Lokasabha: ಕಾಂಗ್ರೆಸ್‌ಗೆ 100ಕ್ಕೆ 99 ಸಿಕ್ಕಿದ್ದಲ್ಲ- ಪ್ರಧಾನಿ ಮೋದಿ ವಾಗ್ದಾಳಿ
ಎನ್‌ಡಿಎ ಸರ್ಕಾರ “ಸಂತುಷ್ಟೀಕರಣʼ ನೀತಿ ಹೊಂದಿದೆ, ತುಷ್ಟೀಕರಣ ಅಳವಡಿಸಿಲ್ಲ
Team Udayavani, Jul 2, 2024, 7:45 PM IST
ನವದೆಹಲಿ: ಕೇಂದ್ರದ ಎನ್‌ಡಿಎ ಸರ್ಕಾರವು ‘ಸಂತುಷ್ಟೀಕರಣʼ ನೀತಿಯನ್ನು ಅನುಸರಿದೆ ಹೊರತು ‘ತುಷ್ಟೀಕರಣʼವನ್ನು ಅನುಸರಿಸಿಲ್ಲ ಎಂದು ವಿಪಕ್ಷ ಇಂಡಿಯಾ ಕೂಟ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.
ಮೂರನೇ ಬಾರಿಗೆ ಪ್ರಧಾನಮಂತ್ರಿಯಾದ ಬಳಿಕ ೧೮ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸಿ ಮಾತನಾಡುವ ವೇಳೆ ವಿಪಕ್ಷ ಇಂಡಿಯಾ ಕೂಟದ ಸದಸ್ಯರು ಘೋಷಣೆಗಳ ಕೂಗುತ್ತ ಅಡ್ಡಿಪಡಿಸುತ್ತಿದ್ದರೂ ಭಾಷಣ ಮುಂದುವರಿಸಿದ ಪ್ರಧಾನಿ ಮೋದಿ ಪ್ರತಿಪಕ್ಷಗಳು ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
“ತುಷ್ಟೀಕರಣ ರಾಜಕಾರಣವನ್ನು ದೇಶ ಬಹುಕಾಲ ನೋಡಿದೆ. ನಾವು ತುಷ್ಟಿಕರಣವನ್ನಲ್ಲ ’ಸಂತುಷ್ಟಿಕರಣʼ ವನ್ನು ಅನುಸರಿಸಿದ್ದೇವೆ. ಎಲ್ಲರಿಗೂ ನ್ಯಾಯ ಎಂಬುದು ನಮ್ಮ ಧ್ಯೇಯ. “ಇದು ಕಾಂಗ್ರೆಸ್‌ನ ಇತಿಹಾಸದಲ್ಲಿ ಮೂರನೇ ಅತಿ ದೊಡ್ಡ ಸೋಲು. ಕಾಂಗ್ರೆಸ್ ತನ್ನ ಸೋಲನ್ನು ಒಪ್ಪಿಕೊಂಡು ಜನರ ಆದೇಶವನ್ನು ಗೌರವಿಸಿದ್ದರೆ ಅದು ಉತ್ತಮವಾಗಿರುತ್ತಿತ್ತು. ಆದರೆ, ಅವರು ಕೆಲವು ‘ಶೀರ್ಷಾಸನ ಮಾಡುವಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ನವರೇ ನಮ್ಮನ್ನು ಸೋಲಿಸಿದ್ದಾರೆ ಎಂದು ಭಾರತದ ನಾಗರಿಕರ ಮನಸ್ಸಿನಲ್ಲಿ ಅಭಿಪ್ರಾಯ ಮೂಡಿಸುವ ಹೇಳಿಕೆಗಳ ನೀಡುತ್ತಾ ಓಡಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ೧೦೦ಕ್ಕೆ ೯೯ ಪಡೆದಿದ್ದಲ್ಲ, ರಾಹುಲ್ ಮಗು ಎಂದ ಮೋದಿ:
ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿರನ್ನು “ಮಗು” ಎಂದು ಬಣ್ಣಿಸಿದ್ದಾರೆ. ರಾಹುಲ್ ಗಾಂಧಿಯನ್ನು ಗುರಿಯಾಗಿಸಲು ಶಾಲಾ ಮಗುವಿನ ಕತೆಯೊಂದನ್ನು ಹೇಳಿದ ಅವರು, ನಮ್ಮ ಈ ಮಗು ಸೋಲಿನಲ್ಲಿ “ಹೊಸ ವಿಶ್ವ ದಾಖಲೆ” ಮಾಡಿದೆ ಎಂದು ತಮಾಷೆ ಮಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿಈ ಬಾರಿ ಕಾಂಗ್ರೆಸ್ 99 ಸ್ಥಾನಗಳ ಗಳಿಸಿತು. ಇದು ಮಗುವಿನ ಕತೆ ನೆನಪಿಗೆ ತರುತ್ತದೆ. ಮಗುವೊಂದು ತಾನು 99 ಅಂಕಗಳನ್ನು ಪಡೆದಿದ್ದೇನೆ ಎಂದು ಎಲ್ಲರಿಗೂ ಹೇಳಿ ಖುಷಿ ಪಡುತ್ತಿತ್ತು. ಅದನ್ನು ಕೇಳಿ ಎಲ್ಲರೂ ಆ ಮಗುವಿನ ಬೆನ್ನು ತಟ್ಟುತ್ತಿದ್ದರು. ಆಗ ಬಂದ ಟೀಚರ್ ಆ ಮಗುವಿನ ಬಳಿ ನೀನೇಕೆ ಸ್ವೀಟ್ ಹಂಚುತ್ತಿದ್ದೀಯ? ಎಂದು ಕೇಳಿದರು. ವಾಸ್ತವದ ವಿಷಯ ಏನೆಂದರೆ ಆ ಮಗು 100ಕ್ಕೆ 99 ಅಂಕ ಪಡೆದಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ಮಗುವಿಗೆ 543ರಲ್ಲಿ 99 ಅಂಕ ಪಡೆದಿತ್ತು ಎಂದು ಮೋದಿ ಹಾಸ್ಯಾಸ್ಪದವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಕಾಲೆಳೆದಿದ್ದಾರೆ.
#WATCH | PM Modi says, “…These are the people who tried to coin the term Hindu terrorism. Their partners compare Hinduism with words like dengue, malaria. The country will never forgive them. As part of a well-planned strategy, their entire system has made it fashionable to… pic.twitter.com/BNcKagA19H
— ANI (@ANI) July 2, 2024
ಮೋದಿ ಭಾಷಣ ಪ್ರಮುಖಾಂಶಗಳು
1. ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಗಾಗಿ ದೇಶವು ಎನ್‌ಡಿಎಗೆ ಮತ ಹಾಕಿದೆ. 2047ರ ಭಾರತ ಸಂಪೂರ್ಣವಾಗಿ ಬದಲಾಗಿರಲಿದೆ. ನಾವು ಜನರಿಗಾಗಿ 24 ಗಂಟೆಯೂ ಕೆಲಸ ಮಾಡುತ್ತಿದ್ದೇವೆ.
2. “ಕಾಂಗ್ರೆಸ್ ಮತ್ತು ಅದರ ಪರಿಸರ ವ್ಯವಸ್ಥೆಯು ನಮ್ಮನ್ನು ಸೋಲಿಸಿದೆ ಎಂದು ಜನರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌ಗೆ ಜನರ ಜನಾದೇಶವೆಂದರೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದು. ಕಾಂಗ್ರೆಸ್ ಸತತ ಮೂರು ಬಾರಿ 100 ಅಂಕಗಳನ್ನು ದಾಟಲು ಸಾಧ್ಯವಾಗಲಿಲ್ಲ.
3. ನಮ್ಮ ಮೂರನೇ ಅವಧಿ ಎಂದರೆ ೨೦೪೭ರ ವಿಕಸಿತ ಭಾರತಕ್ಕಾಗಿ ಮೂರು ಪಟ್ಟು ಹೆಚ್ಚು ಶಕ್ತಿ ಹಾಕಿ ಕೆಲಸದ ವೇಗ ಮೂರು ಪಟ್ಟು ಹೆಚ್ಚಿಸುವುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.