ಮಲ್ಪೆ: ಮೀನುಗಾರಿಕಾ ಬೋಟ್ ಮುಳುಗಡೆ, 6ಮಂದಿ ಮೀನುಗಾರರ ರಕ್ಷಣೆ
Team Udayavani, May 19, 2020, 6:40 PM IST
ಮಲ್ಪೆ: ಮೀನುಗಾರಿಕೆಗೆ ಮುಗಿಸಿ ವಾಪಸು ಮಲ್ಪೆ ಬಂದರಿಗೆ ಬರುವ ಆಳಸಮುದ್ರ ಬೋಟೊಂದು ಮಲ್ಪೆ ಸಮೀಪದ ಬಂಡೆಗೆ ಬಡಿದು ಮುಳುಗಡೆಗೊಂಡಿದೆ. ದೋಣಿಯಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ರೇಷ್ಮಾ ಖಾರ್ವಿ ಅವರಿಗೆ ಸೇರಿದ ಶ್ರೀ ಸ್ವರ್ಣರಾಜ್ ಬೋಟು ಮುಳುಗಡೆಯಾಗಿದ್ದು, ಮೇ 14ರಂದು ರಾತ್ರಿ 10-30ಕ್ಕೆ ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ಮೇ 19ರಂದು ವಾಪಸು ಮಲ್ಪೆ ಬಂದರಿಗೆ ಬರುವಾಗ ತಡರಾತ್ರಿ 1ಗಂಟೆ ವೇಳೆ ಮಲ್ಪೆ ಬಂದರಿಗೆ ಸುಮಾರು 6ಮಾರು ಆಳ ದೂರದಲ್ಲಿ ಬೋಟಿನ ಸ್ಟೇರಿಂಗ್ ತುಂಡಾಗಿ, ಗಾಳಿಯ ರಭಸಕ್ಕೆ ಬೋಟ್ ನಿಯಂತ್ರಿಸಲು ಸಾಧ್ಯವಾಗದೇ ಸಮೀಪದಲ್ಲಿದ್ದ ತೆಲ್ಕಲ್ ಬಂಡೆಗೆ ಬಡಿಯಿತು. ಪರಿಣಾಮ ಬೋಟ್ ಹಾನಿಯಾಗಿ ನೀರು ಒಳ ಹೊಕ್ಕು ಮುಳುಗಲು ಪ್ರಾರಂಭಿಸಿತು. ತತ್ಕ್ಷಣ ಸಮೀಪದಲ್ಲಿದ್ದ ಪಂಡರೀತೀರ್ಥ ದೋಣಿಯವರು ಧಾವಿಸಿ ಬಂದು ಬೋಟಿನಲ್ಲಿದ್ದ 6ಮಂದಿ ಮೀನುಗಾರರನ್ನು ರಕ್ಷಿಸಿ ದಡ ಸೇರಿಸಿದ್ದಾರೆ. ಮುಳುಗಡೆಯಾಗುತ್ತಿದ್ದ ಬೋಟನ್ನು ಶ್ರೀಚರಣ ಬೋಟ್ ಮೂಲಕ ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.
ಬೋಟಿನಲ್ಲಿದ್ದ ಸುಮಾರು 5ಲಕ್ಷ ರೂ. ಮೌಲ್ಯದ ಮೀನು, ಬಲೆ, ಡಿಸೇಲ್ ಸಮುದ್ರಪಾಲಾಗಿದೆ. ಸುಮಾರು 80ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.