![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 23, 2021, 2:25 PM IST
ಪಾಟ್ನಾ: ಜೈಲುಶಿಕ್ಷೆ ಅನುಭವಿಸುತ್ತಿರುವ ಬಿಹಾರ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಜನತಾದಳದ ವರಿಷ್ಠ ಲಾಲುಪ್ರಸಾದ್ ಯಾದವ್ ಆರೋಗ್ಯ ತೀವ್ರವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಶನಿವಾರ(ಜನವರಿ 23, 2021) ತಿಳಿಸಿದ್ದಾರೆ.
ಇದನ್ನೂ ಓದಿ:3ನೇ ಅವಧಿಗೆ ಸ್ಪರ್ಧೆ ಇಲ್ಲ; ಮೋದಿ ಬದಲು ಮುಂದಿನ ಪ್ರಧಾನಿ ಹುದ್ದೆಗೆ ಯಾರು ಅರ್ಹ?ಸಮೀಕ್ಷೆ
ಲಾಲುಪ್ರಸಾದ್ ಯಾದವ್ ಅವರನ್ನು ಏಮ್ಸ್ ಗೆ ಸ್ಥಳಾಂತರಿಸುತ್ತಿರುವ ನಿಟ್ಟಿನಲ್ಲಿ ಪುತ್ರ, ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಹಾಗೂ ಕುಟುಂಬ ಸದಸ್ಯರು ಕೂಡಾ ರಾಂಚಿಯಲ್ಲಿ ಬೀಡು ಬಿಟ್ಟಿರುವುದಾಗಿ ವರದಿ ತಿಳಿಸಿದೆ.
ಬಿಹಾರ ಮೇವು ಹಗರಣದಲ್ಲಿ ದೋಷಿ ಎಂದು ತೀರ್ಪು ಬಂದ ನಂತರ ಲಾಲುಪ್ರಸಾದ್ ಯಾದವ್ ಜೈಲುಶಿಕ್ಷೆ ಅನುಭವಿಸುತ್ತಿದ್ದು, ಲಾಲು ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಮನುಷ್ಯತ್ವ ಇದ್ದರೆ ಶಿವಮೊಗ್ಗ ಪ್ರಕರಣದ ಹೊಣೆ ಹೊತ್ತು BSY ಮತ್ತು ಈಶ್ವರಪ್ಪ ರಾಜೀನಾಮೆ ನೀಡಲಿ
ಲಾಲುಪ್ರಸಾದ್ ಆರೋಗ್ಯದ ಬಗ್ಗೆ ಜೈಲಿನ ವೈದ್ಯಾಧಿಕಾರಿಗಳು ವರದಿ ನೀಡಿದ ನಂತರ ಅವರನ್ನು ದೆಹಲಿಯ ಏಮ್ಸ್ ಗೆ ಸ್ಥಳಾಂತರಿಸಲಾಗುವುದು. ಅಲ್ಲದೇ ಲಾಲು ಪ್ರಸಾದ್ ಅವರನ್ನು ರಾಂಚಿಯಿಂದ ದೆಹಲಿಗೆ ಕರೆದೊಯ್ಯಲು ಜೈಲು ಅಧಿಕಾರಿಗಳು ಕೆಳ ನ್ಯಾಯಾಲಯದಿಂದ ಅನುಮತಿ ಪಡೆದಿರುವುದಾಗಿ ವರದಿ ತಿಳಿಸಿದೆ.
“ನಾವು ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕೆಂದು ಅಪೇಕ್ಷಿಸಿದ್ದೇವೆ. ಆದರೆ ಅವರಿಗೆ ಇಲ್ಲಿ ವೈದ್ಯರು ಯಾವ ಚಿಕಿತ್ಸೆ ನೀಡಿದ್ದಾರೆ ಎಂಬ ವೈದ್ಯರ ವರದಿ ಬೇಕಾಗಿದೆ. ಎಲ್ಲಾ ವರದಿ ಬಂದ ನಂತರ ದೆಹಲಿಗೆ ಸ್ಥಳಾಂತರಿಸಬೇಕಾಗಿದೆ. ಈಗಾಗಲೇ ಅವರ ಆರೋಗ್ಯ ಹದಗೆಟ್ಟಿದೆ. ಈ ನಿಟ್ಟಿನಲ್ಲಿ ಶನಿವಾರ (ಜ.23, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸುವುದಾಗಿ ತೇಜಸ್ವಿ ಯಾದವ್ ಶುಕ್ರವಾರ ರಾಂಚಿಯಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.