ಗೋವಾ : ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಟಿಎಂಸಿ ಸೇರ್ಪಡೆಯಾದ ಲಿಯಾಂಡರ್ ಪೇಸ್
Team Udayavani, Oct 29, 2021, 5:29 PM IST
ಪಣಜಿ : ಹಿರಿಯ ಟೆನಿಸ್ ಆಟಗಾರ, ಲಿಯಾಂಡರ್ ಪೇಸ್ ಅವರು ಶುಕ್ರವಾರ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಸೇರ್ಪಡೆಗೊಂಡಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, “ಲಿಯಾಂಡರ್ ಪೇಸ್ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ. ಅವರು ನನ್ನ ಕಿರಿಯ ಸಹೋದರ. ನಾನು ಯುವಜನ ಸಚಿವೆಯಾದಾಗಿನಿಂದ ಅವರನ್ನು ಬಲ್ಲೆ ಮತ್ತು ಅವರು ತುಂಬಾ ಚಿಕ್ಕವರಾಗಿದ್ದರು” ಎಂದು ಹೇಳಿದರು.
ಮತ್ತೊಬ್ಬ ನಟಿ ಮತ್ತು ಸಾಮಾಜಿಕ ಕಾರ್ಯಕರ್ತೆ , ನಫೀಸಾ ಅಲಿ ಕೂಡ ಲಿಯಾಂಡರ್ ಪೇಸ್ ಸೇರ್ಪಡೆಯಾಗುವ ಕೆಲವೇ ಗಂಟೆಗಳ ಮೊದಲು ಟಿಎಂಸಿಗೆ ಸೇರಿದರು.
2022 ರಲ್ಲಿ ಗೋವಾ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಗುರುವಾರ ಗೋವಾಕ್ಕೆ ಆಗಮಿಸಿದ್ದು, ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ರಾಜಕೀಯ ಪ್ರವೇಶಕ್ಕೆ ಸಿದ್ಧತೆಗಳನ್ನು ಮಾಡುತ್ತಿದ್ದಾರೆ.
ಮೂರು ದಿನಗಳ ಭೇಟಿಗಾಗಿ ಗೋವಾಕ್ಕೆ ಆಗಮಿಸಿರುವ ಮಮತಾ ಬ್ಯಾನರ್ಜಿ ಅವರು ಚುನಾವಣೆ ಗೆಲ್ಲಲು ಎಲ್ಲಾ ರಣ ತಂತ್ರಗಳನ್ನು ಮಾಡುತ್ತಿದ್ದಾರೆ.
ಗೋವಾದ ಬಿಜೆಪಿ ಕಾರ್ಯಕರ್ತರು ಆಕೆಯನ್ನು ಹಿಂದೂ ವಿರೋಧಿ ಎಂದು ಕರೆದಿದ್ದು, ತಿರುಗೇಟು ನೀಡಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಮೊದಲಕ್ಷರವಾದ ‘ಟಿಎಂಸಿ’ ಎಂದರೆ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಎಂದಿದೆ.
ನಾನು ಹಿಂದೂ ಎಂಬ ಅಭಿಮಾನವಿದೆ
ಗೋವಾದ ಪಣಜಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ”ನಾನು ಇಲ್ಲಿ ನಿಮ್ಮ ಅಧಿಕಾರ ಕಸಿದುಕೊಳ್ಳಲು ಬಂದಿಲ್ಲ, ನಿಮಗೆ ಸಹಾಯ ಮಾಡಲು ಬಂದಿದ್ದೇನೆ. ಗೋವಾದ ಸಂಸ್ಕ್ರತಿ ಮತ್ತು ಪರಂಪರೆಯನ್ನು ಉಳಿಸಲು ಸಂಪೂರ್ಣ ಸುರಕ್ಷೆ ನೀಡಬೇಕಿದೆ. ನಾವು ಅಭಿಮಾನದಿಂದ ಬದುಕಬೇಕು. ನನ್ನ ಧರ್ಮದ ಚಾರಿತ್ರ್ಯ ಪ್ರಮಾಣಪತ್ರ ನೀಡಲು ಬಿಜೆಪಿ ಯಾರು? ನಾನು ಹಿಂದೂ ಎಂಬ ಅಭಿಮಾನವಿದೆ” ಎಂದರು.
”ನಾನು ಧರ್ಮನಿರಪೇಕ್ಷತೆಯ ಮೇಲೆ ವಿಶ್ವಾಸವಿಡುತ್ತೇನೆ. ನನ್ನ ಏಕಾತ್ಮತೆಯ ಮೇಲೆ ವಿಶ್ವಾಸವಿದೆ. ಭಾರತವು ನನ್ನ ಮಾತೃಭೂಮಿ ಎಂಬ ವಿಸ್ವಾಸವೂ ನನಗಿದೆ, ಗೋವಾ ಕೂಡ ನನ್ನ ಮಾತೃಭೂಮಿಯೇ ಆಗಿದೆ” ಎಂದರು.
”ನಾವು ಪ್ರಜಾಪ್ರಭುತ್ವದ ಪದ್ಧತಿಯಲ್ಲಿಯೇ ಚುನಾವಣೆ ಎದುರಿಸುತ್ತೇವೆ, ಆದರೆ ಬಿಜೆಪಿಯು ಚುನಾವಣೆಯ ಸಂದರ್ಭದಲ್ಲಿ ದಂಗೆ ಎಬ್ಬಿಸಲು ನೋಡುತ್ತಿದೆ. ಗೋವಾದ ಯುವಕರಿಗೆ ನಾವು ಮುಂಬರುವ ದಿನಗಳಲ್ಲಿ ಹೊಸ ಅವಕಾಶವನ್ನು ಸೃಷ್ಠಿಸಿಕೊಡಲಿದ್ದೇವೆ” ಎಂದು ಮಮತಾ ಬ್ಯಾನರ್ಜಿ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.