ಸಂಸತ್ತಿನಲ್ಲಿ ಗಡಿ ಕಿಚ್ಚು : ಶಿವಸೇನೆ ಪ್ರಸ್ತಾವ; ಕೆರಳಿದ ರಾಜ್ಯದ ಸಂಸದರು
Team Udayavani, Mar 16, 2021, 7:12 AM IST
ಹೊಸದಿಲ್ಲಿ: ಬೆಳಗಾವಿ ಗಡಿ ವಿಚಾರದಲ್ಲಿ ಮತ್ತೆ ಕಾಲು ಕೆರೆದಿರುವ ಶಿವಸೇನೆಯು ಸೋಮವಾರ ಲೋಕಸಭೆಯಲ್ಲೂ ಈ ವಿಚಾರವನ್ನೆತ್ತಿ ಅನಗತ್ಯ ಗದ್ದಲ ಎಬ್ಬಿಸಿದೆ. “ಬೆಳಗಾವಿಯಲ್ಲಿ ಮರಾಠಿಗರಿಗೆ ರಕ್ಷಣೆ ಇಲ್ಲ’ ಎಂದು ಶಿವಸೇನೆ ಸಂಸದ ಅರವಿಂದ್ ಸಾವಂತ್ ಹೇಳಿದರೆ, ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಸ್ಪಷ್ಟ ಉತ್ತರ ನೀಡಿ ಬಾಯಿ ಮುಚ್ಚಿಸಿದ್ದಾರೆ.
ಶೂನ್ಯವೇಳೆಯಲ್ಲಿ ಈ ವಿಚಾರ ಎತ್ತಿದ ಸಾವಂತ್, ಬೆಳಗಾವಿಯ ಮರಾಠಿ ಭಾಷಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಸ್ವಾತಂತ್ರ್ಯ ಬಂದ ಬೆನ್ನಲ್ಲೇ ಎಲ್ಲ ಭಾಷಾವಾರು ಪ್ರಾಂತ್ಯಗಳನ್ನು ವಿಂಗಡಿಸಿ ಆಯಾ ಭಾಷಿಕರು ಇರುವ ಪ್ರಾಂತ್ಯಗಳನ್ನು ಒಗ್ಗೂಡಿಸಿ ರಾಜ್ಯಗಳನ್ನು ರಚಿಸಲಾಯಿತು. ಆಗ ಬೆಳಗಾವಿ ಜಿಲ್ಲೆ ಕರ್ನಾಟಕಕ್ಕೆ ಸೇರ್ಪಡೆ ಗೊಂಡಿರಲಿಲ್ಲ. ಅನಂತರ ಅದನ್ನು ಕರ್ನಾಟಕಕ್ಕೆ ಸೇರಿಸಲಾಯಿತು ಎಂದು ಆರೋಪಿಸಿದರು.
ಇದು ಕರ್ನಾಟಕ ಸಂಸದರನ್ನು ಕೆರಳಿಸಿತು. ಉಭಯ ಪಕ್ಷಗಳ ಸಂಸದರ ನಡುವೆ ವಾಗ್ವಾದ ನಡೆಯಿತು. ಗದ್ದಲದ ನಡುವೆ ಮಾತನಾಡಿದ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ, ಶಿವಸೇನೆಯು ಅಧಿಕಾರಕ್ಕಾಗಿ ತನ್ನ ಹಿಂದುತ್ವ ಸಿದ್ಧಾಂತವನ್ನೇ ಬದಿಗೊತ್ತಿದೆ. ಆ ವಿಚಾರವಾಗಿ ಮಹಾರಾಷ್ಟ್ರದ ಜನರು ಶಿವಸೇನೆಯ ಮೇಲೆ ಅಸಮಾಧಾನಗೊಂಡಿದ್ದಾರೆ. ಈಗ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಶಿವಸೇನೆ ಗಡಿ ವಿವಾದಕ್ಕೆ ತುಪ್ಪ ಸುರಿಯುತ್ತಿದೆ. ಶಿವಸೇನೆಯ ಸಂಸದರು ಲೋಕಸಭೆಯಲ್ಲಿ ಗಡಿ ವಿಚಾರ ಎತ್ತುತ್ತಿರುವುದರ ಉದ್ದೇಶ ಇದು ಎಂದು ಟೀಕಿಸಿದರು.
“ಬೆಳಗಾವಿ ಗಡಿ ಸಮಸ್ಯೆಯು 1964ರ ಮಹಾಜನ್ ವರದಿಯ ಅನುಷ್ಠಾನದಿಂದ ನಿವಾರಣೆಯಾಗಿದೆ. ಈಗ ಮತ್ತೆ ಆ ವಿಚಾರವನ್ನು ಕೆದಕುವ ಪ್ರಮೇಯವಿಲ್ಲ’ ಎಂದು ಉದಾಸಿ ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.