ಅಂಧರ ಲಿಪಿಯ ಹರಿಕಾರ ಲೂಯಿ ಬ್ರೈಲ್‌

ಇಂದು ವಿಶ್ವ  ಬ್ರೈಲ್‌‌ ದಿನ

Team Udayavani, Jan 4, 2021, 6:10 AM IST

ಅಂಧರ ಲಿಪಿಯ ಹರಿಕಾರ ಲೂಯಿ ಬ್ರೈಲ್‌

ನಾ ಕಾಣೋ ಲೋಕವನ್ನು ಕಾಣೋರು ಯಾರೋ…? ಬಾಹ್ಯದ ದೃಷ್ಟಿ ಗೋಚರಿಸದಿದ್ದರೂ ಅಂತರಂಗದ ದಿವ್ಯ ದೃಷ್ಟಿಯೊಳಗೆ ಕಾಣುವ ಲೋಕವನ್ನು ಅಂಧ ನೊಬ್ಬ ಬಣ್ಣಿಸುವ ಬಗೆ ಇದಾಗಿದೆ. ಅಂಧರ ಹೊರ ಗಣ್ಣು ಮಸುಕಾಗಿದ್ದರೂ ಅಂತರಂಗದ ಕಣ್ಣು ಸದಾ ಬೆಳಕಿನತ್ತಲೇ ಹಾತೊರೆಯುತ್ತಿರುತ್ತದೆಯಂತೆ. ಅಂಧ ರಿಗೆ ಅಂಥ ಬೆಳಕಿನ ಹಾದಿ ತೋರಿದ ಮಹಾನುಭಾವ ಲೂಯಿ ಬ್ರೈಲ್‌‌ ಅವರನ್ನು ನೆನಪಿಸುವ ದಿನವೇ ವಿಶ್ವ ಬ್ರೈಲ್‌ ದಿನ.

ಪ್ರತಿಯೊಬ್ಬ ಮಹಾಸಾಧಕನ ಹಿಂದೆ ಆತನ ಜೀವನಾನುಭವ ಇದ್ದೇ ಇರುತ್ತದೆ. ಲೂಯಿ ಬ್ರೆ„ಲ್‌ ಜೀವನದಲ್ಲೂ ಅದೇ ಅಗಿರುವಂಥದ್ದು. ತುಂಬ ಬಡತನ ದಿಂದಲೇ ಬೆಳೆದ ಕುಟುಂಬ ಲೂಯಿ ಬ್ರೆ„ಲ್‌ ಅವರದು. ಫ್ರಾನ್ಸ್‌ ದೇಶದ ಕೂವ್ರೆ ಗ್ರಾಮದಲ್ಲಿ 1809ರ ಜ. 4ರಂದು ಸೈಮನ್‌ ರೆ ಬ್ರೈಲ್‌ ‌-ಮೋನಿಕಾ ಬ್ರೈಲ್‌‌ ದಂಪತಿಗೆ ಜನಿಸಿದವರೇ ಲೂಯಿ. ಲೂಯಿ ಬ್ರೆ„ಲ್‌ ಜನಿಸಿದಾಗ ಎಲ್ಲವೂ ಸರಿಯಿತ್ತು. ತಂದೆ ಸೈಮನ್‌ರದು ಕುದುರೆ ಸವಾರರಿಗೆ ಚರ್ಮದ ಜೀನ್‌ ತಯಾರಿಸುವ ವೃತ್ತಿ. ಲೂಯಿಗೆ ಆಗಿನ್ನು ಮೂರು ವರ್ಷ. ಆಟವಾ ಡುತ್ತ ತಂದೆ ಕೆಲಸ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಬಂದ ಲೂಯಿ ಚೂಪಾದ ದಬ್ಬಣ ತೆಗೆದುಕೊಂಡು ಅಲ್ಲಿ ಬಿದ್ದಿದ್ದ ಚರ್ಮಕ್ಕೆ ಚುಚ್ಚಲಾರಂಭಿಸಿದ. ಕ್ಷಣಮಾತ್ರದಲ್ಲಿ ಕೈಯಲ್ಲಿದ್ದ ದಬ್ಬಣ ಅವನ ಎಡಕಣ್ಣಿಗೆ ಚುಚ್ಚಿತು. ಕಣ್ಣಿನಿಂದ ರಕ್ತ ಸುರಿಯಲಾರಂಭಿಸಿತು. ಆಗಿನ್ನೂ ಔಷಧಗಳು ಆವಿಷ್ಕಾರಗೊಂಡಿರಲಿಲ್ಲ. ಕೆಲವು ಗಿಡ ಮೂಲಿಕೆಗಳಿಂದ ಕಣ್ಣಿಗೆ ಚಿಕಿತ್ಸೆ ನೀಡಲಾಯಿತು. ದಿನ ಕಳೆದಂತೆ ಕಣ್ಣು ಕೆಂಪಾಗಿ ಊದಿಕೊಳ್ಳಲು ಫ್ರಾರಂಭವಾಯಿತು. ಕೀವು ಉಂಟಾಗಿ ಸೋಂಕಾಗಿ ಬಲಗಣ್ಣಿಗೂ ಘಾಸಿಯುಂಟು ಮಾಡಿತು. ಪರಿಣಾಮ ಎಲ್ಲವೂ ಮಂಜಿನಂತೆ ಕಾಣತೊಡಗಿದವು. ದೃಷ್ಟಿ ದುರ್ಬಲವಾಗಿ ತನ್ನ ಐದನೇ ವಯಸ್ಸಿನಲ್ಲಿ ಲೂಯಿ ಶಾಶ್ವತವಾಗಿ ಕುರುಡನಾದ. ಇದು ಅವನ ಜೀವನವನ್ನೇ ಬದಲಾಯಿಸಿತು.

ಸಾಧನೆಯ ಹೆಬ್ಟಾಗಿಲು ತೆರೆಸಿತು: ಕಣ್ಣು ಕಳೆದು ಕೊಂಡರೂ ಓದಿನ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಲೂಯಿ ಯೌವನದ ಹೊಸ್ತಿಲಿಗೆ ಕಾಲಿಡುತ್ತಲೇ ಅಂಧರಿಗಾಗಿ ಬ್ರೈಲ್‌‌ ಲಿಪಿ ರೂಪಿಸಿದ. ಲೂಯಿ ರೂಪಿಸಿದ ಬ್ರೈಲ್‌‌ ಲಿಪಿ ಇಂದು ವಿಶ್ವವಿಖ್ಯಾತ. 15 ನೇ ವಯಸ್ಸಿನಲ್ಲಿ ಶಾಲೆಯಲ್ಲಿ ಒಂದು ತುಂಡು ಕಾಗದದ ಮೇಲೆ ಚುಕ್ಕೆಗಳನ್ನು ಮಾಡುವ ಮೂಲಕ ಈ ಬ್ರೆ„ಲ್‌ ಲಿಪಿಗೆ ಭಾಷ್ಯ ಬರೆದರು. ಅಂಧರ ಬದುಕಿನ ಇವತ್ತಿನ ಆತ್ಮವಿಶ್ವಾಸ ಮತ್ತು ಅವರ ಸಾಧನೆಗಳ ಹಿಂದೆ ಲೂಯಿ ಬ್ರೆ„ಲ್‌ರ ಪರಿಶ್ರಮವಿದೆ. ಬ್ರೆ„ಲ್‌ನ ಬದುಕು ಮತ್ತು ಆತ ಮಾಡಿದ ಸಾಧನೆ, ಅನೇಕ ದೃಷ್ಟಿಹೀನರ ಬದುಕಿಗೆ ಸ್ಫೂರ್ತಿಯ ಸೆಲೆಯಾಗಿದೆ. ಅಂಥ ಮಹಾ ಸಾಧಕನನ್ನು ನೆನೆಯುವ ಸಲುವಾಗಿ ಪ್ರತೀ ವರ್ಷ ಜ. 4ರಂದು ಬ್ರೆ„ಲ್‌ ದಿನ ಅಚರಿಸಲಾಗುತ್ತದೆ.

ಅಂಧರ ಶಾಲೆ ಸೇರಿದ: ತಾನು ಅಂಧ ಎಂದು ಅರಿವಾದರು ಸಹ ಲೂಯಿ ಎಂದಿಗೂ ಧೈರ್ಯ ಕಳೆದುಕೊಳ್ಳಲಿಲ್ಲ. ಕಲಿಕೆಯಲ್ಲಿ ಅತ್ಯಂತ ಆಸಕ್ತಿ ಹೊಂದಿದ ಈತ, ಪ್ಯಾರಿಸ್‌ನ ದಿ ರಾಯಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬ್ಲೆ„ಂಡ್‌ ಯೂತ್‌ ಸಂಸ್ಥೆ ನಡೆಸುವ ಶಾಲೆಗೆ ಸೇರಿದ. ಶಾಲೆಯಲ್ಲಿ ತಾಮ್ರದ ತಂತಿಯಿಂದ ವರ್ಣಮಾಲೆಯ ಅಕ್ಷರಗಳನ್ನು ರೂಪಿಸಿ, ಕಾಯಿಸಿ ಮೇಣದ ಕಾಗದಗಳ ಮೇಲೆ ಒತ್ತಲಾಗುತ್ತಿತ್ತು. ಆದರೆ ಇದರಲ್ಲಿ ಶಬ್ದಗಳು ಅಸ್ಪಷ್ಟವಾಗಿ ಮೂಡುತ್ತಿದ್ದು, ಅಕ್ಷರಗಳ ವ್ಯತ್ಯಾಸ ಕಂಡು ಹಿಡಿಯುವುದು ಕಷ್ಟವಾಗಿತ್ತು. ಮತ್ತೂಂದು ಸಾಧ್ಯತೆಯಲ್ಲಿ ಫ್ರಾನ್ಸ್‌ ಸಿಪಾಯಿ ಪಡೆಯ ನಾಯಕ ಚಾರ್ಲ್ಸ್‌ ಬಾರ್ಬಿಯೆ ರಹಸ್ಯ ಸಂದೇಶಗಳನ್ನು ರವಾನಿಸಲು ಇರುಳು ಬರವಣಿಗೆ ಎಂಬ ವಿಧಾನವನ್ನು ರೂಪಿಸಿದ್ದ. ಇದರಲ್ಲಿ ಶಬ್ದಗಳಿಗೆ ಸಾಂಕೇತಿಕವಾಗಿ ಉಬ್ಬಿದ ಚುಕ್ಕೆ ಹಾಗೂ ಗೆರೆಗಳನ್ನು ಬಳಸಲಾಗಿತ್ತು. ಈ ವಿಧಾನವೂ ಸಹ ಅಂಧರ ಕಲಿಕೆಗೆ ಪೂರಕವಾಗಲಿಲ್ಲ.

ಚುಕ್ಕಿ ಬರವಣಿಗೆಯ ಆರಂಭದಲ್ಲಿ: ಲೂಯಿ ಶಬ್ದಗಳನ್ನು ಸಾಂಕೇತಿಸುವ ಗೆರೆ, ಚುಕ್ಕಿಗಳ ಬದಲಾಗಿ ಚುಕ್ಕೆಗಳನ್ನು ಅಕ್ಷರಗಳಿಗೆ ಸಾಂಕೇತಿಕವಾಗಿ ಮಾಡಿದ. ದಪ್ಪ ಕಾಗದ ಮೇಲೆ ಸ್ಟೈಲಸ್‌(ಚಿಕ್ಕ ಮೊಳೆ)ನಿಂದ ಕೇವಲ 6 ಚುಕ್ಕೆಗಳಿಂದ 63 ವಿನ್ಯಾಸಗಳನ್ನು ರೂಪಿಸಿ, ಇಡೀ ವರ್ಣಮಾಲೆಯ ಅಕ್ಷರ ಹಾಗೂ ಚಿಹ್ನೆಗಳಿಗೆ ಸಂಕೇತ ನೀಡಿದ. ಇದು ಹಿಂದಿನ ವಿಧಗಳಿಗಿಂತ ಬಹಳ ಸುಲಭವಾಗಿತ್ತು. ಆದರೆ ಲೂಯಿಯ ಆವಿಷ್ಕಾರಕ್ಕೆ ಸರಿಯಾದ ಮನ್ನಣೆ ದೊರೆಯಲಿಲ್ಲ. ಆದರೂ ಧೃತಿಗೆಡಲಿಲ್ಲ. ಇದನ್ನು ಆಭಿವೃದ್ಧಿ ಪಡಿಸಿದರು. ಬಳಿಕ ಲೂಯಿಯ ಸಾಧನೆಯನ್ನು ಗಣ್ಯಮಾನ್ಯರು ಪ್ರಶಂಸಿಸಿದರು. ತಾನು ರೂಪಿಸಿದ ಹೊಸ ಲಿಪಿಗೆ ಜನರ ಬೆಂಬಲ ದೊರೆತು, ಜಗತ್ತಿನಾದ್ಯಂತ ಇರುವ ಅಂಧರಿಗೆ ನೆರವಾಗಬೇಕೆಂಬ ಕಂಡ ಕನಸು 20 ವರ್ಷಗಳ ಅನಂತರ ಆಂದರೆ 1844ರಲ್ಲಿ ನೆರವೇರಿತು. ಅಂದು ಲೂಯಿಯ ಹರ್ಷಕ್ಕೆ ಪಾರವೇ ಇರಲಿಲ್ಲ.

ಶತಮಾನದ ಅನಂತರ ಮರುಸಂಸ್ಕಾರ!: ಲೂಯಿ 1856ರಲ್ಲಿ ಕ್ಷಯರೋಗಕ್ಕೆ ತುತ್ತಾಗಿ ಜ. 6ರಂದು ಇಹಲೋಕ ತ್ಯಜಿಸಿದರು. ಲೂಯಿ ನಿಧನದ ಅನಂತರ ಬ್ರೈಲ್‌‌ ಲಿಪಿ ಹೆಚ್ಚು ಪ್ರಸಿದ್ದಿಗೊಂಡು, ವಿಶ್ವವ್ಯಾಪಿಯಾಯಿತು. ಹಲವೆಡೆ ಲೂಯಿ ಹೆಸರಿನಲ್ಲಿ ಅಂಧರ ಶಾಲೆಗಳು ತೆರೆದುಕೊಂಡವು. ಹುಟ್ಟೂರಿನಲ್ಲಿ ಅಮೃತ ಶಿಲೆಯ ಸ್ಮಾರಕ ನಿರ್ಮಿಸಲಾಯಿತು. ಲೂಯಿಯ ಮಹತ್ವದ ಸಾಧನೆಯನ್ನು ಮನಗಂಡ ಫ್ರಾನ್ಸ್‌ ಸರಕಾರ 1952ರಲ್ಲಿ ಅಂದರೆ ಲೂಯಿ ನಿಧನದ 100 ವರ್ಷಗಳ ಆನಂತರ ಕೂವ್ರೆ ಶ್ಮಶಾನದಲ್ಲಿದ್ದ ಲೂಯಿಯ ಶವ ಹೊರತೆಗೆದು, ಸಕಲ ಸರಕಾರಿ ಮರ್ಯಾದೆ, ಗೌರವಗಳೊಂದಿಗೆ ಪ್ಯಾರಿಸ್‌ನ ಪಾಂಥೆಯೋ ಶ್ಮಶಾನದಲ್ಲಿ ಮರುಸಂಸ್ಕಾರ ಮಾಡಲಾಯಿತು.

ಭಾರತಕ್ಕೆ ಬ್ರೈಲ್‌‌ ಲಿಪಿ: ಬ್ರೈಲ್‌‌ ಲಿಪಿ 1951 ರಲ್ಲಿ ಭಾರತ ಪ್ರವೇಶಿಸಿತು. ಕೆಲವು ಸಾಂಕೇತಿಕ ಬದಲಾವಣೆಗಳೊಂದಿಗೆ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಬ್ರೈಲ್‌‌ ಲಿಪಿ ಅಳವಡಿ ಸಲಾಯಿತು. ಕಾಲ ಕಳೆದಂತೆ ಬ್ರೈಲ್‌‌ ಲಿಪಿಯನ್ನು ಗಣಕಯಂತ್ರಕ್ಕೂ ಅಳವಡಿಸಿ, ಬ್ರೈಲ್‌‌ ಮುದ್ರಣ ಯಂತ್ರಗಳಿಂದ ಅನೇಕ ಪುಸ್ತಕಗಳನ್ನು ಮುದ್ರಿಸಲಾಯಿತು. ಪ್ರಸ್ತುತ ಅಂಧರಿಗೊಸ್ಕರ ಪುಸ್ತಕ, ಶೈಕ್ಷಣಿಕ ಸಾಮಗ್ರಿ, ಬ್ಲೆ„ಂಡ್‌ ಸ್ಟಿಕ್‌ ಇತ್ಯಾದಿ ವಸ್ತುಗಳು ಉತ್ತರಾಖಂಡ ರಾಜ್ಯದ ಡೆಹ್ರಾಡೂನ್‌ ನಗರದಲ್ಲಿನ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವಿಶ್ಯುವಲ್‌ ಹ್ಯಾಂಡಿಕ್ಯಾಪ್‌ (ಎನ್‌ಐವಿಎಚ್‌) ಮುಖಾಂತರ ದೇಶಾದ್ಯಂತ ಪೂರೈಸಲಾಗುತ್ತಿದೆ.

ಅಂಧರ ಸಾಧನೆ: ದೃಷ್ಟಿ ವಿಶೇಷ ಚೇತನರು ಇಂದು ಸಮಾಜದಿಂದ ಯಾವುದೇ ರೀತಿಯ ಅನುಕಂಪ ನಿರೀಕ್ಷಿಸದೆ ಸಹಜ ರೀತಿಯಿಂದ ಬದುಕು ನಡೆಸುತ್ತಿದ್ದಾರೆ. ಅಂಗವೈಕಲ್ಯವನ್ನು ಮರೆತು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಅಮೆರಿಕದ ಲೇಖಕಿ ಹೆಲನ್‌ಕೆಲ್ಲರ್‌, ಕವಿ ಜಾನ್‌ಮಿಲ್ಟನ್‌, ಕಾರ್ಟೂನಿಸ್ಟ್‌ ಜೇಮ್ಸ್ ಟರ್ಬರ್‌, ಹುಟ್ಟು ಅಂಧರಾಗಿ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದ ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು.. ಈ ಎಲ್ಲರೂ ತಮ್ಮ ದೈಹಿಕ ವೈಕಲ್ಯವನ್ನು ಮರೆತು ಮಾಡಿದ ಸಾಧನೆ ಮತ್ತು ಪಡೆದ ಯಶಸ್ಸು ಅಪಾರ. ಸಿಡಿಯಲ್ಲಿ ಕೇಳಿಸಿಕೊಂಡು ಕಲಿಯುವುದಕ್ಕೂ ಬ್ರೈಲ್‌ ಲಿಪಿ ಮೂಲಕ ಕಲಿಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.