ಗೋವಾದ ‘ಮಂಗೇಶ್ಕರ್’ ಹೆಸರು ಗಾನ ಕೋಗಿಲೆಯ ಮೂಲಕ ವಿಶ್ವವ್ಯಾಪಿ
Team Udayavani, Feb 6, 2022, 6:49 PM IST
ಪಣಜಿ : ಇಹಲೋಕದ ಯಾತ್ರೆ ಮುಗಿಸಿರುವ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಕುಟುಂಬ ಮೂಲ ಗೋವಾವಾಗಿತ್ತು.ಗೋವಾದ ಪ್ರಸಿದ್ಧ ಮಂಗೇಶಿ ದೇವಸ್ಥಾನದಲ್ಲಿ ನೆಲೆಗೊಂಡಿರುವ ಮಂಗೇಶ ಭಗವಂತ ಅವರ ಕುಟುಂಬದ ಕುಲದೇವರಾಗಿದ್ದ.
ಲತಾ ಮಂಗೇಶ್ಕರ್ ಅವರ ತಂದೆ, ಸಂಗೀತಗಾರ ಮತ್ತು ರಂಗ ಕಲಾವಿದ ದೀನನಾಥ್ ಮಂಗೇಶ್ಕರ್ ಅವರು ಮಂಗೇಶಿಯ ಗಣೇಶಭಟ್ ಭಿಕಾಜಿ ಅಭಿಷೇಕಿ ಮತ್ತು ಯೇಸುಬಾಯಿ ರಾಣೆಯವರ ಮಗ. ದೀನನಾಥ್ ಮಂಗೇಶ್ಕರ್ ಅವರ ಮೂಲ ಹೆಸರು ದೀನನಾಥ್ ಅಭಿಷೇಕಿ, ಇದನ್ನು ವಾಣಿ ಪ್ರಕಾಶನ ಪ್ರಕಟಿಸಿದ “ಲತಾ: ಸುರ್ ಗಾಥಾ” ನಲ್ಲಿ ಯತೀಂದ್ರ ಮಿಶ್ರಾ ಬರೆದಿದ್ದಾರೆ.
ಮಿಶ್ರಾ ಪ್ರಕಾರ, ಗ್ರಾಮ ಮತ್ತು ದೇವತೆಯೊಂದಿಗೆ ಸಂಪರ್ಕವನ್ನು ಹೊಂದಲು ದೀನನಾಥ್ ಕುಟುಂಬದ ಹೆಸರನ್ನು ‘ಮಂಗೇಶ್ಕರ್’ ಎಂದು ಮರುನಾಮಕರಣ ಮಾಡಲು ಬಯಸಿದ್ದರು.ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬಕ್ಕೆ ‘ಮಂಗೇಶ್ಕರ್’ ಎಂಬ ಬಿರುದು ಆ ಬಳಿಕವೇ ಸೇರಿದೆ.
ಅಂತಿಮವಾಗಿ, ಅವರ ಹಿರಿಯ ಮಗಳು ಲತಾ ಅವರ ಸಾಟಿಯಿಲ್ಲದ ಪ್ರತಿಭೆಯಿಂದ ಮಂಗೇಶ್ಕರ್ ಎಂಬ ಹೆಸರು ಪ್ರಪಂಚದಾದ್ಯಂತ ಪ್ರಸಿದ್ಧಗೊಂಡಿತು.
ಗೋವಾ ಮುಖ್ಯಮಂತ್ರಿ ಅಂತಿಮ ನಮನ
ಲತಾ ಮಂಗೇಶ್ಕರ್ ರವರು ಗೋವಾದೊಂದಿಗೆ ವಿಶೇಷ ಸಂಬಂಧ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಅಂತಿಮ ಯಾತ್ರೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್, ರವರು ಲತಾ ಮಂಗೇಶ್ಕರ್ ರವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.