ಕುಂದಾಪುರ ವಾರದ ಸಂತೆ : ಹೆದ್ದಾರಿಯಲ್ಲೇ ಪಾರ್ಕಿಂಗ್
ವಾಹನ ನಿಲ್ಲಿಸಲು ಪರ್ಯಾಯ ಜಾಗವಿಲ್ಲ; ಸಂಚಾರಕ್ಕೆ ತೊಡಕು
Team Udayavani, Mar 7, 2021, 5:10 AM IST
ಪ್ರತಿ ಶನಿವಾರ ನಡೆಯುವ ಕುಂದಾಪುರದ ಸಂತೆಗೆ ಜಿಲ್ಲೆ, ಹೊರ ಜಿಲ್ಲೆಯ ವಿವಿಧ ಭಾಗಗಳಿಂದ ವ್ಯಾಪಾರಸ್ಥರು, ಗ್ರಾಹಕರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಸಂದರ್ಭ ವಾಹನ ಪಾರ್ಕಿಂಗ್ ಮಾಡುವ ಕಷ್ಟ ಅನುಭವಿಸಿದವನಿಗಷ್ಟೇ ಗೊತ್ತು.
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿಯೇ ಎರಡನೇ ಅತೀ ದೊಡ್ಡ ವಾರದ ಸಂತೆಯೆಂದೇ ಹೆಸರಾದ ಕುಂದಾಪುರದ ವಾರದ ಸಂತೆಗೆ ಬರುವ ಜನರಿಗೆ ವಾಹನ ಪಾರ್ಕಿಂಗ್ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವಾಹನ
ಪಾರ್ಕಿಂಗ್‌ಗೆ ಪರ್ಯಾಯ ಜಾಗವಿಲ್ಲದೆ ಕೆಲವರು ರಾಷ್ಟ್ರೀಯ ಹೆದ್ದಾರಿಯಲ್ಲೇ ಪಾರ್ಕಿಂಗ್ ಮಾಡಿದರೆ, ಮತ್ತೆ ಕೆಲವರು ಸರ್ವೀಸ್ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡುವಂತಾಗಿದೆ.
ಪ್ರತಿ ಶನಿವಾರ ಕುಂದಾಪುರದ ಎಪಿಎಂಸಿ ಪ್ರಾಂಗಣದಲ್ಲಿ ನಡೆಯವ ಕುಂದಾಪುರದ ಸಂತೆಗೆ ಬೈಂದೂರು, ಸಿದ್ದಾಪುರ, ಬ್ರಹ್ಮಾವರ, ಹಾಲಾಡಿ, ವಂಡ್ಸೆ, ಕೋಟೇಶ್ವರ ಸೇರಿದಂತೆ ಅವಿಭಜಿತ ಕುಂದಾಪುರ ತಾಲೂಕಿನಾದ್ಯಂತ ಖರೀದಿಗೆ ಸಾವಿರಾರು ಮಂದಿ ಗ್ರಾಹಕರು ಬರುತ್ತಾರೆ. ಇನ್ನು ತೀರ್ಥಹಳ್ಳಿ, ಶಿವಮೊಗ್ಗ, ಭಟ್ಕಳ, ಉತ್ತರ ಕನ್ನಡ, ಚಿಕ್ಕಮಗಳೂರು, ಶೃಂಗೇರಿ, ಉಡುಪಿ ಸೇರಿದಂತೆ ವಿವಿಧೆಡೆಗಳಿಂದ ನೂರಾರು ಮಂದಿ ವ್ಯಾಪಾರಸ್ಥರು ಬೇರೆ ಬೇರೆ ಉತ್ಪನ್ನಗಳ ಮಾರಾಟಕ್ಕೆಂದು ಬರುತ್ತಾರೆ.
ಜಾಗವೇ ಇಲ್ಲ
ವಾರದ ಸಂತೆಗೆ ವ್ಯಾಪಾರಸ್ಥರು, ಗ್ರಾಹಕರು ಸೇರಿ ಸಾವಿರಾರು ಮಂದಿ ಬರುತ್ತಿದ್ದು, ಸಂತೆಯಿಂದ ತುಂಬಾ ವಸ್ತುಗಳನ್ನು ತೆಗೆದುಕೊಂಡು ಹೋಗಲು ಹೆಚ್ಚಿನವರು ವಾಹನಗಳಲ್ಲಿಯೇ ಬರುತ್ತಾರೆ. ಆದರೆ ಇಲ್ಲಿಗೆ ಬರುವ ಗ್ರಾಹಕರಿಗೆ ತಲೆ ನೋವಾಗಿ ಪರಿಣಮಿಸಿರುವುದು ವಾಹನ ಪಾರ್ಕಿಂಗ್ ಸಮಸ್ಯೆ. ಎಪಿಎಂಸಿ ಪ್ರಾಂಗಣದೊಳಗೆ ಇರುವ ಸ್ವಲ್ಪ ಜಾಗದಲ್ಲಿ ದ್ವಿಚಕ್ರ ವಾಹನಗಳು, ವ್ಯಾಪಾರಸ್ಥರ ವಾಹನ ಪಾರ್ಕಿಂಗ್‌ಗೆ ಜಾಗ ಸಾಕಾಗುತ್ತಿಲ್ಲ. ಇನ್ನು ಕಾರು, ಟೆಂಪೋ, ಗೂಡ್ಸ್, ರಿಕ್ಷಾಗಳನ್ನು ಸರ್ವಿಸ್ ರಸ್ತೆಯಲ್ಲಿ ಪಾರ್ಕಿಂಗ್ ಮಾಡುತ್ತಿದ್ದು, ಅಲ್ಲಿ ಜಾಗ ಸಾಕಾಗದೆ ಕೆಲವರು ಹೆದ್ದಾರಿಯ ಒಂದು ಬದಿಯಲ್ಲಿ ಪಾರ್ಕಿಂಗ್ ಮಾಡಿ, ಖರೀದಿಗೆ ಬರುವಂತಾಗಿದೆ.
ಗ್ರಾಹಕರ ಪಾಡು…
ಎಪಿಎಂಸಿ ಪ್ರಾಂಗಣದೊಳಗೆ ಪಾರ್ಕಿಂಗ್‌ಗೆ ಜಾಗವಿಲ್ಲ. ಹಾಗಂತ ಸರ್ವೀಸ್ ರಸ್ತೆಯಲ್ಲೋ ಅಥವಾ ಹೆದ್ದಾರಿಯಲ್ಲೋ ವಾಹನಗಳನ್ನು ಪಾರ್ಕಿಂಗ್ ಮಾಡಿದರೆ ಪೊಲೀಸರು ಬಂದು ಯಾಕೆ ಇಲ್ಲಿ ನಿಲ್ಲಿಸಿದ್ದು ಎಂದು ಕೇಳುತ್ತಾರೆ. ಸಂತೆಗೆ ಬರುವ ಗ್ರಾಹಕರ ಪಾಡು ಮಾತ್ರ ಹೇಳತೀರದಾಗಿದೆ. ಹಾಗಾದರೆ ವಾಹನ ಪಾರ್ಕಿಂಗ್‌ಗೆ ಜಾಗ ಮಾಡಿಕೊಡಬೇಕಾದವರು ಯಾರು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಸಂಚಾರಕ್ಕೆ ಸಮಸ್ಯೆ
ಹೆದ್ದಾರಿಯಲ್ಲಿ ಪಾರ್ಕಿಂಗ್ ಮಾಡುತ್ತಿರು ವುದರಿಂದ ಇತರ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇನ್ನು ಸರ್ವಿಸ್ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ಎಪಿಎಂಸಿ ಪ್ರಾಂಗಣಕ್ಕೆ, ಸಂತೆಗೆ ಬರುವವರಿಗೆಲ್ಲ ಭಾರೀ ಸಮಸ್ಯೆಯಾಗುತ್ತಿದೆ. ಸಂತೆ ಮಾರುಕಟ್ಟೆಯ ಒಳಗೆ ಪ್ರವೇಶಿಸಬೇಕಾದರೆ ಸಾಹಸವೇ ಮಾಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.