Football: ದೇಶದಲ್ಲಿ ಫುಟ್‌ಬಾಲ್‌ಗೂ ಕೂಡಿಬರಲಿ ಯೋಗ


Team Udayavani, Jul 9, 2023, 8:00 AM IST

football

ಭಾರತದ ಕ್ರೀಡಾಭಿಮಾನಿಗಳು ಹರ್ಷೋದ್ಗಾರಗಳ ನಡುವೆಯೇ “ವಂದೇ ಮಾತರಂ”, “ಮಾ ತುಜೇ ಸಲಾಂ” ಎಂದು ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸುತ್ತಿದ್ದರೆ, ಭಾರತದ ತಂಡದ ನಾಯಕ ಮೈದಾನದ ಮಧ್ಯದಲ್ಲಿ ನಿಂತು ಅಭಿಮಾನಿಗಳೊಂದಿಗೆ ತಾವು ಧ್ವನಿಗೂಡಿಸಿ ಖುಷಿಯಲ್ಲಿ ಪಾಲ್ಗೊಳ್ಳುತ್ತಾರೆ…ಇದು ಜು. 4ರಂದು ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಕಂಡು ಬಂದ ಫ‌ುಟ್‌ಬಾಲ್‌ ಪಂದ್ಯದ ದೃಶ್ಯ. ಹೌದು, ಭಾರತ ಮತ್ತು ಕುವೈಟ್‌ ನಡುವೆ ನಡೆದ ಸ್ಯಾಫ್ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯದಲ್ಲಿ ಭಾರತ ಗೆದ್ದು 9ನೇ ಬಾರಿ ಚಾಂಪಿಯನ್‌ ಪಟ್ಟವನ್ನು ಮುಡಿಗೇರಿಸಿಕೊಂಡಿತ್ತು.

ಕಾಲ್ಚೆಂಡಿನ ಆಟ ಜಗತ್ತಿನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿದೆ. ನ್ಯಾಶನಲ್‌ ಫ‌ುಟ್‌ಬಾಲ್‌ ಲೀಗ್‌ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಲೀಗ್‌. ಆದರೆ ಭಾರತವು ಸಮರ್ಥ ಫ‌ುಟ್‌ಬಾಲ್‌ ಆಟಗಾರರನ್ನು ಹೊಂದಿದ್ದರೂ, ಹಲವು ಚಾಂಪಿಯನ್‌ಶಿಪ್‌ಗ್ಳನ್ನು ಗೆದ್ದಿದ್ದರೂ ಜಾಗತಿಕ ಮಟ್ಟದಲ್ಲಿ ಖ್ಯಾತಿಗಳಿಸುವಲ್ಲಿ ವಿಫ‌ಲವಾಗಿದೆ. ಫಿಫಾ ವರ್ಲ್ಡ್ ರ್‍ಯಾಂಕಿಂಗ್‌ನಲ್ಲೂ ನೂರರೊಳಗಿನ ಸ್ಥಾನ ಪಡೆಯಲು ಭಾರತ ಹೆಣಗಾಡುತ್ತಿರುವುದನ್ನು ಕಂಡಾಗ ದೇಶದಲ್ಲಿ ಫ‌ುಟ್‌ಬಾಲ್‌ ಕ್ರೀಡೆ ಯಾವ ಹಂತದಲ್ಲಿದೆ ಎಂಬುದನ್ನು ನಾವೆಲ್ಲರೂ ಊಹಿಸಬಹುದಾಗಿದೆ.

ಭಾರತದಲ್ಲಿ 1937ರಿಂದ ರಾಷ್ಟ್ರೀಯ ಫ‌ುಟ್‌ಬಾಲ್‌ ತಂಡ ಅಸ್ತಿತ್ವದಲ್ಲಿದ್ದರೂ ಹೇಳಿಕೊಳ್ಳುವ ಸಾಧನೆಯನ್ನೇನು ಭಾರತ ಇದುವರೆಗೂ ತೋರಿಲ್ಲ. ಕೇವಲ ಫ‌ುಟ್‌ಬಾಲ್‌ ಅಲ್ಲ, ಕ್ರಿಕೆಟ್‌ ಅನ್ನು ಹೊರತುಪಡಿಸಿದರೆ ಉಳಿದೆಲ್ಲ ಕ್ರೀಡೆಗಳಲ್ಲೂ ಭಾರತ ಹಿಂದೆ ಬಿದ್ದಿದೆ. ಕ್ರಿಕೆಟ್‌ ಹೊರತುಪಡಿಸಿದಂತೆ ಉಳಿದ ಕ್ರೀಡೆಗಳ ಬಗೆಗೆ ಸರಕಾರ ಮತ್ತು ದೇಶದ ಜನತೆ ತೋರುತ್ತಿರುವ ನಿರ್ಲಕ್ಷ್ಯ ಹಾಗೂ ಪ್ರಚಾರದ ಕೊರತೆಯೂ ಪ್ರಮುಖ ಕಾರಣವಾಗಿದೆ. ನಾಲ್ಕು ದಶಕಗಳ ಹಿಂದಿನವರೆಗೂ ರಾಷ್ಟ್ರೀಯ ಕ್ರೀಡೆಯಾದ ಹಾಕಿಯಲ್ಲಿ ಭಾರತ ಗಮನಾರ್ಹ ಸಾಧನೆ ತೋರುತ್ತ ಬಂದಿದ್ದರೆ ಆ ಬಳಿಕ ಕ್ರಿಕೆಟ್‌ ತನ್ನ ಪಾರಮ್ಯವನ್ನು ಮೆರೆಯತೊಡಗಿತು. ಆದರೆ ಕಳೆದೊಂದು ದಶಕದಿಂದೀಚೆಗೆ ಭಾರತದಲ್ಲಿ ಟೆನಿಸ್‌, ಕುಸ್ತಿ, ಕಬಡ್ಡಿ, ಬ್ಯಾಡ್ಮಿಂಟನ್‌, ಶೂಟಿಂಗ್‌, ಬಾಕ್ಸಿಂಗ್‌ನಂತಹ ಕ್ರೀಡೆಗಳು ಸದ್ದು ಮಾಡತೊಡಗಿವೆ.

ಫಿಫಾ ರ್‍ಯಾಂಕಿಂಗ್‌
ಜಗತ್ತಿನಲ್ಲಿರುವ ವಿವಿಧ ಫ‌ುಟ್‌ಬಾಲ್‌ ತಂಡಗಳ ಪ್ರದರ್ಶನವನ್ನು ಆಧರಿಸಿ ಇಂಟರ್‌ನ್ಯಾಶನಲ್‌ ಫೆಡರೇಶನ್‌ ಆಫ್ ಫ‌ುಟ್‌ಬಾಲ್‌ ಅಸೋಸಿಯೇಶನ್‌ (ಫಿಫಾ) ತಂಡಗಳಿಗೆ ರ್‍ಯಾಂಕಿಂಗ್‌ ಅನ್ನು ನೀಡುತ್ತದೆ. 1992ರಿಂದ ಈ ರ್‍ಯಾಂಕಿಂಗ್‌ ಅನ್ನು ಫಿಫಾ ನೀಡುತ್ತಾ ಬಂದಿದೆ. ಫಿಫಾ ರ್‍ಯಾಂಕಿಂಗ್‌ನಲ್ಲಿ ಸ್ಥಾನ ಪಡೆದ ಮೊದಲ 31 ದೇಶಗಳು ಮಾತ್ರ ಫಿಫಾ ಫ‌ುಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯಲಿದೆ. ಈ ಬಾರಿಯ ರ್‍ಯಾಂಕಿಂಗ್‌ನಲ್ಲಿ ಫ‌ುಟ್‌ಬಾಲ್‌ ಕ್ರೀಡೆಯಲ್ಲೇ ಅತ್ಯಂತ ಖ್ಯಾತಿ ಗಳಿಸಿರುವ ಅರ್ಜೆಂಟೀನಾ ಮೊದಲ ಸ್ಥಾನವನ್ನು ಗಳಿಸಿದ್ದರೆ, ಬ್ರೆಝಿಲ್‌ ಎರಡನೇ ಸ್ಥಾನದಲ್ಲಿದೆ. ಈ ರ್‍ಯಾಂಕಿಂಗ್‌ನಲ್ಲಿ ಬ್ರೆಝಿಲ್‌ ಈಗಾಗಲೇ 13 ಬಾರಿ ಮೊದಲನೇ ಸ್ಥಾನವನ್ನು ಗಳಿಸಿದೆ. ಅರ್ಜೆಂಟೀನಾ ಮೂರನೇ ಬಾರಿ ಮೊದಲನೇ ಸ್ಥಾನವನ್ನು ಅಲಂಕರಿಸಿದೆ.

ಕ್ರಿಕೆಟ್‌ ಜನಪ್ರಿಯತೆಯ ತೊಡಕು
ಭಾರತದಲ್ಲಿ ಕ್ರಿಕೆಟ್‌ಗಿರುವಷ್ಟು ಅಭಿಮಾನಿಗಳು, ಅದಕ್ಕಿರುವಷ್ಟು ಜನಪ್ರಿಯತೆ ಫ‌ುಟ್‌ಬಾಲ್‌ಗಿಲ್ಲ. ಇದು ಸಹ ಫ‌ುಟ್‌ಬಾಲ್‌ನ ಜನಪ್ರಿಯತೆಗೆ ತೊಡಕಾಗಿರುವುದು ಕಾಣಬಹುದು. ಕ್ರಿಕೆಟ್‌ನಲ್ಲಿ ಭಾರತ ಎರಡೆರಡು ವಿಶ್ವಕಪ್‌ ಗೆದ್ದ ಮೇಲಂತೂ ವ್ಯಾವಹಾರಿಕ ದೃಷ್ಟಿಯಿಂದಲೂ ಕ್ರಿಕೆಟ್‌ ಬಹಳಷ್ಟು ಎತ್ತರಕ್ಕೆ ಏರಿದೆ. ಇದು ನೇರವಾಗಿ ಇತರ ಕ್ರೀಡೆಗಳ ಮೇಲೂ ಪ್ರಭಾವ ಬೀರಿದೆ. ಒಂದು ವೇಳೆ ನಮ್ಮ ಫ‌ುಟ್‌ಬಾಲ್‌ ತಂಡ ಕೂಡ ಪ್ರತಿಷ್ಠಿತ ಪಂದ್ಯಾವಳಿಯನ್ನು ಗೆದ್ದಿದ್ದರೆ, ಕ್ರಿಕೆಟ್‌ನೊಂದಿಗೆ ಫ‌ುಟ್‌ಬಾಲ್‌ನಲ್ಲೂ ಭಾರತ ಬಲಿಷ್ಠ ತಂಡಗಳಲ್ಲೊಂದಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿರುತ್ತಿತ್ತೇನೋ?

ಭಾರತೀಯ ಫ‌ುಟ್‌ಬಾಲ್‌ಗೆ ಭರವಸೆ ತುಂಬುತ್ತಿರುವ ಚೆಟ್ರಿ
ಸ್ಯಾಫ್ ಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಭಾರತದ ಯಶಸ್ಸಿನ ಬಹುಪಾಲು ಶ್ರೇಯ ಸಲ್ಲುವುದು ನಾಯಕ ಸುನಿಲ್‌ ಚೆಟ್ರಿಗೆ. 2012ರಿಂದ ಸತತವಾಗಿ ಭಾರತ ಫ‌ುಟ್‌ಬಾಲ್‌ ತಂಡವನ್ನು ಮುನ್ನಡೆಸುತ್ತಿರುವ ಚೆಟ್ರಿ ಭಾರತ ಫ‌ುಟ್‌ಬಾಲ್‌ನ ಅತ್ಯಂತ ಯಶಸ್ವಿ ನಾಯಕ. ಭಾರತ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದರೆ ಅದರ ಮುಖ್ಯ ರೂವಾರಿ ಸುನಿಲ್‌ ಚೆಟ್ರಿ. 2005ರಲ್ಲಿ ರಾಷ್ಟ್ರೀಯ ಫ‌ುಟ್‌ಬಾಲ್‌ ಅಂಗಳಕ್ಕೆ ಪದಾರ್ಪಣೆ ಮಾಡಿರುವ ಚೆಟ್ರಿ ತಮ್ಮ ಸುದೀರ್ಘ‌ ಎರಡು ದಶಕಗಳ ಫ‌ುಟ್‌ಬಾಲ್‌ ಜೀವನದಲ್ಲಿ ಭಾರತದ ಫ‌ುಟ್‌ಬಾಲ್‌ ಲೋಕದಲ್ಲಿ ಬೀರಿದ ಛಾಪು ಚಿಕ್ಕದಲ್ಲ.

ಎಎಫ್ಸಿ ಚಾಲೆಂಜ್‌ ಕಪ್‌, ಸ್ಯಾಫ್ ಚಾಂಪಿಯನ್‌ಶಿಪ್‌, ನೆಹರೂ ಕಪ್‌, ಇಂಟರ್‌ಕಾಂಟಿನೆಂಟಲ್‌ ಕಪ್‌, ತ್ರಿರಾಷ್ಟ್ರ ಸರಣಿಯಂತಹ ಪ್ರಮುಖ ಪಂದ್ಯಾವಳಿಯಲ್ಲಿ ಭಾರತ ವಿಜಯ ಗಳಿಸುವಲ್ಲಿ ಚೆಟ್ರಿ ಪ್ರಮುಖ ಪಾತ್ರ ವಹಿಸಿದ್ದಾರೆ. ಫ‌ುಟ್‌ಬಾಲ್‌ ಎಂದರೆ ಅಷ್ಟೊಂದು ತಲೆಕೆಡಿಸಿಕೊಳ್ಳದ ದೇಶದ ಕ್ರೀಡಾಭಿಮಾನಿಗಳು ಇಂದು ಮೈದಾನಕ್ಕೆ ಬಂದು ತಮ್ಮ ತಂಡಕ್ಕೆ ಉತ್ಸಾಹ ತುಂಬುತ್ತಿದ್ದಾರೆ ಎಂದರೆ ಅದರ ಹೆಚ್ಚಿನ ಶ್ರೇಯ ಚೆಟ್ರಿಗೆ ಸೇರಬೇಕು.

ಸುನಿಲ್‌ ಚೆಟ್ರಿ ಭಾರತದ ಪರ ಇಲ್ಲಿಯವರೆಗೂ 141 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. 92 ಗೋಲ್‌ಗ‌ಳನ್ನು ಗಳಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತೀ ಹೆಚ್ಚು ಗೋಲ್‌ ಗಳಿಸಿರುವವರ ಯಾದಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಈ ಸಾಧನೆ ಮಾಡಿದ ಭಾರತದ ಏಕೈಕ ಫ‌ುಟ್‌ಬಾಲ್‌ ಪಟು ಚೆಟ್ರಿ. ದಕ್ಷಿಣ ಏಷ್ಯಾದ ದೇಶಗಳ ನಡುವೆ ನಡೆಯುವ ಸ್ಯಾಫ್ ಚಾಂಪಿಯನ್‌ಶಿಪ್‌ನಲ್ಲೂ ಚೆಟ್ರಿ ಪಡೆ 9ನೇ ಬಾರಿ ಗೆಲವು ಸಾಧಿಸಿ ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ. ಭಾರತ ಸ್ಯಾಫ್ ಚಾಂಪಿಯನ್‌ಶಿಪ್‌ನಲ್ಲಿ ಈವರೆಗೆ 13 ಬಾರಿ ಫೈನಲ್‌ ಪ್ರವೇಶಿಸಿದೆ. ಈ ಪೈಕಿ 9 ಬಾರಿ ಗೆಲುವು ಸಾಧಿಸಿ ಚಾಂಪಿಯನ್‌ಶಿಪ್‌ನ್ನು ತನ್ನದಾಗಿಸಿಕೊಂಡಿದ್ದರೆ, ನಾಲ್ಕು ಬಾರಿ ಎದುರಾಳಿ ತಂಡಕ್ಕೆ ಶರಣಾಗಿ ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿದೆ.

ಕ್ರಿಕೆಟ್‌ ಜನಪ್ರಿಯತೆಯ ತೊಡಕು
ಭಾರತದಲ್ಲಿ ಕ್ರಿಕೆಟ್‌ಗಿರುವಷ್ಟು ಅಭಿಮಾನಿಗಳು, ಅದಕ್ಕಿರುವಷ್ಟು ಜನಪ್ರಿಯತೆ ಫ‌ುಟ್‌ಬಾಲ್‌ಗಿಲ್ಲ. ಇದು ಸಹ ಫ‌ುಟ್‌ಬಾಲ್‌ನ ಜನಪ್ರಿಯತೆಗೆ ತೊಡಕಾಗಿರುವುದು ಕಾಣಬಹುದು. ಕ್ರಿಕೆಟ್‌ನಲ್ಲಿ ಭಾರತ ಎರಡೆರಡು ವಿಶ್ವಕಪ್‌ ಗೆದ್ದ ಮೇಲಂತೂ ವ್ಯಾವಹಾರಿಕ ದೃಷ್ಟಿಯಿಂದಲೂ ಕ್ರಿಕೆಟ್‌ ಬಹಳಷ್ಟು ಎತ್ತರಕ್ಕೆ ಏರಿದೆ. ಇದು ನೇರವಾಗಿ ಇತರ ಕ್ರೀಡೆಗಳ ಮೇಲೂ ಪ್ರಭಾವ ಬೀರಿದೆ. ಒಂದು ವೇಳೆ ನಮ್ಮ ಫ‌ುಟ್‌ಬಾಲ್‌ ತಂಡ ಕೂಡ ಪ್ರತಿಷ್ಠಿತ ಪಂದ್ಯಾವಳಿಯನ್ನು ಗೆದ್ದಿದ್ದರೆ, ಕ್ರಿಕೆಟ್‌ನೊಂದಿಗೆ ಫ‌ುಟ್‌ಬಾಲ್‌ನಲ್ಲೂ ಭಾರತ ಬಲಿಷ್ಠ ತಂಡಗಳಲ್ಲೊಂದಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿರುತ್ತಿತ್ತೇನೋ?

1950ರಲ್ಲಿ ವಿಶ್ವಕಪ್‌ ಅರ್ಹತೆ ಗಳಿಸಿತ್ತು ಭಾರತ!
1950-1960ರ ದಶಕವನ್ನು ಭಾರತೀಯ ಫ‌ುಟ್‌ಬಾಲ್‌ನ ಸುವರ್ಣಯುಗವೆಂದೇ ಪರಿಗಣಿಸಲಾಗಿದೆ. ಬ್ರೆಝಿಲ್‌ನಲ್ಲಿ ನಡೆದ 1950ರ ಫಿಫಾ ವಿಶ್ವಕಪ್‌ನಲ್ಲಿ ಆಡಲು ಭಾರತ ನೇರ ಅರ್ಹತೆ ಪಡೆದಿತ್ತು. ಆದರೆ ಬರಿಗಾಲಿನಲ್ಲಿ ಆಡುವುದಕ್ಕೆ ಫಿಫಾ ನಿರಾಕರಿಸಿದ್ದರಿಂದ ಭಾರತ ಟೂರ್ನಿಯಿಂದ ಹಿಂದುಳಿಯಿತು. ಆದರೆ ಇನ್ನೊಂದು ಮೂಲದ ಪ್ರಕಾರ ಪ್ರಯಾಣದ ವೆಚ್ಚ ಭರಿಸುವುದು, ಅಭ್ಯಾಸಕ್ಕೆ ಕಾಡಿದ ಸಮಯದ ಅಭಾವ ಮತ್ತು ವಿಶ್ವಕಪ್‌ಗಿಂತ ಒಲಿಂಪಿಕ್ಸ್‌ಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದರಿಂದ ಭಾರತ ವಿಶ್ವಕಪ್‌ನಿಂದ ಹಿಂದಕ್ಕೆ ಸರಿಯಿತು ಎನ್ನಲಾಗುತ್ತದೆ. ಅನಂತರ ಭಾರತ ಫಿಫಾ ವಿಶ್ವಕಪ್‌ ಆಡಲು ಅರ್ಹತೆ ಪಡೆದಿಲ್ಲ. ಒಂದು ವೇಳೆ ಭಾರತ ಅಂದು ವಿಶ್ವಕಪ್‌ನಿಂದ ಹಿಂದೆ ಸರಿಯದೇ ಇದ್ದಿದ್ದರೆ ಇಂದು ಭಾರತದಲ್ಲಿ ಫ‌ುಟ್‌ಬಾಲ್‌ ಜನಪ್ರಿಯ ಕ್ರೀಡೆಯಾಗಿರುತ್ತಿತ್ತೇನೋ?

ಸ್ಥಾನ ಪಡೆದಿದ್ದೇ ಭಾರತದ ಅತ್ಯುತ್ತಮ ರ್‍ಯಾಂಕಿಂಗ್‌
ಈ ಬಾರಿಯ ಫಿಫಾ ರ್‍ಯಾಂಕಿಂಗ್‌ನಲ್ಲಿ ಭಾರತ 100ನೇ ಸ್ಥಾನವನ್ನು ಗಳಿಸಿದೆ. ಸ್ಯಾಫ್ ಚಾಂಪಿಯನ್‌ಶಿಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಫೈನಲ್‌ ತಲುಪುವ ಮೂಲಕ ಭಾರತದ ಫ‌ುಟ್‌ಬಾಲ್‌ ತಂಡ ಫಿಫಾ ರ್‍ಯಾಂಕಿಂಗ್‌ನಲ್ಲಿ ಮತ್ತೆ ನೂರರೊಳಗಿನ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಗಿದೆ. 2019ರಲ್ಲಿ 96ನೇ ರ್‍ಯಾಂಕ್‌ ಪಡೆದಿದ್ದರೆ, 1996ರಲ್ಲಿ 94ನೇ ಸ್ಥಾನ ಪಡೆದಿದ್ದೇ ಇಲ್ಲಿಯವರೆಗಿನ ಭಾರತದ
ಉತ್ತಮ ರ್‍ಯಾಂಕಿಂಗ್‌ ಆಗಿದೆ.

ಬದಲಾಗುತ್ತಿರುವ ಸಮಯ…!
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಫ‌ುಟ್‌ಬಾಲ್‌ ಬೆಳವಣಿಗೆಗೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌)ನಂತಹ ಟೂರ್ನಮೆಂಟ್‌ಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಯೂರೋಪಿನ ಜನಪ್ರಿಯ ಕ್ಲಬ್‌ಗಳು ಭಾರತದಲ್ಲಿ ಫ‌ುಟ್‌ಬಾಲ್‌ ಬೆಳವಣಿಗೆಗೆ ನೆರವಾಗಲು ಆಸಕ್ತಿ ತೋರುತ್ತಿರುವುದು ಸಂತಸದ ವಿಷಯವಾದರೂ ದೇಶಿಯ ಪ್ರೋತ್ಸಾಹದ ಅಗತ್ಯವೂ ಇದೆ.

ಈ ನಿಟ್ಟಿನಲ್ಲಿ ಎಐಎಫ್ಎಫ್ ಮತ್ತು ರಾಜ್ಯ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಬೇಕು. ರಾಜ್ಯ ಮಟ್ಟದಲ್ಲಿ ಎಲ್ಲ ವಯೋಮಾನದ ತಂಡಗಳನ್ನು ರಚಿಸಿ, ಅವುಗಳ ನಡುವೆ ಸ್ಪರ್ಧೆ ಏರ್ಪಡಿಸುತ್ತಿರಬೇಕು. ಪ್ರತೀ ರಾಜ್ಯದಲ್ಲಿಯೂ ಫ‌ುಟ್‌ಬಾಲ್‌ಗೆಂದೇ ಪ್ರತ್ಯೇಕ ಕ್ರೀಡಾಂಗಣದ ವ್ಯವಸ್ಥೆ ಮಾಡಬೇಕು. ರಣಜಿಯಂತೆ ದೇಶೀಯ ಪಂದ್ಯಾವಳಿಗಳನ್ನು ಆಯೋಜಿಸಬೇಕು. ಗ್ರಾಮ ಮಟ್ಟದಲ್ಲಿಯೇ ತರಬೇತಿ ಶಿಬಿರಗಳನ್ನು ಏರ್ಪಡಿಸುವ ಮೂಲಕ ಪ್ರತಿಭಾನ್ವಿತ ಆಟಗಾರರಿಗೆ ಪ್ರೋತ್ಸಾಹ ನೀಡಬೇಕು. ಆಟಗಾರರಿಗೆ ಎಲ್ಲ ರೀತಿಯ ಉತ್ತಮ ಮಟ್ಟದ ಮೂಲ ಸೌಕರ್ಯ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಫ‌ುಟ್‌ಬಾಲ್‌ ಅಭಿವೃದ್ಧಿಗೆ ಪೂರಕವಾಗಿ ಈ ರೀತಿಯ ಇನ್ನಷ್ಟು ಕ್ರಮಗಳನ್ನು ಕೈಗೊಂಡಲ್ಲಿ ಭಾರತವು ಫ‌ುಟ್‌ಬಾಲ್‌ನಲ್ಲಿ ಬಲಿಷ್ಠ ತಂಡವಾಗಿ ಬೆಳೆಯಲು ಸಾಧ್ಯ. ದೇಶಿಯವಾಗಿ ಫ‌ುಟ್‌ಬಾಲ್‌ಗೆ ಮನ್ನಣೆ ದೊರತರೆ ಫಿಫಾ ವಿಶ್ವಕಪ್‌ನಲ್ಲಿ ಆಡುವ ಕನಸು ನನಸಾಗಬಹುದು.

-ಸುಶ್ಮಿತಾ ನೇರಳಕಟ್ಟೆ

ಟಾಪ್ ನ್ಯೂಸ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asssaa

ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ

5-spcl

India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !

4-ed

Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್‌

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.