರಿನಲ್ಲಿ ಜನರನ್ನು ಮರುಳು ಮಾಡುತ್ತಿದೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಜೆಡಿಎಸ್ ಪಕ್ಷವು ಕೇವಲ ಅಧಿಕಾರಕ್ಕೆ ಒದ್ದಾಟ ನಡೆಸುತ್ತಿದೆ ತಾಲ್ಲೂಕಿನಲ್ಲಿ ಜನರು ನೀಡಿದ ದೇಣಿಗೆಯಿಂದ ಶಾಸಕರಾದ ಮಹದೇವ್ ಇನರನ್ನೇ ಖರೀದಿ ಮಾಡಲು ಅಪ್ಪಮಕ್ಕಳು ರಾತ್ರೋರಾತ್ರಿ ಹಣದ ಕಂತಡಗಳನ್ನು ಹಿಡಿದುಕೊಂಡು ಅಲೆದಾಡುತ್ತಿದ್ದಾರೆ ಜನತೆ ಇದನ್ನು ಅರಿತುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ತಾಲೂಕು ಕುರುಬರ ಸಂಘದ ಅಧ್ಯಕ್ಷ ಹೆಚ್. ಡಿ.ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಹಮತ್ ಜಾನ್ ಬಾಬು, ಡಿ.ಟಿ.ಸ್ವಾಮಿ, ಚನಕಲ್ ಶೇಖರ್ ಮಾತನಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಿತೀನ್ ವೆಂಕಟೇಶ್, ಮುಖಂಡರಾದ ಚಪ್ಪರದಹಳ್ಳಿ ರಾಜೇಶ್, ಸಣ್ಣಸ್ವಾಮೆಗೌಡ, ಈ. ಪಿ.ಲೋಕೇಶ್, ತಾತನಹಳ್ಳಿ ಈರಯ್ಯ, ಮೋಹನ್ ಮಾಸ್ಟರ್, ಬಿ.ಜೆ.ಬಸವರಾಜ್, ಪಿ.ಮಹದೇವ್, ಕಾನೂರು ಗೋವಿಂದ್ದೇಗೌಡ, ಸಿ.ತಮ್ಮಣ್ಣಯ್ಯ, ಬೆಕ್ಕರೆ ನಂಜುಂಡಸ್ವಾಮಿ, ಭೂತನಳ್ಳಿ ಕರೀಗೌಡ, ಸೀಗೂರು ವಿಜಯಕುಮಾರ್, ಮಂಜು, ಮುರುಳೀಧರ್, ಪುಟ್ಟರಾಜು, ರಾಮಚಂದ್ರ, ಶಾಮಿಯಾನ ರವಿ, ನಂಜುಂಡೇಗೌಡ, ಕೀರ್ತಿ, ಸತೀಶ್, ಇ ರಾಜು, ಅಂಬಲಾರೆ ಕರೀಗೌಡ, ನಾಗೇಶ್ ಸಿ.ಕೆ.ಪ್ರಕಾಶ್, ಯೋಗೇಶ್ ಗೌಡ, ವಕೀಲ ಸುಂದರೇಶ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.