ಮಹಿಳೆಗೆ ಹಾರೆಯಿಂದ ಹೊಡೆಯಿರಿ ಎಂದ ಸರ್ವೆಯರ್‌ಗೆ ತರಾಟೆ: ವಿಡಿಯೋ ವೈರಲ್‌   

ಪ್ರಕರಣ ಕೋರ್ಟ್‌ನಲ್ಲಿದ್ರೂ ಜಮೀನು ಅಳತೆ ಮಾಡಿದ್ದಕ್ಕೆ ಮಹಿಳೆ ಆಕ್ರೋಶ

Team Udayavani, May 14, 2022, 12:00 PM IST

6women

ಪಾಂಡವಪುರ: ಕೋರ್ಟ್‌ನಲ್ಲಿ ಕೇಸಿದ್ದರೂ ಜಮೀನು ಅಳತೆ ಮಾಡಿದಲ್ಲದೆ, ಇದನ್ನು ಪ್ರಶ್ನಿಸಿದ ಮಹಿಳೆಗೆ ಹಾರೆಯಿಂದ ಹೊಡೆಯಿರಿ ಎಂದು ಹೇಳಿದ್ದಾರೆನ್ನಲಾದ ಅಧಿಕಾರಿಯನ್ನು ಮಹಿಳೆ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆಯಿತು.

ತಾಲೂಕಿನ ಬೇವಿನಕುಪ್ಪೆ ಗ್ರಾಮದ ಅನುಸೂಯ ಎಂಬ ಮಹಿಳೆ ತಾಲೂಕು ಸರ್ವೆಯರ್‌ ಭಾಸ್ಕರ್‌ಗೆ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬೇವಿನಕುಪ್ಪೆ ಗ್ರಾಮದ ಕೃಷ್ಣೇಗೌಡ, ಪತ್ನಿ ಅನುಸೂಯಗೆ ಸೇರಿದ ಸರ್ವೆ ನಂ.43/1 ಜಮೀನಿನ ಪೋಡ್‌ ಅನ್ನು ಪಕ್ಕದ ಜಮೀನಿನವರು ಬದಲಾಯಿಸಿ, ಜಮೀನು ಅದಲು ಬದಲು ಮಾಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣೇಗೌಡ, ಅನುಸೂಯ ಆರು ತಿಂಗಳ ಹಿಂದೆ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಜಮೀನಿನ ವಿಚಾರ ಕೋರ್ಟ್‌ನಲ್ಲಿ ಇರುವಾಗ ಪಕ್ಕದ ಜಮೀನನ ಮಾಲಿಕರಾದ ಶಿವಲಿಂಗೇಗೌಡ, ರಾಮಕೃಷ್ಣ ಹಾಗೂ ಸಿದ್ದಪ್ಪ ಎಂಬುವರು ಜಮೀನು ಅಳತೆ ಮಾಡಿಸಲು ಎರಡು ಮೂರು ಬಾರಿ ಸರ್ವೆಯರ್‌ ಅನ್ನು ಸ್ಥಳಕ್ಕೆ ಕರೆಯಿಸಿದ್ದರು. ಆದರೆ, ಇದಕ್ಕೆ ಅನುಸೂಯ, ಕೃಷ್ಣೇಗೌಡ ವಿರೋಧಿಸಿದ್ದರಿಂದ ಅಳತೆ ಮಾಡದೇ ವಾಪಸಾಗಿದ್ದರು.

ನೋಟಿಸ್‌ ಸ್ವೀಕರಿಸಿಲ್ಲ

ಹೀಗಿದ್ದರೂ, ಕಳೆದ ಗುರುವಾರ ಸಂಜೆ ಅಳತೆ ಮಾಡಲು ಅನುಸೂಯಗೆ ನೋಟಿಸ್‌ ನೀಡಿದ್ದಾರೆ. ಆದರೆ, ಜಮೀನನ ಪ್ರಕರಣ ಕೋರ್ಟ್‌ನಲ್ಲಿದೆ. ಅಲ್ಲಿಯವರೆಗೆ ಅಳತೆ ಮಾಡಬೇಡಿ ಎಂದು ಅನುಸೂಯ ನೋಟಿಸ್‌ ಸ್ವೀಕರಿಸಿಲ್ಲ. ಹೀಗಿದ್ದರೂ, ತಾಲೂಕು ಸರ್ವೆಯರ್‌ ಭಾಸ್ಕರ್‌ ಶುಕ್ರವಾರ ಜಮೀನಿನ ಬಳಿ ಆಗಮಿಸಿ ಅಳತೆ ಮಾಡಿದ್ದಾರೆ. ಅಲ್ಲದೆ, ಅಳತೆಗೆ ವಿರೋಧಿಸುತ್ತಿದ್ದ ಮಹಿಳೆ ಅನುಸೂಯಗೆ ಹಾರೆಯಿಂದ ಹೊಡೆಯಿರಿ ಎಂದು ಪಕ್ಕದ ಜಮೀನಿನವರಿಗೆ ಹೇಳಿ, ಅಲ್ಲಿಂದ ಹೊರಟು ಹೋಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಐಷಾರಾಮಿ ಜೀವನಕ್ಕಾಗಿ ಮನೆಗಳ್ಳತನ : ಇಬ್ಬರ ಬಂಧನ

ಕಚೇರಿಗೆ ಬರುತ್ತಿದ್ದಂತೆ ತರಾಟೆ

ಇದರಿಂದ ರೊಚ್ಚಿಗೆದ್ದ ಮಹಿಳೆ ಅನುಸೂಯ, ಪಾಂಡವಪುರ ತಾಲೂಕು ಕಚೇರಿ ಬಳಿಗೆ ಶುಕ್ರವಾರ ಆಗಮಿಸಿ ಸರ್ವೆಯರ್‌ ಭಾಸ್ಕರ್‌ ಬರುತ್ತಿದ್ದಂತೆಯೇ ಸಾರ್ವ ಜನಿಕವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ನೀನೊಬ್ಬ ಸರ್ಕಾರಿ ಅಧಿಕಾರಿಯಾಗಿ, ವಿರೋಧ ನಡುವೆಯೂ ಜಮೀನು ಅಳತೆ ಮಾಡಿದಲ್ಲದೆ, ಕೊಲೆ ಮಾಡುವಂತೆ ಪ್ರಚೋದನೆ ನೀಡುತ್ತಿದ್ದೀಯ, ನೀನು ಅವರಿಂದ ಎಷ್ಟು ಲಂಚ ಪಡೆದಿದ್ದೀಯ ಎಂದು ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಘಟನೆ ಸಂಬಂಧ ಕ್ರಮಕೈಗೊಳ್ಳಿ

ಬಳಿಕ ತಹಶೀಲ್ದಾರ್‌ ನಯನ ಆಗಮಿಸಿ, ಇಬ್ಬರನ್ನು ಸಮಾಧಾನಪಡಿಸಿ ಘಟನೆಗೆ ಸಂಬಂಧಿಸಿದಂತೆ ಕ್ರಮತೆಗೆದುಕೊಳ್ಳಲಾಗು ವುದು ಎಂದು ತಿಳಿಸಿ ಮಹಿಳೆಗೆ ಸಾಂತ್ವನ ಹೇಳಿ ವಾಪಸ್‌ ಕಳುಹಿಸಿದ್ದಾರೆ. ಇತ್ತ ಸರ್ವೆಯರ್‌ ಭಾಸ್ಕರ್‌ ಅವರು ಜಮೀನು ಅಳತೆ ಮಾಡಿ ಕಲ್ಲು ನೆಟ್ಟು ವಾಪಸಾಗುತ್ತಿದ್ದಂತೆಯೇ ಪ್ರಕರಣ ಕೋರ್ಟ್‌ನಲ್ಲಿದ್ದರೂ ಪಕ್ಕದ ಜಮೀನಿನ ಶಿವಲಿಂಗೇಗೌಡ, ರಾಮಕೃಷ್ಣ ಹಾಗೂ ಸಿದ್ದಪ್ಪ ಅವರು ಕಬ್ಬಿನ ಬೆಳೆಯನ್ನು ಉಳಿಮೆ ಮಾಡಿ ನಾಶಪಡಿಸಿದ್ದಾರೆ ಎಂದು ಅನುಸೂಯ ಅವರ ಪುತ್ರ ಚಂದನ್‌ ಆಕ್ರೋಶ ಹೊರಹಾಕಿದ್ದಾರೆ.

ಟಾಪ್ ನ್ಯೂಸ್

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

Karnataka Govt.,: ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ

Suicide 3

Maddur; ಕೆಲಸದ ಒತ್ತಡ: ಎಂಜಿನಿಯರ್‌ ಆತ್ಮಹ*ತ್ಯೆ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.