ಮಳೆ ಎದುರಿಸಲು ಸಮರ್ಥವಾಗಿ ಸಿದ್ಧವಾಗಲಿ ಆಡಳಿತ


Team Udayavani, May 22, 2023, 6:09 AM IST

rain 2

ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಮರುದಿನವೇ ಶಕ್ತಿಸೌಧದ ಹೊಸ್ತಿಲಲ್ಲೇ ಮಳೆಯ ಅಬ್ಬರಕ್ಕೆ ಮೊದಲ ಸಾವು ಸಂಭವಿಸಿದೆ. ಹೈದರಾಬಾದ್‌ ಮೂಲದ ಆರು ಜನರ ಕುಟುಂಬ ಬೆಂಗಳೂರಿಗೆ ಬಂದ ವೇಳೆ ಮಳೆನೀರು ತುಂಬಿಕೊಂಡಿದ್ದ ಕೆ.ಆರ್‌. ವೃತ್ತದಲ್ಲಿನ ಅಂಡರ್‌ಪಾಸ್‌ ಮೂಲಕ ಹಾದುಹೋಗುವಾಗ ಆ ಕುಟುಂಬದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಸರಕಾರ “ಹನಿಮೂನ್‌ ಮೂಡ್‌’ಗೆ ಜಾರುವ ಮುನ್ನವೇ ಈ ಘಟನೆ ನಡೆದಿದೆ. ಇದರೊಂದಿಗೆ ಸವಾಲಿನ ದಿನಗಳ ಸೂಚನೆ ಸಿಕ್ಕಿದೆ.

ಮುಂಗಾರು ಇನ್ನೂ ಆರಂಭಗೊಂಡಿಲ್ಲ. ಮಳೆಗಾಲದ ಅವಾಂತರಗಳನ್ನು ಎದುರಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಷ್ಟರಮಟ್ಟಿಗೆ ಸಜ್ಜುಗೊಂಡಿದೆ ಎಂಬುದನ್ನು ಈ ಘಟನೆ ಬಯಲುಗೊಳಿಸಿದೆ. ಅಷ್ಟೇ ಅಲ್ಲ, ಸರಕಾರವು ಅಧಿಕಾರಿಗಳಿಗೆ ಚಾಟಿ ಬೀಸದಿದ್ದರೆ ಮುಂದಿನ ದಿನಗಳು ಇನ್ನೂ ಭಯಾನಕ ಆಗಿರಲಿವೆ ಎಂಬ ಎಚ್ಚರಿಕೆಯನ್ನೂ ವರುಣ ನೀಡಿದಂತಿದೆ.

ಹಾಗೆ ನೋಡಿದರೆ ಸರಕಾರದ ಯೋಜನೆ ಪ್ರಕಾರ ಅಂಡರ್‌ಪಾಸ್‌ಗಳು ಮತ್ತು ಎತ್ತರಿಸಿದ ಮಾರ್ಗಗಳ ನಿರ್ಮಾಣದ ಉದ್ದೇಶ ಸುಗಮ ಸಂಚಾರ ಕಲ್ಪಿಸುವುದಾಗಿದೆ. ಆದರೆ ಆ ಅಂಡರ್‌ಪಾಸ್‌ಗಳೇ ಸಾವಿಗೆ ರಹದಾರಿಗಳಾಗುತ್ತಿರುವುದು ವಿಪರ್ಯಾಸ. ಘಟನೆ ನಡೆದ ಸ್ಥಳ ನಗರದ ಹೃದಯಭಾಗ. ವಿಧಾನಸೌಧ, ಬಹುಮಹಡಿ ಕಟ್ಟಡ, ಹೈಕೋರ್ಟ್‌ ಪಕ್ಕದಲ್ಲೇ ಎನ್ನುವುದು ಗಮನಿಸಬೇಕಾದ ಅಂಶ. ಇನ್ನೂ ವಿಚಿತ್ರವೆಂದರೆ ಕೇವಲ 30 ಮಿ.ಮೀ. ಮಳೆಯಾಗಿದೆ. ಅಷ್ಟಕ್ಕೇ ಇಷ್ಟು ದೊಡ್ಡ ಅವಾಂತರವಾಗಿದೆ. ನೂರಾರು ಮಿಲಿಮೀಟರ್‌ ಸುರಿದರೆ ಗತಿ ಏನು ಎಂಬ ಪ್ರಶ್ನೆಯನ್ನೂ ಈ ಘಟನೆ ಎತ್ತಿದೆ.

ಕೆ.ಆರ್‌. ವೃತ್ತದಲ್ಲಿನ ಪ್ರಕರಣ ಮಾತ್ರವಲ್ಲ; ನಗರದ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳು, ಅಂಡರ್‌ಪಾಸ್‌ಗಳಲ್ಲಿ ಕೂಡ ಸ್ಥಿತಿ ಭಿನ್ನವಾಗಿರಲಿಲ್ಲ. ಅವೆಲ್ಲವೂ ಬಹುತೇಕ ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ. ವಿಜಯನಗರದ ಶೋಭಾ ಆಸ್ಪತ್ರೆ ಬಳಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ ಎದುರೇ ಮರವೊಂದು ನೆಲಕಚ್ಚಿದೆ. ಕೂದಲೆಳೆಯಲ್ಲಿ ಅನಾಹುತ ತಪ್ಪಿದೆ. ಹಲವು ಕಾರುಗಳ ಮೇಲೆಯೇ ಮರಗಳು ಬಿದ್ದಿವೆ. ಬೀಳಬಹುದಾದ ಮರಗಳನ್ನು ಗುರುತಿಸಿ ಕಡಿತ ಅಥವಾ ತೆರವು ಕಾರ್ಯ ಮಾಡಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂಬ ಪ್ರಶ್ನೆಯನ್ನೂ ಎತ್ತುತ್ತದೆ. ಸಿಬಂದಿ ಚುನಾವಣೆ ಕರ್ತವ್ಯದಲ್ಲಿ “ಬ್ಯುಸಿ’ ಆಗಿದ್ದರು ಎಂಬ ಸಿದ್ಧ ಸಬೂಬನ್ನು ಸ್ಥಳೀಯ ಸಂಸ್ಥೆಗಳು ನೀಡಬಹುದು. ಆದರೆ ಹೀಗೆ ನಗರದಲ್ಲಿ ಮಳೆಗೆ ಜನರು ಸಾವನ್ನಪ್ಪು ತ್ತಿರುವುದು ಇದೇ ಮೊದಲಲ್ಲ; ಇದು ಪ್ರತೀ ವರ್ಷದ ಗೋಳು ಆಗಿದೆ. ಒಮ್ಮೊಮ್ಮೆ ಮಳೆಗೆ ರಸ್ತೆ ಗುಂಡಿಬಿದ್ದು, ಮತ್ತೂಮ್ಮೆ ವಾಹನದಲ್ಲಿ ಹೊರಟಾಗ ಮರಬಿದ್ದು, ಇನ್ನೊಮ್ಮೆ ರಾಜಕಾಲುವೆಯಲ್ಲಿ ಕೊಚ್ಚಿಹೋಗುವುದು ಸಾಮಾನ್ಯವಾಗಿದೆ.

ಪ್ರತೀ ಘಟನೆಯಲ್ಲೂ ರಾಜಕಾಲುವೆ ಒತ್ತುವರಿ ತೆರವು ಸದ್ದಾಗುತ್ತದೆ. ಅನಂತರ ಮಿಂಚಿನಂತೆ ಮಾಯವಾಗುತ್ತದೆ. ಈ ಹಿಂದೆ ರಾಜಕಾಲುವೆ ಎರಡೂ ಕಡೆಗಳಲ್ಲಿನ ತಡೆಗೋಡೆಗಳನ್ನು ಎತ್ತರಿಸಲು ಸಾವಿರಾರು ಕೋಟಿ ಸುರಿಯಲಾಗಿದೆ. ಪರಿ ಣಾಮ ಮಾತ್ರ ಗೊತ್ತಿಲ್ಲ. ಹೊಸ ಸರಕಾರ ಚಾಟಿ ಬೀಸುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕಿದೆ. ಆಗಾಗ್ಗೆ ಉಂಟಾಗುವ ಇಂಥ ಭಾರೀ ಮಳೆ, ಪ್ರವಾ ಹಕ್ಕೆ ಸರ್ವ ರೀತಿಯಲ್ಲೂ ಆಡಳಿತ ಸಿದ್ಧವಾಗಬೇಕಾಗಿದೆ.

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.