HP ಯಿಂದ ಪೆವಿಲಿಯನ್ ಏರೋ 13 ಲ್ಯಾಪ್ ಟಾಪ್ ಗಳ ಬಿಡುಗಡೆ
72,999/- ಆರಂಭಿಕ ಬೆಲೆಯಲ್ಲಿ ಲಭ್ಯವಿದೆ
Team Udayavani, Mar 22, 2023, 2:20 PM IST
ಬೆಂಗಳೂರು: ಎಚ್ ಪಿ ಕಂಪೆನಿಯು ಭಾರತದಲ್ಲಿ ತನ್ನ ಹೊಸ ಪೆವಿಲಿಯನ್ ಏರೋ 13 ನೋಟ್‌ಬುಕ್‌ಗಳನ್ನು ಬಿಡುಗಡೆ ಮಾಡಿದೆ. ಇದು ಶಕ್ತಿಯುತ ಕಾರ್ಯಕ್ಷಮತೆಗಾಗಿ AMD Ryzen™ 7 ಪ್ರೋಸೆಸರ್ ಮತ್ತು Radeon™ ಗ್ರಾಫಿಕ್ಸ್ ಒಳಗೊಂಡಿದೆ
ಹೊಸ HP ಪೆವಿಲಿಯನ್ ಏರೋ 13 ಲ್ಯಾಪ್‌ಟಾಪ್ Wi-Fi6 ನೊಂದಿಗೆ ವೇಗದ ಮತ್ತು ವಿಶ್ವಾಸಾರ್ಹ ಸಂಪರ್ಕವನ್ನು ಹೊಂದಿದೆ. 10.5 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಇದ್ದು, ಯಾವುದೇ ಸ್ಥಳದಿಂದ ಕೆಲಸ, ಬ್ರೌಸಿಂಗ್ ಮತ್ತು ಸ್ಟ್ರೀಮಿಂಗ್ ಮಾಡಲು ಸೂಕ್ತವಾಗಿದೆ.
400 ನಿಟ್ಸ್ ಪ್ರಕಾಶಮಾನವಾದ ಮತ್ತು 16:10 ಆಕಾರ ಅನುಪಾತದ ಪರದೆ ಬಳಕೆದಾರರಿಗೆ ಉತ್ತಮ ವೀಕ್ಷಣೆಯ ಅನುಭವವನ್ನು ನೀಡುತ್ತದೆ. HP ಪೆವಿಲಿಯನ್ ಏರೋ 13 ಕೇವಲ 970 ಗ್ರಾಂ ಭಾರವಿದ್ದು, ಪೇಲ್ ರೋಸ್ ಗೋಲ್ಡ್, ವಾರ್ಮ್ ಗೋಲ್ಡ್ ಮತ್ತು ನ್ಯಾಚುರಲ್ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ.
HP ವಿನ್ಯಾಸಗೊಳಿಸಿದ ಹೊಸ ಪೆವಿಲಿಯನ್ ಏರೋ 13 ಲ್ಯಾಪ್‌ಟಾಪ್ ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ. HP ಪೆವಿಲಿಯನ್ ಏರೋ 13 ಆಕರ್ಷಕವಾದ ಪ್ರೀಮಿಯಂ ಲ್ಯಾಪ್ ಟಾಪ್ ಆಗಿದೆ. ಕೆಲಸ ಮತ್ತು ಗೇಮಿಂಗ್ – ಎರಡೂ ವಿಷಯಗಳಲ್ಲಿ ಬಳಕೆದಾರರಿಗೆ ಅಸಾಧಾರಣವಾಗಿ ಆಪ್ತವಾಗುತ್ತದೆ ಎಂದು HP ಇಂಡಿಯಾ ಪರ್ಸನಲ್ ಸಿಸ್ಟಮ್ಸ್ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ ತಿಳಿಸಿದ್ದಾರೆ.
ಸುಸ್ಥಿರತೆ ಮತ್ತು ಪರಿಸರ ರಕ್ಷಣೆಗೆ HP ಯ ಬದ್ಧತೆಗೆ ಅನುಗುಣವಾಗಿ HP ಪೆವಿಲಿಯನ್ ಏರೋ 13 ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ಬಳಸಿದ ಮರುಬಳಕೆಯ ಮತ್ತು ಸಾಗರದಿಂದ ಸಂಗ್ರಹಿಸಿದ ಪ್ಲಾಸ್ಟಿಕ್‌ನಿಂದ ನಿರ್ಮಿಸಲಾಗಿದೆ. VOC ಹೊರಸೂಸುವಿಕೆ ತಗ್ಗಿಸಲು ನೀರು-ಆಧಾರಿತ ಬಣ್ಣವನ್ನು ಬಳಸಲಾಗಿದೆ.
HP ಪೆವಿಲಿಯನ್ ಏರೋ 13
ಡಿಸ್‌ಪ್ಲೇ
• 16:10 ಆಕಾರ ಅನುಪಾತದೊಂದಿಗೆ HP ಯ ಪ್ರಥಮ ಪೆವಿಲಿಯನ್ ಲ್ಯಾಪ್‌ಟಾಪ್
• ತಡೆರಹಿತ ಬ್ರೌಸಿಂಗ್ ಅನುಭವಕ್ಕಾಗಿ 400 ನಿಟ್‌ಗಳಷ್ಟು ಪ್ರಕಾಶಮಾನ ಡಿಸ್‌ಪ್ಲೇ
• ಫ್ಲಿಕರ್-ರಹಿತ ಪರದೆ
• ವೀಕ್ಷಣೆಯ ಅಡ್ಡಿಗಳನ್ನು ನಿವಾರಿಸಲು 4-ಬದಿ ಕಿರಿದಾದ ಅಂಚಿನ ಡಿಸ್‌ಪ್ಲೇ
• ತೀಕ್ಷ್ಣವಾದ ಚಿತ್ರಗಳು ಮತ್ತು ಪಠ್ಯಕ್ಕಾಗಿ 2.5k ರೆಸಲ್ಯೂಶನ್
• ಬಿಸಿಲಿನಲ್ಲೂ ಬ್ರೌಸಿಂಗ್ ಮಾಡುವುದಕ್ಕಾಗಿ 400 ನಿಟ್ಸ್ ಪ್ರಕಾಶ
• 100% sRGB ಯೊಂದಿಗೆ ವಿಶಾಲ ಕಲರ್ ಪ್ಯಾಲೆಟ್
ಕಾರ್ಯಕ್ಷಮತೆ
• ಸುಗಮ ಕಾರ್ಯಕ್ಷಮತೆಗಾಗಿ AMD Ryzen™ 7000 ಸರಣಿಯ ಪ್ರೊಸೆಸರ್, Radeon™ ಗ್ರಾಫಿಕ್ಸ್
• Wi-Fi 6 ಜೊತೆಗೆ ವಿಶ್ವಾಸಾರ್ಹ ಮತ್ತು ವೇಗದ ಸಂಪರ್ಕ
• ತಡೆರಹಿತ ಕಲಿಕೆ ಮತ್ತು ಕೆಲಸಕ್ಕಾಗಿ 10.5 ಗಂಟೆಗಳ ಬ್ಯಾಟರಿ ಬಾಳಿಕೆ
• ಉತ್ತಮ ವೀಡಿಯೊ ಕರೆಗಳಿಗಾಗಿ AI ನಾಯ್ಸ್ ರಿಮೂವಲ್ ಸೌಕರ್ಯ
• ಕಾರ್ಯಗಳ ಬೇಡಿಕೆಯನ್ನು ನಿರ್ವಹಿಸಲು DDR5 RAM
ವಿನ್ಯಾಸ
• ಕೇವಲ 970 ಗ್ರಾಂ ಭಾರವಿದ್ದು, ಪೋರ್ಟಬಿಲಿಟಿಯನ್ನು ಖಚಿತಪಡಿಸುತ್ತದೆ.
• ಬೆಲೆ ಮತ್ತು ಲಭ್ಯತೆ
• HP Pavilion Aero 13 (Ryzen 5 ಸಹಿತ) INR 72,999/- ಆರಂಭಿಕ ಬೆಲೆಯಲ್ಲಿ ಲಭ್ಯವಿದೆ
• HP Pavilion Aero 13 (Ryzen 7 ಸಹಿತ) 1TB SSD INR 82,999/- ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp Pay: ಭಾರತದಲ್ಲಿ ವಾಟ್ಸ್ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.