ಭೂ ಸುಧಾರಣೆ ಕಾಯ್ದೆ ತಿದ್ದುಪಡಿ: ರಿಯಲ್ ಎಸ್ಟೇಟ್‌ಗೆ ಸಲೀಸು?
ಕೃಷಿ ಬಳಕೆಗೆ ಕಡ್ಡಾಯ ನಿಯಮ ಸೇರ್ಪಡೆಗೆ ಹೆಚ್ಚಿದ ಒತ್ತಡ
Team Udayavani, Jun 13, 2020, 6:30 AM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ಕರ್ನಾಟಕ ಭೂ ಸುಧಾರಣ ಕಾಯ್ದೆಗೆ ತಿದ್ದುಪಡಿ ತರುವ ರಾಜ್ಯ ಸರಕಾರದ ತೀರ್ಮಾನದಿಂದ ಕೃಷಿ ಜಮೀನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಕೆ ಯಾಗುವ ಅಪಾಯವಿದೆಯೇ?
ಕೃಷಿ ಜಮೀನು ಖರೀದಿಸಿದರೂ ಕೃಷಿ ಬಳಕೆಗೆ ಮಾತ್ರ ಎಂಬ ಕಠಿನ ಷರತ್ತು ವಿಧಿಸದೆ ಇದ್ದರೆ ಇಂಥ ಅಪಾಯ ಸಾಧ್ಯತೆ ಇದ್ದು, ಕೃಷಿಕರ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಸರಕಾರದ ತೀರ್ಮಾನದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವುದರಿಂದ ಕೃಷಿ ಬಳಕೆಗೆ ಕಡ್ಡಾಯ ಎಂಬ ಷರತ್ತು ವಿಧಿಸಬಹುದೇ ಎಂಬ ಬಗ್ಗೆ ಮರುಪರಿಶೀಲನೆ ನಡೆಸುವ ಆಗ್ರಹವೂ ಕೇಳಿಬರುತ್ತಿದೆ.ಸಂಪುಟ ಸದಸ್ಯರಲ್ಲೇ ಈ ವಿಚಾರದಲ್ಲಿ ಭಿನ್ನರಾಗ ಮೂಡಿದೆ. ಇದು ವಿವಾದದ ಸ್ವರೂಪ ಪಡೆಯುವ ಲಕ್ಷಣಗಳು ಕಂಡುಬರುತ್ತಿವೆ.
ಕರ್ನಾಟಕ ಭೂ ಸುಧಾರಣಾ ಕಾಯ್ದೆಯ 79 ಎ, ಬಿ, ಸಿ, 80 ರದ್ದು ಪಡಿಸಿ ಕಲಂ 63ರಡಿ ಜಮೀನು ಮಾಲಕತ್ವ ನೀಡು ವು ದು, ಐವರು ಸದಸ್ಯರ ಕುಟುಂಬ 108 ಎಕರೆವರೆಗೂ ಕೃಷಿ ಭೂಮಿ ಹೊಂದಲು ಅವಕಾಶ ಕಲ್ಪಿಸುವುದರಿಂದ ಕೃಷಿ ಭೂಮಿ ಹಣವಂತರ ಪಾಲಾಗಬ ಹುದೇ ಎಂಬ ಆತಂಕವಿದೆ. ಇಂಥವರು ಮುಂದಿನ ದಿನಗ ಳಲ್ಲಿ ಇದೇ ಭೂಮಿಯನ್ನು ರಿಯಲ್ ಎಸ್ಟೇಟ್ ಆಗಿ ಪರಿವರ್ತನೆ ಮಾಡಿಕೊಳ್ಳಬಹುದು ಎಂಬ ಆಕ್ಷೇಪ ಕೇಳಿ ಬಂದಿದೆ.
ಏಕೆ ಈ ಆತಂಕ?
– ಕಾಯ್ದೆ ತಿದ್ದುಪಡಿ ಸಂಬಂಧ ಕಂದಾಯ ಇಲಾಖೆಯು ಸಂಪುಟ ಸಭೆಗೆ ಸಿದ್ಧಪಡಿಸಿರುವ ಟಿಪ್ಪಣಿಯಲ್ಲಿ ಎಲ್ಲೂ ಕೃಷಿಕರಲ್ಲದವರು ಕೃಷಿ ಜಮೀನು ಖರೀದಿಸಿದಾಗ ಕೃಷಿ ಮತ್ತು ಸಂಬಂಧಿ ಉಪ ಕಸುಬುಗಳಿಗೆ ಮಾತ್ರ ಕಡ್ಡಾಯ ವಾಗಿ ಬಳಸ ಬೇಕು ಎಂದು ನಮೂದಿಸಿಲ್ಲ.
– ವ್ಯವಸಾಯ ಕೈಗೊಳ್ಳದ ಕೃಷಿ ಜಮೀನುಗಳಲ್ಲಿ ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ/ ಹಡಿಲು ಭೂಮಿಯನ್ನು ಕೃಷಿ ಯೇ ತರ ಚಟು ವಟಿಕೆ ಕೈಗೊಳ್ಳಲು ಇಚ್ಛಿಸು ವವರು ಖರೀ ದಿಸ ಬಹುದು ಎಂದು ಉಲ್ಲೇಖೀಸಲಾಗಿದೆ.
– ಹೀಗಾಗಿ ಹಡಿಲು ಭೂಮಿ ಎಂದರೆ ಕೃಷಿ ಮಾಡದೆ ಬಿಟ್ಟಿರುವ ಜಮೀನು ಕೂಡ ಎಂಬರ್ಥ ಬರಲಿದೆ. ಈ ಅವಕಾಶ ಬಳಸಿ ರಿಯಲ್ ಎಸ್ಟೇಟ್‌ಗೆ ಕೃಷಿ ಭೂಮಿ ಬಳಕೆಯಾಗಬಹುದು.
ಮೊದಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಬಹುರಾಷ್ಟ್ರೀಯ ಕಂಪೆನಿಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು. ಈಗ ಅವರು ಕೃಷಿಭೂಮಿ ಒಡೆಯರಾಗಲು ಮತ್ತೂಂದು ತಿದ್ದುಪಡಿ ತರಲಾಗಿದೆ. ಇದು ರಿಯಲ್ ಎಸ್ಟೇಟ್ ದಂಧೆಯಲ್ಲದೆ ಮತ್ತೇನೂ ಅಲ್ಲ.
– ಪ್ರೊ| ನರಸಿಂಹಪ್ಪ , ಕೃಷಿ ತಜ್ಞ
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರೈತರ ಆದಾಯ ಭದ್ರತೆಗೆ ಮಾತ್ರವಲ್ಲ, ದೇಶದ ಆಹಾರ ಭದ್ರತೆ ಬುಡಕ್ಕೆ ಕೊಡಲಿ ಏಟು ಹಾಕುತ್ತದೆ. ಕೃಷಿ ಭೂಮಿ ರೈತರ ಕೈ ತಪ್ಪಿ ಆ ಮೂಲಕ ಕೃಷಿ ಉತ್ಪಾದನೆಗೆ ಅಪಾಯ ಬರಬಾರದು ಎಂಬುದೇ 1961ರ ಕರ್ನಾಟಕ ಭೂ ಸುಧಾರಣೆ ಕಾಯ್ದೆಯ ಉದ್ದೇಶವಾಗಿತ್ತು.
– ಪ್ರಕಾಶ್ ಕಮ್ಮರಡಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ
ಪ್ರಸಕ್ತ ಸನ್ನಿವೇಶದಲ್ಲಿ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸೂಕ್ತ. ಜತೆಗೆ ಕೃಷಿ ಬಳಕೆಗೆ ಕಡ್ಡಾಯ ಎಂದು ಸೇರಿಸುವ ಬಗ್ಗೆಯೂ ಸಾಧ್ಯವೇ ಎಂಬುದನ್ನು ಪರಿಶೀಲಿಸಲು ಸಂಬಂಧಪಟ್ಟ ಇಲಾಖೆ ಜತೆ ನಾನು ಚರ್ಚಿಸುತ್ತೇನೆ.
– ಬಿ.ಸಿ. ಪಾಟೀಲ್, ಕೃಷಿ ಸಚಿವ
-ಎಸ್. ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.