Lamborghini: ಆಕರ್ಷಕ ವಿನ್ಯಾಸದ ಲ್ಯಾಂಬೋರ್ಗಿನಿ Urus S ಕಾರು ಬಿಡುಗಡೆ…ಆರಂಭಿಕ ಬೆಲೆ…
Cooling Vents ಜೊತೆ ಹೊಸ ಬಾನೆಟ್ ಹೊಂದಿದೆ
Team Udayavani, Apr 13, 2023, 5:58 PM IST
ನವದೆಹಲಿ: ಐಶಾರಾಮಿ ಸ್ಫೋರ್ಟ್ಸ್ ಹಾಗೂ ಎಸ್ ಯುವಿ ತಯಾರಿಕಾ ಇಟಾಲಿಯನ್ ಸಂಸ್ಥೆ ಲ್ಯಾಂಬೋರ್ಗಿನಿ Urus S ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಆರಂಭಿಕ ಬೆಲೆ 4.18 ಕೋಟಿ (Ex showroom) ರೂಪಾಯಿಯಾಗಿದೆ.
ಇಟಾಲಿಯನ್ ಕಾರು ತಯಾರಿಕಾ ಸಂಸ್ಥೆ ಅತ್ಯುತ್ತಮ ಮಾದರಿಯ ಕಾರುಗಳ ಮಾರಾಟ ಪರಂಪರೆಯನ್ನು ಮುಂದುವರಿಸಿದೆ. ಈ ಹಿಂದಿನ ಶ್ರೇಣಿಯ ಬದಲಾಗಿ ಲ್ಯಾಂಬೋರ್ಗಿನಿ Urus S ಮಾಡೆಲ್ ಕಾರನ್ನು ಬಿಡುಗಡೆ ಮಾಡಿದೆ.
Lamborghini Urus S ತನ್ನದೇ ಘನತೆ ಹೊಂದಿದ್ದು, ಲ್ಯಾಂಬೋರ್ಗಿನಿ ಪರ್ಫಾಮೆನ್ಸ್ ಗೆ ಹೋಲಿಸಿದಲ್ಲಿ ಕೆಲವೊಂದು ಮಹತ್ತರ ಬದಲಾವಣೆ ಮಾಡಲಾಗಿದೆ. ಲ್ಯಾಂಬೋರ್ಗಿನಿ Urus S ನೂತನ ಬಂಪರ್ ಹೊಂದಿದ್ದು, Cooling Vents ಜೊತೆ ಹೊಸ ಬಾನೆಟ್ ಹೊಂದಿದೆ.
ಲ್ಯಾಂಬೋರ್ಗಿನಿ Urus S ಎಸ್ ಯುವಿಯಲ್ಲಿ 4.0 ಲೀಟರ್ ಟ್ವಿನ್ ಟರ್ಬೋ V8 ಎಂಜಿನ್ ಅಳವಡಿಸಿದ್ದಾರೆ. ಈ ಎಂಜಿನ್ 657 ಬಿಎಚ್ ಪಿ ಪವರ್ ಮತ್ತು 850 ಎನ್ ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಲ್ಯಾಂಬೋರ್ಗಿನಿ Urus S ಕಾರು ಆಟೋಮೆಟಿಕ್ ಗಿಯರ್ ಬಾಕ್ಸ್ ಹೊಂದಿದ್ದು, 3.5 ಸೆಕೆಂಡ್ಸ್ ಗಳಲ್ಲಿ 100 ಕಿಲೋ ಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಲ್ಯಾಂಬೋರ್ಗಿನಿ Urus S 85 ಲೀಟರ್ ಪ್ಯೂಯೆಲ್ ಟ್ಯಾಂಕ್ ಹೊಂದಿದ್ದು, ಲ್ಯಾಂಬೋರ್ಗಿನಿ Urus s ಮೈಲೇಜ್ ಒಂದು ಲೀಟರ್ ಪೆಟ್ರೋಲ್ ಗೆ 7.09 ಕಿಲೋ ಮೀಟರ್ ಕ್ರಮಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.