ಕುಂದಾಪುರ ಕಕ್ಕುಂಜೆಯ ಕುವರಿ ಶ್ವೇತಭವನದ ಅಧಿಕಾರಿ
Team Udayavani, Nov 22, 2020, 6:50 AM IST
ಉಡುಪಿ: ಕರಾವಳಿ ಮೂಲದ ಕುವರಿ ಮಾಲಾ ಅಡಿಗ ಅವರು ಅಮೆರಿಕದ ಶ್ವೇತಭವನದಲ್ಲಿ ಪ್ರಭಾವಿ ಅಧಿಕಾರವನ್ನು ಪಡೆದಿದ್ದಾರೆ.
ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಶ್ವೇತಭವನದ ಹಿರಿಯ ಅಧಿಕಾರಿಗಳ ನೇಮಕವನ್ನು ಪ್ರಕಟಿಸಿದ್ದು, ಭಾರತೀಯ ಮೂಲದ ಅಮೆರಿಕದ ಪ್ರಜೆ, ಹಾಲಾಡಿ ಬಳಿಯ ಕಕ್ಕುಂಜೆ ಅಡಿಗರ ಕುಟುಂಬಕ್ಕೆ ಸೇರಿದ ಮಾಲಾ ಅಡಿಗ ಸೇರಿದ್ದಾರೆ.
ಮಾಲಾ ಅವರು ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರ ನೀತಿ ನಿರೂಪಕಿಯಾಗಿ ನಿಯುಕ್ತಿಗೊಂಡಿ ದ್ದಾರೆ. ಮಾಲಾ ಹಿಂದೆ ಬೈಡೆನ್-ಹ್ಯಾರಿಸ್ ಅಧ್ಯಕ್ಷೀಯ ಚುನಾವಣ ಪ್ರಚಾರದಲ್ಲಿ ಸಲಹೆಗಾರರಾಗಿದ್ದರು.
ಚುನಾವಣ ಸಲಹೆಗಾರ್ತಿ
ಮಾಲಾ ಅಡಿಗ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸಲಹೆ ಗಾರರಾಗುವ ಮೊದಲು ಬೈಡೆನ್ ಪ್ರತಿ ಷ್ಠಾನದಲ್ಲಿ ಉನ್ನತ ಶಿಕ್ಷಣ ಮತ್ತು ಸೈನಿಕ ಕುಟುಂಬ ವಿಭಾಗದ ನಿರ್ದೇಶಕ ರಾಗಿದ್ದರು. ಒಬಾಮಾ – ಬೈಡೆನ್ ಆಡಳಿತದ ವೇಳೆ ಮಾಲಾ ಅವರು ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಇದಕ್ಕೂ ಮುನ್ನ ನ್ಯಾಯ ಇಲಾಖೆಯ ಸಹ ಅಟಾರ್ನಿ ಜನರಲ್ ಅವರಿಗೆ ಕೌನ್ಸೆಲ್ ಆಗಿದ್ದರು.
ಕಾನೂನು ತಜ್ಞೆ
ಮಾಲಾ ಅಡಿಗ ಅವರು ವಾಷಿಂಗ್ಟನ್ ನಿವಾಸಿಯಾಗಿದ್ದು, ಅಮೆರಿಕದ ಗ್ರಿನೆಲ್ ಕಾಲೇಜು, ಮಿನ್ನೆಸೊಟಾ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ವಿ.ವಿ., ಶಿಕಾಗೋ ಲಾ ಸ್ಕೂಲ್ ವಿ.ವಿ.ಗಳಿಂದ ಪದವಿ ಗಳಿಸಿದ್ದರು. ತಂದೆ ಡಾ| ರಮೇಶ ಅಡಿಗರು ಮಾಲಾ ಜತೆಗಿದ್ದಾರೆ.
ಕಕ್ಕುಂಜೆ ಮೂಲ
ಕರ್ಣಾಟಕ ಬ್ಯಾಂಕ್ ಅಧ್ಯಕ್ಷರಾ ಗಿದ್ದ ಕಕ್ಕುಂಜೆ ಮೂಲದ ಕೆ.ಎಸ್.ಎನ್. ಅಡಿಗ ಅವರ ತಂದೆ ಮತ್ತು ಮಾಲಾ ಅಡಿಗರ ಅಜ್ಜ ಚಂದ್ರಶೇಖರ ಅಡಿಗ ಅಣ್ಣತಮ್ಮಂದಿರ ಮಕ್ಕಳು. ಚಂದ್ರಶೇಖರ ಅಡಿಗರು ಕೃಷಿಕರಾಗಿ ದ್ದರು. ಇವರಿಗೆ ಲೀಲಾ ಅಡಿಗರ ತಂದೆ ಡಾ| ರಮೇಶ ಅಡಿಗರ ಸಹಿತ ಆರು ಮಂದಿ ಮಕ್ಕಳು. ಅಡಿಗರು ಕುಂದಾಪುರ ವಡೇರಹೋಬಳಿ ಬಳಿ ವಾಸವಿದ್ದರು.
ಡಾ| ರಮೇಶ ಅಡಿಗರ ಪಯಣ
ಡಾ| ರಮೇಶ ಅಡಿಗರು ಬೆಂಗಳೂರು ವೈದ್ಯಕೀಯ ಕಾಲೇಜಿ ನಲ್ಲಿ ಪದವಿ ಪಡೆದು 24ನೆಯ ವಯಸ್ಸಿನಲ್ಲಿ ಅಮೆರಿಕಕ್ಕೆ ಹೋದರು. ಬಳಿಕ ಅಲ್ಲಿ ಕಾರ್ಡಿಯೋಲಜಿಯಲ್ಲಿ ಉನ್ನತ ಶಿಕ್ಷಣ ಪಡೆದರು. ಸುಮಾರು 60 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವ ಡಾ| ಅಡಿಗ ಮತ್ತು ಡಾ|ಜಯಲಕ್ಷ್ಮೀ ಅಡಿಗರ ಮೂವರು ಮಕ್ಕಳಲ್ಲಿ ಮಾಲಾ ಹಿರಿಯಾಕೆ.
ಊರಿನ ನಂಟು
ಮಾಲಾ ಅವರ ಪತಿ ಚಾರ್ಲ್ಸ್ ಬೀರೋ ವೃತ್ತಿಯಲ್ಲಿ ನ್ಯಾಯವಾದಿ. ಕಳೆದ ವರ್ಷ ನವೆಂಬರ್‌ನಲ್ಲಿ ಕುಟುಂಬ ಮಿಲನ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಡಾ| ರಮೇಶ ಅಡಿಗ, ಮಾಲಾ ಸಹಿತ ಮೂವರೂ ಮಕ್ಕಳು ಆಗಮಿಸಿದ್ದರು. ಮಾಲಾ ಅವರು ಮದುವೆ ಇತ್ಯಾದಿ ಕಾರ್ಯ ಕ್ರಮಗಳಿದ್ದಾಗ ಕುಂದಾಪುರ, ಕಕ್ಕುಂಜೆಗೆ ಬರುತ್ತಿದ್ದರು. ಸುಮಾರು ಏಳು ವರ್ಷಗಳ ಹಿಂದೆ ಕಕ್ಕುಂಜೆಗೆ ಬಂದು ಪೂಜೆಯಲ್ಲಿ ಪಾಲ್ಗೊಂಡಿದ್ದರು ಎಂಬುದನ್ನು ರಮೇಶ ಅಡಿಗರ ಸಹೋದರಿ ನಿರ್ಮಲಾ ಉಪಾಧ್ಯರ ಮಗಳು, ಕುಂದಾಪುರ ಕುಂದೇಶ್ವರ ಸಮೀಪದ ನಿವಾಸಿ ಸುಜಾತಾ ನಕ್ಕತ್ತಾಯ ಸ್ಮರಿಸಿಕೊಳ್ಳುತ್ತಾರೆ.
ಮಾಲಾ ಪರಿಶ್ರಮ ಜೀವಿ. ಅವರ ನೇಮಕದ ವಿಷಯ ಕೇಳಿ ಸಂತೋಷವಾಗಿ ಇನ್ನಷ್ಟು ದೊಡ್ಡ ಹುದ್ದೆ ಸಿಗಲಿ ಎಂದು ಹಾರೈಸಿ ಸಂದೇಶ ಕಳುಹಿಸಿದ್ದೇನೆ. ಅವಳಿಂದಲೂ ಸಂದೇಶ ಬಂದಿದೆ.
– ಸುಜಾತಾ ನಕ್ಕತ್ತಾಯ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ; ಕಾರ್ಕಳ ಪ್ರಥಮ, ಹೆಬ್ರಿಗೆ ದ್ವಿತೀಯ ಸ್ಥಾನ
ಗೋವಂಶ ಸುರಕ್ಷೆಗಾಗಿ ಕೋಟಿ ವಿಷ್ಣುಸಹಸ್ರನಾಮ ಪಠನ, ಜಪ ಅಭಿಯಾನ: ವಿವಿಧ ಮಠಾಧೀಶರ ಬೆಂಬಲ
Udupi: ದಿಢೀರ್ ಅಸ್ವಸ್ಥ; ಅಂಬಾಗಿಲಿನ ವ್ಯಕ್ತಿಯೊಬ್ಬರು ಸಾವು
Udupi: ವಿದೇಶದಲ್ಲಿ ಎಂಪಿಎಚ್ ಸೀಟ್ ಭರವಸೆ; ಹಣ ಪಡೆದು ವಂಚನೆ: 3 ಮಂದಿಯ ಬಂಧನ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್