Mangaluru/Udupi: ಹೊಸ ವರ್ಷಕ್ಕೆ ಸಿದ್ಧತೆ; ವ್ಯಾಪಕ ಪೊಲೀಸ್‌ ಬಂದೋಬಸ್ತ್

ಮಂಗಳೂರು: ರಾತ್ರಿ 12ರ ವರೆಗೆ ಮಾತ್ರ ಅವಕಾಶ, ಉಡುಪಿ: ರಾತ್ರಿ10ರ ತನಕ ಧ್ವನಿವರ್ಧಕ ಬಳಕೆ‌

Team Udayavani, Dec 31, 2024, 6:45 AM IST

police crime

ಮಂಗಳೂರು/ಉಡುಪಿ: ಹೊಸ ವರ್ಷಾಚರಣೆಯ ಸಂಭ್ರಮಕ್ಕಾಗಿ ಕರಾವಳಿಗೆ ಭಾರೀ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದಾರೆ. ಕರಾವಳಿಯ ಎಲ್ಲೆಡೆ ಭಾರೀ ವಾಹನ ದಟ್ಟಣೆ ಕೂಡ ಕಂಡು ಬಂದಿದೆ. ಸುಗಮ ವ್ಯವಸ್ಥೆ ಕಲ್ಪಿಸಲು ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದಾರೆ.

ಮಂಗಳೂರು ಸೇರಿದಂತೆ ದ.ಕ ಜಿಲ್ಲೆಯ ಪ್ರಸಿದ್ಧ ಯಾತ್ರ ಸ್ಥಳಗಳು ಪ್ರವಾಸಿಗರಿಂದ ಗಿಜಿಗುಡುತ್ತಿವೆ.

ಮಂಗಳೂರು-ಬೆಂಗಳೂರು ಹೆದ್ದಾರಿ, ಮಂಗಳೂರು-ಗೋವಾ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ನಿರಂತರವಾಗಿ ಹೆಚ್ಚುತ್ತಲೇ ಇದು, ದಟ್ಟಣೆ ಅವಧಿ ಹೊರತಾಗಿಯೂ ಇದು ಮುಂದುವರಿದಿದೆ.

ಹೆಚ್ಚುವರಿ ಬಂದೋಬಸ್ತ್
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ. 31ರ ಮಧ್ಯಾಹ್ನದಿಂದ ಮಂಗಳೂರು ನಗರದ ವಿವಿಧೆಡೆ ಹೆಚ್ಚುವರಿ ಬಂದೋಬಸ್ತ್, ತಪಾಸಣೆ ಮಾಡಲಾಗುವುದು. ಪ್ರಮುಖ ಪಾಯಿಂಟ್‌ಗಳಲ್ಲಿ ಪೊಲೀಸ್‌ ಅಧಿಕಾರಿಗಳನ್ನು, ಕೆಎಸ್‌ಆರ್‌ಪಿ, ಸಿಎಆರ್‌ ತುಕಡಿ ನಿಯೋಜಿಸಲಾಗುವುದು. ಹೆಚ್ಚುವರಿ ಚೆಕ್‌ಪೋಸ್ಟ್‌ಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗುವುದು. ಮದ್ಯಸೇವಿಸಿ ವಾಹನ ಚಾಲನೆ, ಡ್ರಗ್ಸ್‌ ಸೇವನೆ ತಪಾಸಣೆ ಕೂಡ ನಡೆಸಲಾಗುವುದು. ವ್ಹೀಲಿಂಗ್‌, ಅತೀವೇಗ, ನಿರ್ಲಕ್ಷ್ಯದ ಚಾಲನೆ ಮೊದಲಾದವುಗಳ ಮೇಲೆಯೂ ನಿಗಾ ಇಡಲಾಗುವುದು. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಸಮಾಜ ಘಾತುಕ ಶಕ್ತಿಗಳು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ. ಎಲ್ಲರೂ ಕಾನೂನು ಚೌಕಟ್ಟಿನೊಳಗೆ ಹೊಸ ವರ್ಷ ಆಚರಿಸಬೇಕು ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ಕಾನೂನು ಮೀರಿದರೆ ಕ್ರಮ
ಕಾನೂನು ಮೀರಿ ಆಚರಣೆ ನಡೆಸಿದರೆ, ಸಾರ್ವಜನಿಕರಿಗೆ ತೊಂದರೆ ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅನುಮತಿ ಪಡೆದು ಕಾರ್ಯಕ್ರಮ ಆಯೋಜನೆ ಮಾಡಬೇಕು. ವ್ಹೀಲಿಂಗ್‌, ದುಡುಕುತನದ ಚಾಲನೆ ಮೊದಲಾದವುಗಳನ್ನು ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಅಹಿತಕರ ಘಟನೆ ನಡೆಯದಂತೆ ತಡೆಯಲು ಹೆಚ್ಚುವರಿ ಬಂದೋಬಸ್ತ್ ಮಾಡಲಾಗುವುದು.
– ಯತೀಶ್‌ ಎನ್‌., ಎಸ್‌ಪಿ, ದ.ಕ ಜಿಲ್ಲೆ

ಇಲಾಖೆ ಸೂಚನೆ ಪಾಲಿಸಿ
ಹೊಸ ವರ್ಷಾಚರಣೆ ಸಂದರ್ಭ ಯಾವುದೇ ಅಹಿತಕರ ನಡೆಯದಂತೆ ಇಲಾಖೆ ನೀಡಿದ ಸೂಚನೆ, ಮುನ್ನೆಚ್ಚರಿಕೆ ಕ್ರಮಗಳನ್ನು ಸಾರ್ವಜನಿಕರು ಅನುಸರಿಸುವುದು ಅಗತ್ಯ. ನಿಯಮ ಮೀರಿದಲ್ಲಿ ಕಠಿನ ಕಾನೂನು ಕ್ರಮ ಜರಗಿಸಲಾಗುವುದು.
– ಡಾ| ಅರುಣ್‌ ಕೆ.,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಉಡುಪಿ

ಎಲ್ಲೆಡೆ ಲಾಡ್ಜ್, ರೆಸಾರ್ಟ್‌ ಬುಕ್ಕಿಂಗ್‌
ಹೊಸ ವರ್ಷ ಆಚರಣೆಗಾಗಿ ಕರಾವಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದರಿಂದ ಹೊಟೇಲ್‌ ಲಾಡ್ಜ್, ರೆಸಾರ್ಟ್‌ಗಳೆಲ್ಲ ತುಂಬಿವೆ. ರವಿವಾರ ಬಳಿಕ ಮಂಗಳೂರು ಮತ್ತು ಉಡುಪಿ ತಾಲೂಕು ಕೇಂದ್ರಗಳಲ್ಲಿ ಎಲ್ಲಿಯೂ ಬಾಡಿಗೆ ರೂಮು ಸಿಗದೆ ಪ್ರವಾಸಿಗರು ನಿರಾಸೆಗೊಂಡಿದ್ದಾರೆ.
ಉಡುಪಿ, ಮಲ್ಪೆ, ಮರವಂತೆ, ಕೋಡಿ ಬೀಚ್‌, ಕಾಪು ಕಡಲ ಕಿನಾರೆ, ಲೈಟ್‌ ಹೌಸ್‌ ಮೊದಲಾದ ಕಡೆಗಳ‌ ಬಹುತೇಕ ಲಾಡ್ಜ್ಗಳು, ರೆಸಾರ್ಟ್‌ಗಳು ಹಾಗೂ ಕಾಟೇಜ್‌ಗಳು ಭರ್ತಿಯಾಗಿವೆ. ತಿಂಗಳ ಹಿಂದಿನಿಂದಲೇ ಬುಕಿಂಗ್‌ ಆಗಿವೆ. ಎರಡು ದಿನಗಳಿಂದ ಬರುವವರು ಕೊಠಡಿ ಖಾಲಿಯಿಲ್ಲದೆ ಮರಳುತ್ತಿದ್ದಾರೆ.

ದರ ಹೆಚ್ಚಳ
ಹೆಚ್ಚಿನವರು ಕಡಲ ತೀರದಲ್ಲಿ ಹೊಸ ವರ್ಷಾಚರಣೆಗೆ ಬಯಸುತ್ತಿರುವುದರಿಂದ ಕಡಲ ತೀರದ ವಸತಿಗೃಹ, ರೆಸಾರ್ಟ್‌ಗಳಿಗೆ ಭಾರೀ ಬೇಡಿಕೆ. ಹಲವಾರು ರೆಸಾರ್ಟ್‌, ಲಾಗ್‌ ಹಟ್ಸ್‌ಗಳ ಬಾಡಿಗೆ ದರದಲ್ಲಿ ಭಾರೀ ಏರಿಕೆಯಾಗಿದೆ. ಜನರನ್ನು ಸೆಳೆಯಲು ಬೀಚ್‌ಗಳಲ್ಲಿ ಹಲವು ಆಕರ್ಷಣೆಗಳನ್ನು ಮಾಡಲಾಗಿದೆ.
ಬಹುತೇಕ ಹೋಟೆಲ್‌, ರೆಸ್ಟೋರೆಂಟ್‌ ಜನರಿಂದ ತುಂಬಿದ್ದರೆ ಉಳ್ಳಾಲ, ಸೋಮೇಶ್ವರ, ಸುರತ್ಕಲ್‌, ಹೊಸಬೆಟ್ಟು, ಪಣಂಬೂರು ಮುಂತಾದಡೆ ಇರುವ ರೆಸಾರ್ಟ್‌, ಹೋಮ್‌ಸ್ಟೇ ಹೊಸ ವರ್ಷದ ದಿನದ ವರೆಗೂ ಬುಕ್‌ ಆಗಿವೆ.

ಮಳಿಗೆಗಳಲ್ಲಿ ರಿಯಾಯಿತಿ ಘೋಷಣೆ
ಹೊಸ ವರ್ಷಾಚರಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಪ್ರವಾಸಿ ತಾಣಗಳಲ್ಲಿ ವ್ಯಾಪಾರ ವಹಿವಾಟು ಕೂಡ ಬಿರುಸಾಗಿದೆ. ಪ್ರವಾಸಿ ತಾಣಗಳಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ತಾತ್ಕಾಲಿಕ ವ್ಯಾಪಾರಿ ಮಳಿಗೆಗಳು ತಲೆಯೆತ್ತಿವೆ. ಬೇಕರಿಗಳಲ್ಲಿ ವಿವಿಧ ಶೈಲಿಯ ಕೇಕ್‌ಗಳು ಸಿದ್ಧಗೊಳ್ಳುತ್ತಿವೆ. ಬಟ್ಟೆ, ಆಭರಣ ಮಳಿಗೆಗಳು, ಎಲೆಕ್ಟ್ರಾನಿಕ್ಸ್‌ ಅಂಗಡಿ ಹೀಗೆ ವಿವಿಧ ಮಳಿಗೆಯವರು ರಿಯಾಯಿತಿ ದರದ ಮಾರಾಟ ಯೋಜನೆ ಘೋಷಿಸಿ ಜನರನ್ನು ಆಕರ್ಷಿಸುತ್ತಿದ್ದಾರೆ.

ಮಂಗಳೂರು: ರಾತ್ರಿ 12ರ ವರೆಗೆ ಮಾತ್ರ ಅವಕಾಶ
ಹೊಸ ವರ್ಷದ ಕಾರ್ಯಕ್ರಮ ರಾತ್ರಿ 12 ಗಂಟೆಯ ಒಳಗಾಗಿ ಪೂರ್ಣಗೊಳ್ಳಬೇಕು. ಈ ಸಮಯದ ಬಳಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ನೀಡಲಾಗುವುದಿಲ್ಲ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಆಯೋಜಕರು ಸಂಬಂಧಿತ ಇಲಾಖೆಗಳಿಂದ ಪಡೆದ ಲೈಸನ್ಸ್‌ ಮತ್ತು ಅನುಮತಿ ಪ್ರಕಾರ ನಿರ್ಧರಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮದ್ಯದ ಮಾರಾಟ ಮತ್ತು ವಿತರಣೆಗೆ ಅಬಕಾರಿ ಇಲಾಖೆಯಿಂದ ಲಿಖೀತ ಅನುಮತಿ ಪಡೆಯಬೇಕು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ಬಸ್‌ ನಿಲ್ದಾಣ‌, ಉದ್ಯಾನಗಳು, ಕ್ರೀಡಾಂಗಣಗಳು, ರೈಲ್ವೇ ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮತ್ತು ಮದ್ಯಪಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಧ್ವನಿವರ್ಧಕ ವ್ಯವಸ್ಥೆಗಳು, ಲೌಡ್‌ ಸ್ಪೀಕರ್‌ಗಳನ್ನು ಬಳಸಲು ಪೂರ್ವ ಅನುಮತಿ ಅಗತ್ಯವಿದೆ. ಧ್ವನಿಯ ಮಟ್ಟವು ಶಬ್ದ ಮಾಲಿನ್ಯ ನಿಯಮಗಳು 2000 ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಬೇಕು. ಡಿಜೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಶ್ಲೀಲ ನೃತ್ಯಗಳು, ಜೂಜು ಸಹಿತ ಅಶ್ಲೀಲ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮಹಿಳೆಯರ ಮೇಲೆ ಕಿರುಕುಳ, ದೌರ್ಜನ್ಯ ಚಟುವಟಿಕೆಗಳನ್ನು ತಡೆಯಲು ವಿಶೇಷ ಕಾರ್ಯಪಡೆಗಳನ್ನು ನಿಯೋಜಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಉಡುಪಿ: ರಾತ್ರಿ10ರ ತನಕ ಧ್ವನಿವರ್ಧಕ ಬಳಕೆ‌
ಹೊಸ ವರ್ಷಾಚರಣೆಗೆ ಡಿ. 31ರ ರಾತ್ರಿ 12.30ರ ವರೆಗೆ ಸಮಯ ನಿಗದಿ ಮಾಡಲಾಗಿದೆ. ಶಬ್ದ ಮಾಲಿನ್ಯವಾಗದಂತೆ ಧ್ವನಿವರ್ಧಕಗಳನ್ನು ರಾತ್ರಿ 10 ಗಂಟೆಯವರೆಗೆ ಮಾತ್ರ ಬಳಸಬಹುದಾಗಿದೆ. ಅಹಿತಕರ ಘಟನೆಗಳು ನಡೆದರೆ ಸಾರ್ವಜನಿಕರು 112ಕ್ಕೆ ಕರೆ ಮಾಡಿ ಪೊಲೀಸರ ಗಮನಕ್ಕೆ ತರಬಹುದು. ಕಾನೂನು ಮೀರಿ ನಡೆದರೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಎಸ್‌ಪಿ ಡಾ| ಅರುಣ್‌ ಕೆ. ತಿಳಿಸಿದ್ದಾರೆ.

ಎಚ್ಚರಿಕೆ ವಹಿಸಿ: ಉಡುಪಿ ಎಸ್‌ಪಿ ಸೂಚನೆ
ಉಡುಪಿ: ಹೊಸ ವರ್ಷ ಆಚರಣೆಯ ಸಂದರ್ಭ ಜಾಗರೂಕರಾಗಿದ್ದು, ಎಚ್ಚರಿಕೆ ವಹಿಸವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ. ತಿಳಿಸಿದ್ದಾರೆ. ಹೊಸ ವರ್ಷದ ಸಂದರ್ಭ ಬಳಸಿಕೊಂಡು ಸೈಬರ್‌ ಕ್ರಿಮಿನಲ್‌ಗ‌ಳು ಸಾರ್ವಜನಿಕರ ಮೊಬೈಲ್‌ಗ‌ಳಿಗೆ ಹಾನಿಕಾರಕ ಲಿಂಕ್‌ ಮತ್ತು ಎಪಿಕೆ ಪೈಲ್‌ಗ‌ಳನ್ನು ಕಳುಹಿಸಿ ಸಾರ್ವಜನಿಕರ ಮೊಬೈಲ್‌ ಹ್ಯಾಕ್‌ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಅಪರಿಚಿತರಿಂದ ಬರುವ ಸಂದೇಶ ತೆರೆಯಬಾರದು ಎಂದು ಅವರು ತಿಳಿಸಿದ್ದಾರೆ.

ಸವಾರರು ಕಡ್ಡಾಯವಾಗಿ ಹೆಲ್ಮೆಟ್‌, ಇತರ ವಾಹನದವರು ಸೀಟ್‌ ಬೆಲ್ಟ್ ಧರಿಸಿಯೇ ವಾಹನ ಚಾಲನೆ ಮಾಡಬೇಕು. ಜತೆಗೆ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು ಎಂದಿದ್ದಾರೆ.

ರೇವ್‌ ಪಾರ್ಟಿ, ರೆಸ್ಟೋರೆಂಟ್‌, ಅಪಾರ್ಟ್‌ಮೆಂಟ್‌ಗಳಲ್ಲಿ ನಡೆಯುವ ನಿಯಮ ಮೀರಿದ ಪಾರ್ಟಿ, ಅನೈತಿಕ ಚಟುವಟಿಕೆಗಳ ಮೇಲೆ ನಿಗಾ ವಹಿಸಲು, ಅನುಚಿತ ವರ್ತನೆ, ನೈತಿಕ ಪೊಲೀಸ್‌ ಗಿರಿ ತಡೆಗೆ ವಿಶೇಷ ತಂಡ ರಚಿಸಲಾಗಿದೆ. ಬೀಚ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವುದರಿಂದ ಅಲ್ಲಿ ಸಾಕಷ್ಟು ಮುಂಜಾಗರೂಕತೆ ವಹಿಸುವುದು ಅಗತ್ಯ ಎಂದಿದ್ದಾರೆ.

 

ಟಾಪ್ ನ್ಯೂಸ್

1-syyy

Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್‌-ಗಂಭೀರ್‌ ಮನಸ್ತಾಪ ತೀವ್ರ?

ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ

ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ

Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ

Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ

Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್‌ ಆಸ್ತಿ ಈಗ ವರ್ಗಾವಣೆ

Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್‌ ಆಸ್ತಿ ಈಗ ವರ್ಗಾವಣೆ

Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?

Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?

RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ

RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ

Supreme Court: ತೀರ್ಪಿನಲ್ಲಿ ಲವ್‌ ಜೆಹಾದ್‌ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್‌ ನಕಾರ

Supreme Court: ತೀರ್ಪಿನಲ್ಲಿ ಲವ್‌ ಜೆಹಾದ್‌ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್‌ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-magu

Manipal; ಝೀರೋ ಟ್ರಾಫಿಕ್‌ನಲ್ಲಿ ಮಗು ಬೆಂಗಳೂರಿಗೆ : ಈಶ್ವರ ಮಲ್ಪೆ ನೆರವು

6

Gangolli: ಬೈಕ್‌ನಿಂದ ಬಿದ್ದು ಗಾಯ; ಪ್ರಕರಣ ದಾಖಲು

4

Kaup: ರಿಕ್ಷಾ ಚಾಲಕ ನೇಣಿಗೆ ಶರಣು

5

Karkala: ಜಾಗದ ವಿಚಾರ; ಮಹಿಳೆಗೆ ಹಲ್ಲೆ; ಪ್ರಕರಣ ದಾಖಲು

complaint

Manipal: ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ; ದೂರು ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-syyy

Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್‌-ಗಂಭೀರ್‌ ಮನಸ್ತಾಪ ತೀವ್ರ?

ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ

ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ

Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ

Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ

Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್‌ ಆಸ್ತಿ ಈಗ ವರ್ಗಾವಣೆ

Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್‌ ಆಸ್ತಿ ಈಗ ವರ್ಗಾವಣೆ

puttige-4

Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.