ಮೂರೂವರೆ ತಿಂಗಳಲ್ಲಿ 21 ಕೆ.ಜಿ. ಹಳದಿ ಲೋಹ ಕಸ್ಟಮ್ಸ್ ವಶ
ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿಲ್ಲದ ಸ್ಮಗ್ಲಿಂಗ್
Team Udayavani, Apr 20, 2021, 6:45 AM IST
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶದಿಂದ, ಅದರಲ್ಲಿಯೂ ದುಬಾೖಯಿಂದ ಅಕ್ರಮ ಚಿನ್ನ ಸಾಗಾಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಲಾಕ್‌ಡೌನ್ ಅನಂತರ ವಿಮಾನಯಾನ ಸೇವೆ ಆರಂಭದೊಂದಿಗೆ ಮೊದಲ್ಗೊಂಡ ಅಕ್ರಮ ಚಿನ್ನ ಸಾಗಾಟ ನಿರಂತರ ಏರುಮುಖವಾಗಿ ಸಾಗಿದೆ. ಈ ಹಿಂದಿನ ಎಲ್ಲ ವರ್ಷಗಳಿಗಿಂತಲೂ ಈ ಬಾರಿ ಅತ್ಯಧಿಕ ಸಂಖ್ಯೆಯ ಚಿನ್ನ ಕಳ್ಳ ಸಾಗಾಟ ಪ್ರಕರಣಗಳು ಪತ್ತೆಯಾಗಿವೆ. 2021ರ ಜನವರಿಯಿಂದ ಎ.19ರ ವರೆಗೆ ಕೇವಲ ಮೂರೂವರೆ ತಿಂಗಳಲ್ಲಿ 21 ಕೆ.ಜಿ.ಗೂ ಅಧಿಕ ತೂಕದ ಹಾಗೂ 10 ಕೋ.ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
3 ತಿಂಗಳಲ್ಲಿ 35 ಪ್ರಕರಣ
2021ರ ಜನವರಿಯಲ್ಲಿ 8 ಪ್ರಕರಣಗಳಲ್ಲಿ 3 ಕೋ.ರೂ. ಮೌಲ್ಯದ 5.92 ಕೆ.ಜಿ., ಫೆಬ್ರವರಿಯಲ್ಲಿ 15 ಪ್ರಕರಣಗಳಲ್ಲಿ 2.39 ಕೋ.ರೂ. ಮೌಲ್ಯದ 4.94 ಕೆ.ಜಿ., ಮಾರ್ಚ್‌ನಲ್ಲಿ 12 ಪ್ರಕರಣಗಳಲ್ಲಿ 3.2 ಕೋ.ರೂ. ಮೌಲ್ಯದ 6.94 ಕೆ.ಜಿ. ಸೇರಿದಂತೆ ಕಳೆದ ಮೂರು ತಿಂಗಳಲ್ಲಿ ಒಟ್ಟು 35 ಪ್ರಕರಣಗಳಲ್ಲಿ 8.592 ಕೋ.ರೂ. ಮೌಲ್ಯದ 17.8 ಕೆ.ಜಿ. ಚಿನ್ನ ವಶಪಡಿಸಿಕೊಳ್ಳಲಾಗಿದೆ. ಎಪ್ರಿಲ್‌ನಲ್ಲಿ ಇದುವರೆಗೆ 5 ಪ್ರಕರಣಗಳಲ್ಲಿ ಸುಮಾರು 2.15 ಕೋ.ರೂ. ಮೌಲ್ಯದಲ್ಲಿ ಒಟ್ಟು ಸುಮಾರು 4 ಕೆ.ಜಿ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮವಾಗಿ ಸಾಗಾಟ ಮಾಡುವಾಗ ಸಿಕ್ಕಿಬಿದ್ದವರ ಪೈಕಿ ಕೇರಳ, ಭಟ್ಕಳ ಮತ್ತು ಉತ್ತರ ಕನ್ನಡದವರೇ ಅಧಿಕ.
ಕಾಣದ ಕೈಗಳ ಕೈವಾಡ?
ಅಕ್ರಮ ಚಿನ್ನ ಸಾಗಾಟ ಪ್ರಕರಣ ಹೆಚ್ಚಲು ನಿರ್ದಿಷ್ಟ ಕಾರಣವೇನೆಂಬುದು ಕಸ್ಟಮ್ಸ್ ಅಧಿಕಾರಿಗಳಿಗೂ ಗೊತ್ತಾಗಿಲ್ಲ. ಮೂಲಗಳ ಪ್ರಕಾರ ಒಂದೆಡೆ ಕಸ್ಟಮ್ಸ್ ತಪಾಸಣೆ ಈಗ ಬಿಗಿಯಾಗಿದೆ. ಇನ್ನೊಂದೆಡೆ ಉದ್ಯೋಗ ದೊರೆಯದೆ ವಿದೇಶದಿಂದ ವಾಪಸ್ ಹೊರಟವರನ್ನು ಸ್ಮಗ್ಲರ್‌ಗಳು ಬಳಸಿಕೊಳ್ಳುತ್ತಿದ್ದಾರೆ. ವೃತ್ತಿಪರ ಸ್ಮಗ್ಲರ್‌ಗಳ ಜತೆಗೆ ಕೆಲವರು ಮೊದಲ ಬಾರಿಗೆ ಸ್ಮಗ್ಲಿಂಗ್ ರಿಸ್ಕ್ ತೆಗೆದುಕೊಂಡು ಸಿಕ್ಕಿ ಬೀಳುತ್ತಿದ್ದಾರೆ.
ಹಣದಾಸೆಗೆ ಕೃತ್ಯ
ಹೆಚ್ಚಿನವರಿಗೆ ತಾವು ಮಾಡುತ್ತಿರುವುದು ತಪ್ಪು ಎಂಬ ಅರಿವಿದ್ದರೂ ಕಮಿಷನ್ ಆಸೆಗಾಗಿ ಈ ರೀತಿ ಮಾಡುತ್ತಿದ್ದಾರೆ. ಉದ್ಯೋಗ ನಷ್ಟವಾಗಿ ಊರಿಗೆ ವಾಪಸಾಗುವವರಲ್ಲಿ ಹಣ ಆಸೆ ಹುಟ್ಟಿಸಿ ಅವರ ಮೂಲಕವೂ ಚಿನ್ನ ಸ್ಮಗ್ಲಿಂಗ್ ಮಾಡಿಸುವವರು ಇರಬಹುದು. ಕೊರೊನಾ ಹಿನ್ನೆಲೆಯಲ್ಲಿ ವಿದೇಶೀ ಉದ್ಯೋಗ ಮಾರುಕಟ್ಟೆ ಕೂಡ ಕುಸಿದಿರುವುದರಿಂದ ಕೆಲವರು ಸ್ಮಗ್ಲಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಸಾಧ್ಯತೆಗಳಿರಬಹುದು ಎಂದು ಕುವೈಟ್‌ನಲ್ಲಿರುವ ಅನಿವಾಸಿ ಭಾರತೀಯರಾದ ಮೋಹನ್‌ದಾಸ್ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.