ಅಕ್ಕ ಲತಾ ಮಂಗೇಶ್ಕರ್,ತಂಗಿ ಆಶಾ ಭೋಂಸ್ಲೆ ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದರೇ ?
ಅಕ್ಕ-ತಂಗಿಗೆ ಮಾತನಾಡುವ ಅವಕಾಶವೂ ಇರಲಿಲ್ಲ...!
Team Udayavani, Feb 6, 2022, 11:58 AM IST
ಲತಾ ಮಂಗೇಶ್ಕರ್ ಅವರು ಭಾರತದ ಸರ್ವ ಶ್ರೇಷ್ಠ ಗಾಯಕಿಯ ರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದ್ದು, ಅವರ ಅವರ ಸಹೋದರಿ ಆಶಾ ಭೋಂಸ್ಲೆ ಕೂಡ ಗಾನ ಕೋಗಿಲೆಯಾಗಿ ಅವರಷ್ಟೇ ಜನಪ್ರಿಯತೆಯನ್ನು ಕಂಡುಕೊಂಡವರು.
ಗತಕಾಲದಲ್ಲಿ ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದರು ಎಂದು ಜನ ನಂಬಿದ್ದರು. ಇದಕ್ಕೆ ಮಂಗೇಶ್ಕರ್ ಕುಟುಂಬದಲ್ಲಿ ನಡೆದ ಒಂದು ಘಟನೆಯೇ ಕಾರಣ ಎಂದು ಲತಾ ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದರು.
ಲತಾ ಅವರಿಗೆ ನಾಲ್ವರು ಒಡಹುಟ್ಟಿದವರು, ಹಿರಿಯವರು ಮೀನಾ ಖಾಡಿಕರ್, ಆಶಾ ಭೋಂಸ್ಲೆ, ಉಷಾ ಮಂಗೇಶ್ಕರ್ ಮತ್ತು ಹೃದಯನಾಥ್ ಮಂಗೇಶ್ಕರ್.
ಲತಾ ಮಂಗೇಶ್ಕರ್ ಅವರು ಬಾಲ್ಯದಿಂದಲೂ ಆಶಾ ಜತೆ ಬಹಳ ಬಲವಾದ ಬಂಧವನ್ನು ಹೊಂದಿದ್ದರು. ಆಶಾ ಅವರು ತನ್ನ ತಂಗಿ ಲತಾರನ್ನು “ಅಚ್ಚುಮೆಚ್ಚಿನ ಗಾಯಕಿ” ಎಂದು ಕರೆದಿದ್ದರು.
ಯಾಕೆ ವೈಮನಸ್ಸು ?
1949 ರಲ್ಲಿ ಆಶಾ ಅವರು 16 ವರ್ಷದವರಾಗಿದ್ದಾಗ 31 ವರ್ಷದ ಗಣಪತರಾವ್ ಭೋಂಸ್ಲೆ ಅವರೊಂದಿಗೆ ಏಕಾಏಕಿ ಮನೆ ಬಿಟ್ಟು ತೆರಳಿ ಕುಟುಂಬದ ವಿರೋಧದ ನಡುವೆ ವಿವಾಹವಾಗಿದ್ದರು. ಆದಾಗ್ಯೂ, ದಂಪತಿಗಳು 1960 ರಲ್ಲಿ ಬೇರ್ಪಟ್ಟಿದ್ದರು. . ಆಶಾ ಅವರಿಗೆ ಗಣಪತ್ರಾವ್ ಅವರೊಂದಿಗಿನ ದಾಂಪತ್ಯದಲ್ಲಿ ಮೂವರು ಮಕ್ಕಳಿದ್ದರು. ಬಳಿಕ ಆಶಾ 1980 ರಲ್ಲಿ ಸಂಗೀತಗಾರ ರಾಹುಲ್ ದೇವ್ ಬರ್ಮನ್ ಅವರನ್ನು ವಿವಾಹವಾದರು. ಆ ಬಳಿಕವೇ ಲತಾ ಮತ್ತು ಆಶಾ ಅವರ ಬಾಂಧವ್ಯ ಮತ್ತೆ ವೃದ್ಧಿಸಿತು ಎಂದು ಸಿನಿ ಲೋಕ ಹೇಳುತ್ತದೆ.
ಗಣಪತರಾವ್ ಭೋಂಸ್ಲೆ ಅವರು ಆಶಾ ಅವರಿಗೆ ಮಂಗೇಶ್ಕರ್ ಕುಟುಂಬದೊಂದಿಗೆ ಮಾತನಾಡಲೂ ಅವಕಾಶ ನೀಡುತ್ತಿರಲಿಲ್ಲವಂತೆ. ಲತಾ ಅವರ ಜೊತೆಗೆ ಹಾಡಲೂ ಅವಕಾಶ ನೀಡುತ್ತಿರಲಿಲ್ಲವಂತೆ. ಒಂದೊಮ್ಮೆ ಡುಯೆಟ್ ಸಾಂಗ್ ಹಾಡಲು ಅವಕಾಶ ಬಂದರೂ ಅಕ್ಕ-ತಂಗಿಗೆ ಮಾತನಾಡುವ ಅವಕಾಶವೂ ಇರುತ್ತಿರಲಿಲ್ಲ. ಈ ನೋವಿನ ಸಂಗತಿಯನ್ನು ಲತಾ ಅವರೇ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರು. ನಮ್ಮಿಬ್ಬರಲ್ಲಿ ಅತೀವವಾದ ಪ್ರೀತಿ ವಾತ್ಸಲ್ಯವಿತ್ತು, ಆದರೆ ಅದಕ್ಕೆ ಗಣಪತರಾವ್ ಭೋಂಸ್ಲೆ ಅವರೇ ಅಡ್ಡಿಯಾಗಿದ್ದರು. ಜನ ಅದನ್ನು ತಪ್ಪಾಗಿ ತಿಳಿದು ನಮ್ಮಿಬ್ಬರ ನಡುವೆ ಪೈಪೋಟಿ ಇತ್ತು, ದ್ವೇಷ ಹುಟ್ಟಿಕೊಂಡಿತ್ತು ಎಂದು ಬಣ್ಣ ನೀಡಿದ್ದರು ಮತ್ತು ಜನ ಅದನ್ನೇ ನಂಬಿದ್ದರು ಎಂದು ಹೇಳಿಕೊಂಡಿದ್ದಾರೆ.
ಲತಾ ಮತ್ತು ಆಶಾ ಬಾಲ್ಯದಿಂದಲೂ ಬಹಳ ಬಲವಾದ ಬಂಧವನ್ನು ಹೊಂದಿದ್ದರು. ಎಷ್ಟರಮಟ್ಟಿಗೆ ಎಂದರೆ ಶಾಲೆಯ ಮೊದಲ ದಿನದಂದು ಲತಾ ತನ್ನ ಸಹೋದರಿ ಆಶಾರನ್ನು ತನ್ನೊಂದಿಗೆ ಕರೆತರಲು ಅನುಮತಿಸದ ಕಾರಣ ಆವರಣವನ್ನು ತೊರೆದಿದ್ದರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.