ಮತ್ತೆ ಕುಂಟುತ್ತಾ ಸಾಗಿದ ಫ್ಲೈಓವರ್ ಕಾಮಗಾರಿ : ಮತ್ತೂಮ್ಮೆ ಹೊಸ ಗಡುವು ನಿರೀಕ್ಷೆ!
Team Udayavani, Apr 13, 2021, 2:37 AM IST
ಕುಂದಾಪುರ: ದಶಕದಿಂದ ಕುಂಟುತ್ತಾ ಸಾಗಿದ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ಕಾಮಗಾರಿ ಈ ಬಾರಿ ಕೊಟ್ಟ ದಿನಾಂಕದಂದೂ ಮುಗಿಯುವುದು ಅನುಮಾನ ಎನಿಸಿದೆ. 10 ದಿನಗಳ ಅವಧಿಯಲ್ಲಿ ಮುಗಿಸಲಾಗುವುದು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಎ. 1ರಂದು ನಡೆಯಬೇಕಿದ್ದ ಭಜನೆ, ಪ್ರತಿಭಟನೆಯನ್ನು ಕೈ ಬಿಡಲಾಗಿತ್ತು. ಆಗ ನೀಡಿದ್ದ ಕಾರಣ ಜಲ್ಲಿ ಕೊರತೆ. ಈಗ 10 ದಿನಗಳು ಕಳೆದಿದ್ದು, ಪುರಸಭೆ ಸಾಮಾನ್ಯ ಸಭೆಯಲ್ಲಿ ಎ. 15-20ರ ವೇಳೆಗೆ ಮುಕ್ತಾಯವಾಗಲಿದೆ ಎಂದು ಹೊಸ ದಿನಾಂಕ ನೀಡಲಾಗಿತ್ತು. ಮುಂದಿನ ಹೊಸ ದಿನಾಂಕಕ್ಕಾಗಿ ಕಾಯಲಾಗುತ್ತಿದೆ!
ಸಾಮಗ್ರಿ ಕೊರತೆ
ಫ್ಲೈಓವರ್ ಕಾಮಗಾರಿ ಪರಿಪೂರ್ಣವಾಗದೇ ಇದ್ದರೂ ಅಂತಿಮ ಹಂತದಲ್ಲಿದೆ. ವಿನಾಯಕ ಥಿಯೇಟರ್ ಬಳಿ ಡಾಮರು ಕಾಮ ಗಾರಿ ಆಗಿರಲಿಲ್ಲ. ಈಗ ಒಂದು ಬದಿಗೆ ಡಾಮರು ಹಾಕಲಾಗಿದೆ. ಬೀದಿ ದೀಪ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ಬದಿಯಷ್ಟೇ ಆಗಿದ್ದು ಇನ್ನೊಂದು ಬದಿ ಆರಂಭವೇ ಆಗಿಲ್ಲ. ಒಂದು ಮಾಹಿತಿ ಪ್ರಕಾರ ಸುಮಾರು 50 ಲಕ್ಷ ರೂ.ಗಳ ಸಾಮಗ್ರಿ ಬೇಕಿದ್ದು ಅದರ ಕೊರತೆ ಉಂಟಾಗಿದೆ. ಸಾಮಗ್ರಿ ಪೂರೈಸುವವರು ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಕಾಮಗಾರಿ ವಿಳಂಬವಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಗುತ್ತಿಗೆದಾರ ಸಂಸ್ಥೆಯವರು ಸಮರ್ಪಕವಾಗಿ ಉತ್ತರಿಸುತ್ತಿಲ್ಲ.
ಸರ್ವೀಸ್ ರಸ್ತೆ ಅಗೆತ
ಫ್ಲೈಓವರ್ ಕಾಮಗಾರಿ ಪೂರ್ಣವಾಗದ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆಯೇ ಹೆದ್ದಾರಿಯಾಗಿ ಬಳಸ ಲ್ಪಡುತ್ತಿದೆ. ಈ ಇಕ್ಕಟ್ಟಾದ ಸರ್ವಿಸ್ ರಸ್ತೆಯಲ್ಲಿ ಈಗ ಚರಂಡಿಗಾಗಿ ಅಗೆದು ಮತ್ತೂ ಕಿರಿ ದಾಗಿಸಲಾಗಿದೆ. ಅಷ್ಟಲ್ಲದೇ ಅರೆಬರೆ ಕಾಮಗಾರಿ ಮಾಡಿ
ಅಗೆದು ಬಿಟ್ಟ ಚರಂಡಿಯನ್ನು ತಿಂಗಳಾದರೂ ಮುಟ್ಟುತ್ತಿಲ್ಲ. ಶೆಲೋಮ್ ಹೊಟೇಲ್‌ನಿಂದ ಶ್ರೀದೇವಿ ನರ್ಸಿಂಗ್ ಹೋ ರಸ್ತೆಯ ತನಕ ಚರಂಡಿಗಾಗಿ 1 ತಿಂಗಳ ಹಿಂದೆ ಹೊಂಡ ತೆಗೆಯಲಾಗಿದೆ. ಇನ್ನೂ ಇದರಲ್ಲಿ ಕಾಂಕ್ರೀಟ್ ಹಾಕಿ ಚರಂಡಿ ಗೋಡೆ ಮಾಡದ ಕಾರಣ ರಾತ್ರಿ ವೇಳೆ ಜನರು ಹಾಗೂ ದ್ವಿಚಕ್ರ ವಾಹನಗಳಿಗೆ ಅಪಾಯ ಸಂಭವಿಸುತ್ತಿದೆ. ದಿವ್ಯ ದರ್ಶಿನಿ ಹೊಟೇಲ್ ಬಳಿ ಆಳ ಹೊಂಡ ಮಾಡಲಾಗಿದೆ.
ಕೇಬಲ್ ಲೈನ್ ಇದೆ, ಪುರಸಭೆಯ ನೀರಿನ ಪೈಪ್‌ಲೈನ್ ಇದೆ ಎಂಬ ನೆಪದಲ್ಲಿ ಕಾಮಗಾರಿ ಬಾಕಿ ಇಡ ಲಾಗಿದೆ. ಮತ್ತೂಂದಷ್ಟು ಕಡೆ ಕಾಮಗಾರಿ ಮಾಡಲಾಗಿದೆ. ನವಯುಗ ಸಂಸ್ಥೆಯವರು ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಹೇಳಿಕೆ ನೀಡಿದ ಪ್ರಕಾರ, ಫ್ಲೈಓವರ್ ಕಾಮಗಾರಿ ಪೂರ್ಣವಾದ ಬಳಿವೇ ಸರ್ವೀಸ್ ರಸ್ತೆಯ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಎಲ್ಲ ಬೇಡಿಕೆಗಳನ್ನೂ ಈಡೇರಿಸಲಾಗುತ್ತದೆ ಎಂದು. ಆದರೆ ಇತ್ತ ಫ್ಲೈಓವರ್ ಕೆಲಸವೂ ಆಗಿಲ್ಲ, ಸರ್ವೀಸ್ ರಸ್ತೆ ಕೆಲಸಗಳೂ ಆಗಿಲ್ಲ ಎಂಬಂತಾಗಿದೆ. ಫ್ಲೈ ಓವರ್ ಕೆಲಸ ಮುಗಿಯುವಾಗ ಮಳೆ ಬರಲಾರಂಭಿಸಿದರೆ ಇತರ ಕೆಲಸಗಳಿಗೆ ಮಳೆಗಾಲ ಮುಗಿಯಲು ಕಾಯಬೇಕು. ಆಮೇಲೆ ಆದರೆ ಆಯಿತು, ಇಲ್ಲದಿದ್ದರೆ ಹೋಯಿತು ಎಂಬಂತಾಗಲಿದೆ.
ಆಮೆ ವೇಗ
ಮಾರ್ಚ್ ತಿಂಗಳಲ್ಲಿ ವೇಗವಾಗಿ ನಡೆಯುತ್ತಿದ್ದ ಕಾಮಗಾರಿ ಈಗ ಆಮೆ ಗತಿ ಯಲ್ಲಿ ನಡೆಯುತ್ತಿದೆ. ಹೀಗೇ ಮುಂದುವರಿದರೆ ಮಳೆಗಾಲದಲ್ಲಾದರೂ ಪೂರ್ಣವಾಗುವುದು ಅನುಮಾನ ಎಂಬಂತಾಗಿದೆ. ಈಗಲೇ ಜನ ಮಾರ್ಚ್ ಕೊನೆಗೆ ಮುಕ್ತಾಯ ಎಂಬ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಈ ವರ್ಷವೂ ಹಿಂದಿನ ವರ್ಷಗಳಂತೆ ಎಪ್ರಿಲ್ ಫೂಲ್ ಮಾಡಿದೆ ಎಂದು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಿದ್ದರು. ಅದನ್ನು ಗುತ್ತಿಗೆದಾರ ಸಂಸ್ಥೆಯೂ ನಿಜ ಮಾಡಿದೆ. ಈಗ ಯುಗಾದಿಗೂ ಸಿಹಿ ಬದಲು ಕಹಿಯನ್ನೇ ನೀಡುತ್ತಿದೆ.
ಅರೆಬರೆ ಕಾಮಗಾರಿ
ಚರಂಡಿಗಾಗಿ ರಸ್ತೆ ಅಗೆದಲ್ಲಿ ಮನೆಗಳಿಗೆ ಹೋಗಲು ಅನನುಕೂಲವಾಗುತ್ತಿದೆ. ವೃದ್ಧರು, ಮಕ್ಕಳು ಇರುವ ಮನೆಯ ಆವರಣಗೋಡೆ ಮುಂದೆ ಐದಾರು ಅಡಿ ಆಳದ ಗುಂಡಿ ತೆಗೆದಿಟ್ಟು ಸೂಕ್ತ ಓಡಾಟಕ್ಕೆ ಕಷ್ಟವಾಗುವಂತೆ ಮಾಡಿದ್ದಾರೆ. ಮಾ.16ರಂದು ಗುಂಡಿ ತೆಗೆದಿದ್ದು ಇನ್ನೂ ಅದರ ಕಾಮಗಾರಿ ಕುರಿತು ಗಮನ ಹರಿಸಿಲ್ಲ. ಕಾಮಗಾರಿ ಮಾಡಿದಲ್ಲೂ ಅರೆಬರೆಯಾಗಿದೆ. ಒಟ್ಟಿನಲ್ಲಿ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದೆ.
-ಧೀರಜ್ ರಾವ್, ಕುಂದಾಪುರ, ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.