ತಲೆಗೆ ಬಡಿದ ಬೌನ್ಸರ್:ವಿಶ್ವಕಪ್ ಅಭಿಯಾನ ಮುಂದುವರಿಸಲು ಮಂಧಾನಾ ಫಿಟ್
Team Udayavani, Feb 28, 2022, 1:59 PM IST
ನವದೆಹಲಿ : ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದ ವೇಳೆ ಬೌನ್ಸರ್ ತಲೆಗೆ ಬಡಿದು ಪೆಟ್ಟು ಮಾಡಿಕೊಂಡಿದ್ದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಮಹಿಳಾ ವಿಶ್ವಕಪ್‌ನಲ್ಲಿ ಆಡುವುದಕ್ಕೆ ಫಿಟ್ ಆಗಿದ್ದಾರೆ ಎನ್ನುವ ಸಂತಸದಾಯಕ ಸುದ್ದಿ ಹೊರಬಿದ್ದಿದೆ.
ಭಾರತವು ಎರಡು ರನ್‌ಗಳಿಂದ ಗೆದ್ದ ಮೊದಲ ಅಭ್ಯಾಸ ಪಂದ್ಯದಲ್ಲಿ ಶಬ್ನಿಮ್ ಇಸ್ಮಾಯಿಲ್ ಎಸೆದ ಚೆಂಡಿನ ಬೌನ್ಸರ್ ತಲೆಗೆ ಬಡಿದ ನಂತರ ಮಂಧಾನಾ ಪಂದ್ಯದಿಂದ ಹೊರಗುಳಿಯಬೇಕಾಗಿತ್ತು.
ಐಸಿಸಿ ವರದಿಯ ಪ್ರಕಾರ, ಘಟನೆಯ ನಂತರ 25 ವರ್ಷದ ಮಂಧಾನ ಅವರನ್ನು ತಂಡದ ವೈದ್ಯರು ಪರೀಕ್ಷಿಸಿದ್ದು,ಅವರು ಮುಂದುವರಿಯಲು ಸೂಕ್ತವೆಂದು ಘೋಷಿಸಲಾಯಿತು, ಮತ್ತೊಂದು ಸಮಾಲೋಚನೆಯ ನಂತರ ವೈದ್ಯಕೀಯ ಸಿಬ್ಬಂದಿಯ ಪ್ರಕಾರ ಎಡಗೈ ಆಟಗಾರ್ತಿ ಯಾವುದೇ ಗಂಭೀರ ಲಕ್ಷಣಗಳನ್ನು ಅನುಭವಿಸಲಿಲ್ಲ, ಘಟನೆಯಿಂದ ವಿಳಂಬವಾದ ಪರಿಣಾಮಗಳನ್ನು ಅನುಭವಿಸುವುದಿಲ್ಲ ಎಂದು ಹೇಳಲಾಗಿದೆ.
ಮುಂಬರುವ 50 ಓವರ್‌ಗಳ ವಿಶ್ವಕಪ್ ಗೆ ಮೊದಲು ನ್ಯೂಜಿಲೆಂಡ್ ವಿರುದ್ಧದ ಹಿಂದಿನ ಏಕದಿನದಲ್ಲಿ ತನ್ನ 20 ನೇ ಅರ್ಧಶತಕವನ್ನು ಗಳಿಸಿದ್ದರು. ಮಂಧಾನ ಇದುವರೆಗೆ 64 ಏಕದಿನ ಪಂದ್ಯಗಳಲ್ಲಿ ನಾಲ್ಕು ಶತಕ ಸೇರಿದಂತೆ 2461 ರನ್ ಗಳಿಸಿದ್ದಾರೆ.
ಮಾರ್ಚ್ 6 ರಂದು ಪಾಕಿಸ್ಥಾನದ ವಿರುದ್ಧ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸುವ ಮೊದಲು ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಮತ್ತೊಂದು ಅಭ್ಯಾಸವನ್ನು ಆಡಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.