“ಮನ್‌ ಕಿ ಬಾತ್‌”: ಮನದ ಮಾತಿಗೆ ಶತ ಸಂಭ್ರಮ


Team Udayavani, Apr 28, 2023, 7:25 AM IST

Modi

“ಮನ್‌ ಕಿ ಬಾತ್‌” ಅಥವಾ ಮನದ ಮಾತು… ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯಕ್ಕಿಂತ ಹೊರತಾಗಿ ಜನ ಜೀವನ, ಸಂಸ್ಕೃತಿ, ಜೀವನದ ವ್ಯವಸ್ಥೆಗಳಲ್ಲಿ ಹೊಸತನ, ಸ್ಥಳೀಯವಾಗಿ ಹೊಸ ಶೋಧನೆಗಳು, ಎಲೆಮರೆಯ ಕಾಯಿಯಂತೆ ಇರುವವ ಸಾಧನೆಗಳ ಕುರಿತಾಗಿ ದೇಶವಾಸಿಗಳಿಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಆರಂಭಿಸಿದ ವಿನೂತನ ಕಾರ್ಯಕ್ರಮ. 2014 ಅ.3ರಂದು ಶುರುವಾಗಿದ್ದ ಈ ಕಾರ್ಯಕ್ರಮ ಏ.30ರಂದು ನೂರನೇ ಕಾರ್ಯಕ್ರಮದ ಸಂಭ್ರಮ ಪೂರೈಸಲಿದೆ.

ಎಲ್ಲವೂ ವಿಶೇಷ
ಆ ಕಾರ್ಯಕ್ರಮದ ವಿನ್ಯಾಸ, ಆಯ್ಕೆ ಮಾಡುವ ವಿಷಯಗಳು ಎಲ್ಲವೂ ವಿಶೇಷವೇ ಆಗಿದೆ. ಪ್ರಧಾನಮಂತ್ರಿಯೊಬ್ಬರು ದೇಶದ ಜನರ ಜತೆಗೆ ನೇರವಾಗಿ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಆಯೋಜಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾಗಿರುವ ಒಂದು ವಿಶೇಷ ಸಂಚಿಕೆ ಎಂದರೆ ತಪ್ಪಾಗಲಾರದು.

ಮೊದಲ ಮನ್‌ ಕಿ ಬಾತ್‌ನಲ್ಲಿ ಹೇಳಿದ್ದೇನು?
ಪ್ರಿಯ ದೇಶವಾಸಿಗಳೇ, ಇವತ್ತು (2014 ಅ.3) ವಿಜಯದಶಮಿಯ ಶುಭ ದಿನ. ನಿಮಗೆಲ್ಲರಿಗೂ ವಿಜಯದಶಮಿಯ ಹೃತ್ಪೂರ್ವಕ ಶುಭಾಶಯಗಳು. ರೇಡಿಯೋ ಮಾಧ್ಯಮದ ಮೂಲಕ ನಾನು ನನ್ನ ಮನದ ಆಶಯಗಳನ್ನು ವ್ಯಕ್ತಪಡಿಸಲು ಇಚ್ಛಿಸುತ್ತೇನೆ. ಇವತ್ತು ಮಾತ್ರವಲ್ಲ ಮುಂದಿನ ದಿನಗಳಲ್ಲಿ ಇದು ಮುಂದುವರಿಯಲಿದೆ. ಸಾಧ್ಯವಾದರೆ ಪ್ರತಿ ತಿಂಗಳಿಗೆ ಎರಡು ಬಾರಿ ಅಥವಾ ಒಂದು ಬಾರಿ ನಿಮ್ಮಲ್ಲಿ ಮಾತನಾಡಲು ಪ್ರಯತ್ನಿಸುವೆ. ಮುಂದಿನ ದಿನಗಳಲ್ಲಿ ನಿಮ್ಮ ಜತೆಗೆ ಮಾತನಾಡಲು ಪ್ರಯತ್ನಿಸುವುದಿದ್ದರೆ ಅದು ಭಾನುವಾರ ಬೆಳಗ್ಗೆ 11 ಗಂಟೆಗೆ ಆಗಿರಲಿದೆ. ಇದರಿಂದ ನಿಮಗೆ ಅನುಕೂಲವಾಗಿಯೂ ಇರಲಿದೆ. ಜತೆಗೆ ನನಗೂ ನನ್ನ ಭಾವನೆಗಳನ್ನು ನಿಮ್ಮ ಮುಂದಿಡಲು ಅವಕಾಶವಾಗಲಿದೆ.

ಒಬಾಮ ಮಾತಾಡಿದ್ದರು
2015ರಲ್ಲಿ ಆ ವರ್ಷದ ಗಣರಾಜ್ಯ ದಿನದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಗಿನ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಆಕಾಶವಾಣಿಯ ಮನ್‌ ಕಿ ಬಾತ್‌ನಲ್ಲಿ ಮಾತನಾಡಿದ್ದರು. ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷ ಮತ್ತು ದೇಶದ ಪ್ರಧಾನಿ ಜತೆಗೂಡಿ ಮಾತನಾಡಿದ್ದು ದಾಖಲೆಯೇ ಆಗಿದೆ.

ಸಲಹೆಗಳ ಆಹ್ವಾನ
ಕಾರ್ಯಕ್ರಮದಲ್ಲಿ ಯಾವ ವಿಚಾರ ಮಾತನಾಡಬೇಕು ಎಂಬ ಬಗ್ಗೆ ಪ್ರಧಾನಿಯವರು ಮೈಗವ್‌. ಇನ್‌ (https://www.mygov.in/) ಮೂಲಕ ಸಲಹೆಗಳನ್ನು ಆಹ್ವಾನಿಸುತ್ತಾರೆ. ಅಂದ ಹಾಗೆ ಈ ಕಾರ್ಯಕ್ರಮಕ್ಕೆ ಮೊದಲ ಸಲಹೆ ಕೊಟ್ಟದ್ದು ಮುಂಬೈನ ಗಣೇಶ್‌ ವೆಂಕಟಾದ್ರಿ. ಈ ಬಗ್ಗೆ ಮೈಗವ್‌.ಇನ್‌ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಅಕಾಶವಾಣಿಗೆ ಆದಾಯ
ಪ್ರಸಾರ ಭಾರತಿಯ ಅವಿಭಾಜ್ಯ ಅಂಗವಾಗಿರುವ ಆಕಾಶವಾಣಿಗೆ ಈ ಕಾರ್ಯಕ್ರಮದಿಂದಾಗಿ ಭರ ಪೂರ್ತಿ ಆದಾಯವೂ ಬಂದಿದೆ. ಎಂಟು ವರ್ಷಗಳ ಅವಧಿಯಲ್ಲಿ ಅದಕ್ಕೆ ಭಾರಿ ಅನುಕೂಲವೂ ಆಗಿದೆ. ಜಾಹೀರಾತುಗಳಿಂದ ಬರುವ ಆದಾಯಕ್ಕಿಂತ ಮನ್‌ ಕಿ ಬಾತ್‌ನಿಂದ ಆಕಾಶವಾಣಿಗೆ ಐದು ಪಟ್ಟು ಲಾಭವಾಗುತ್ತಿದೆ. 2022-23ನೇ ಸಾಲಿನಲ್ಲಿ 77 ಲಕ್ಷ ರೂ. ಆದಾಯ ಸಂಗ್ರಹವಾಗಿತ್ತು. ಮೂರು ವರ್ಷಗಳ ಅವಧಿಯಲ್ಲಿ ಕಾರ್ಯಕ್ರಮದ ಪ್ರಚಾರಕ್ಕಾಗಿ ಒಂದೇ ಒಂದು ರೂಪಾಯಿ ವೆಚ್ಚ ಮಾಡಲಾಗಿಲ್ಲವಂತೆ
33.16 ಕೋಟಿ ರೂ. – 2014ರಿಂದ ಇದುವರೆಗೆ (2022 ಅಕ್ಟೋಬರ್‌ ವರೆಗೆ)
10.64 ಕೋಟಿ ರೂ. 2017-18.
ಈ ಮೊತ್ತ ಅತ್ಯಧಿಕ
01.02 ಕೋಟಿ ರೂ. 2021-22. ಕೊರೊನಾ ಕಾರಣದಿಂದ ಅತ್ಯಂತ ಕಡಿಮೆ
1.16 ಕೋಟಿ ರೂ. 2014-15
2.81 ಕೋಟಿ ರೂ. 2015-16
5.14 ಕೋಟಿ ರೂ. 2016-17
7.47 ಕೋಟಿ ರೂ. 2018-19
2.56 ಕೋಟಿ ರೂ. 2019-20

ಕರ್ನಾಟಕದ ಉಲ್ಲೇಖಗಳು

ಸ್ಥಳೀಯ ಮಟ್ಟದಲ್ಲಿ ಶುಚಿತ್ವ ಕಾಪಾಡಿಕೊಳ್ಳುವ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ಸಂಸ್ಥೆಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದಿದ್ದರು ಪ್ರಧಾನಿ ಮೋದಿ. ಬೆಂಗಳೂರಿನ “ಯೂತ್‌ ಫಾರ್‌ ಪರಿವರ್ತನ್‌” ಎಂಟು ವರ್ಷಗಳಿಂದ ಸಮುದಾಯ ಮಟ್ಟದಲ್ಲಿ ಶುಚಿತ್ವ ಕಾಪಾಡುವ ಬಗ್ಗೆ ನಡೆಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಬೀದರ್‌ ಜಿಲ್ಲೆಯ ಹುಲ್ಸೂರು ರಾಗಿ ಉತ್ಪಾದಕ ಕಂಪನಿಯ ಮಹಿಳೆಯರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಅಳಂದ ಭೂತಾಯಿ ಸಿರಿಧಾನ್ಯ ರೀತಿಯ ಕೃಷಿ ಉತ್ಪಾದಕ ಕಂಪನಿಯ ಪ್ರಯತ್ನಗಳನ್ನು ಕೊಂಡಾಡಿದ್ದರು.
“ಅಮೃತ ಸರೋವರ ಅಭಿಯಾನ” ವ್ಯಾಪ್ತಿಯಲ್ಲಿ ಬಾಗಲಕೋಟೆ ಜಿಲ್ಲೆಯ ಬಿಲ್ಕೆರೂರ ಗ್ರಾಮದಲ್ಲಿ ಅಮೃತ ಸರೋವರ ನಿರ್ಮಿಸಿದ್ದರ ಬಗ್ಗೆ ಪ್ರಶಂಸೆ.
“ಅಮೃತ ಭಾರತಿ ಕನ್ನಡದಾರತಿ” ಅಭಿಯಾನದ ವ್ಯಾಪ್ತಿಯಲ್ಲಿ ರಾಜ್ಯದ 75 ಸ್ಥಳಗಳಲ್ಲಿ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉಲ್ಲೇಖ.
ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೊರೊನಾ ಅವಧಿಯಲ್ಲಿ ಮಹಿಳೆಯರು ಬಾಳೆಕಾಯಿ ಹುಡಿಯಿಂದ ದೋಸೆ, ಗುಲಾಬ್‌ ಜಾಮೂನು ಸೇರಿದಂತೆ ಇತರ ಆಹಾರ ವಸ್ತುಗಳ ತಯಾರಿಕೆಯ ಬಗ್ಗೆ ಪ್ರಯತ್ನಿಸಿದ್ದರ ಬಗ್ಗೆ ಪ್ರಸ್ತಾಪ.

ಯುವ ಬ್ರಿಗೇಡ್‌ನ‌ ಸ್ವತ್ಛತಾ ಅಭಿಯಾನ ಮತ್ತು ಶ್ರೀರಂಗಪಟ್ಟಣದಲ್ಲಿರುವ ವೀರಭದ್ರ ಸ್ವಾಮಿ ದೇವಾಲಯದ ಜಿರ್ಣೋದ್ಧಾರದ ಬಗ್ಗೆ ಮೆಚ್ಚುಗೆಯ ಮಾತು. ಸೋಮೇಶ್ವರ
ಬೀಚ್‌ ಸ್ವತ್ಛಗೊಳಿಸಿದ ಅನುದೀಪ್‌ ಮತ್ತು ಮಿನುಷಾ ದಂಪತಿ ಬಗ್ಗೆ ಹೊಗಳಿಕೆ.
ಬಸವೇಶ್ವರರ ಬೋಧನೆಗಳ ಬಗ್ಗೆ ನೆನಪಿಸಿಕೊಂಡಿದ್ದಾರೆ. ಕಾಯಕವೇ ಕೈಲಾಸ ಎಂದರೆ ಸರಿಯಾದ ಶ್ರದ್ಧೆ ಮತ್ತು ಪರಿಶ್ರಮದಿಂದ ಕರ್ತವ್ಯ ನಿರ್ವಹಿಸುವುದು ಕೈಲಾಸ ಧಾಮದಲ್ಲಿ ಇರುವುದಕ್ಕೆ ಸಮಾನವಾಗಿದೆ.
ಇ-ತ್ಯಾಜ್ಯ ನಿರ್ವಹಣೆಯಲ್ಲಿ ಸ್ಟಾರ್ಟಪ್‌ಗ್ಳನ್ನು ಉತ್ತೇಜಿಸುವ ಪ್ರಯತ್ನದಲ್ಲಿ ತೊಡಗಿರುವ ಬೆಂಗಳೂರಿನ ಇ-ಪರಿಸರದ ಬಗ್ಗೆ ಉಲ್ಲೇಖ.
ಪದ್ಮ ಪ್ರಶಸ್ತಿ ಪುರಸ್ಕೃತರ ಬಗ್ಗೆ ಉಲ್ಲೇಖೀಸುವ ಸಂದರ್ಭದಲ್ಲಿ ಸೀತವ್ವ ಜೋಡಟ್ಟಿ, ಅಮೈ ಮಹಾಲಿಂಗ ನಾಯ್ಕ, ಸಾಲು ಮರದ ತಿಮ್ಮಕ್ಕ ಅವರ ಸಾಧನೆಗಳ ಪ್ರಶಂಸೆ.
ಅಡಿಕೆ ನಾರಿನಿಂದ ತಯಾರಿಸಿದ ಅನೇಕ ವಿಶಿಷ್ಟ ಉತ್ಪನ್ನಗಳನ್ನು ಸಿದ್ಧಗೊಳಿಸಿ ವಿದೇಶಗಳಿಗೆ ಕಳುಹಿಸುವ ಶಿವಮೊಗ್ಗದ ಸುರೇಶ್‌, ಅವರ ಪತ್ನಿ ಮೈಥಿಲಿ ಬಗ್ಗೆ ಉಲ್ಲೇಖ.
ಗದಗದಲ್ಲಿ ವಾಸಿಸುವ ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ- ಕಾವೆಂಶ್ರೀ 25 ವರ್ಷಗಳಿಂದ ರಾಜ್ಯದ ಕಲೆ ಮತ್ತು ಸಂಸ್ಕೃತಿಯನ್ನು ಪ್ರಚಾರ ಮಾಡುವ ಹಾಗೂ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ “ಕಲಾ ಚೇತನ’ ಎಂಬ ಹೆಸರಿನ ಸಂಸ್ಥೆ ನಡೆಸುತ್ತಿರುವ ಬಗ್ಗೆ ಮಾತನಾಡಿದ್ದರು.

ಲಕ್ಷ್ಮೇಶ್ವರದ ರಿದಾ ನದಾಫ್ ತಾವು ಸೇನಾಧಿಕಾರಿಯ ಪುತ್ರಿ ಆಗಿರುವುದಕ್ಕೆ ಹೆಮ್ಮೆ ಇದೆ ಎಂದು ಬರೆದಿದ್ದರು. ಕಲಬುರಗಿಯ ಇರ್ಫಾನಾ ಬೇಗಂ ಎಂಬುವರು 5 ಕಿಮೀ ದೂರದಲ್ಲಿ ಇರುವ ಶಾಲೆಗೆ ಪರೀಕ್ಷೆಗಾಗಿ ತೆರಳಿದ್ದ ಬಗ್ಗೆ ಬರೆದಿದ್ದ ಪತಕ್ಕೆ ಶ್ಲಾಘನೆ.
ನೀರಿನ ಸಂರಕ್ಷಣೆಗಾಗಿ ಕೆಲಸ ಮಾಡಿದ ಕಾಮೇ ಗೌಡರ ಬಗ್ಗೆ ಪ್ರಶಂಸನೀಯ ಭಾವನೆಯ ಮಾತುಗಳು.
ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಅವರ ಬಗ್ಗೆ ಗೌರವ ಪೂರ್ವಕ ಮಾತುಗಳ ಉಲ್ಲೇಖ.
ದೂರದ ಪ್ರದೇಶಗಳಲ್ಲಿ ಹೆರಿಗೆಗಾಗಿ ತೆರಳಿ ನೆರವಾಗುತ್ತಿದ್ದ ಸೂಲಗಿತ್ತಿ ನರಸಮ್ಮ ಅವರಿಗೆ ಕಾರ್ಯಕ್ರಮದಲ್ಲಿ ಶ್ಲಾ ಸಿದ್ದರು.
ಚನ್ನಪಟ್ಟಣದಲ್ಲಿ ಸಿದ್ಧಗೊಳ್ಳುವ ಆಟಿಕೆ ಉದ್ಯಮ.

ಕೊಪ್ಪಳದಲ್ಲಿ ಶೌಚಾಲಯಕ್ಕಾಗಿ ಸತ್ಯಾಗ್ರಹ ಮಾಡಿದ್ದ ಮಲ್ಲಮ್ಮನವರ ಬಗ್ಗೆ ಮುಕ್ತ ಕಂಠದ ಶ್ಲಾಘನೆ
ಬೆಳಗಾವಿಯ ರೈತನ ಮಗಳು ಅಕ್ಷಯ ಬಸವಾನಿ ಖೇಲೋ ಇಂಡಿಯಾದಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವುದರ ಬಗ್ಗೆ ಮೆಚ್ಚುಗೆ.
ಬೆಂಗಳೂರಿನ ಸುರೇಶ್‌ ಕುಮಾರ್‌ ಅವರು ಸಹಕಾರ ನಗರದಲ್ಲಿ ಅರಣ್ಯ ಪುನರುಜ್ಜೀವನಕ್ಕೆ ಶ್ರಮಿಸುತ್ತಿರುವುದು, ಕನ್ನಡ ಭಾಷೆ ಮತ್ತು ಸಂಸ್ಕೃತಿ ಪ್ರಚಾರಕ್ಕಾಗಿ ಬಸ್‌ನಿಲ್ದಾಣ ನಿರ್ಮಿಸಿದ್ದನ್ನು ಪ್ರಧಾನಿ ಪ್ರಸ್ತಾಪಿಸಿದ್ದರು.

ಕರ್ನಾಟಕದಿಂದ ಏಳು ಮಂದಿಗೆ ಆಹ್ವಾನ
100ನೇ ಮನ್‌ ಕೀ ಬಾತ್‌ ವಿಶೇಷ ಕಾರ್ಯಕ್ರಮಕ್ಕೆ ಗದಗ ನಗರದ ಕಲಾ ಚೇತನ ವೇದಿಕೆ ಅಧ್ಯಕ್ಷ ಕಾವೆಂಶ್ರೀ (ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ್‌) ಅವರನ್ನು ಪ್ರಸಾರ ಭಾರತಿ ಆಹ್ವಾನಿಸಿತ್ತು. ರಾಜ್ಯದಿಂದ ಆಹ್ವಾನಿಸಲಾದ 7 ಜನ ಅತಿಥಿಗಳಲ್ಲಿ ಕಾವೆಂಶ್ರೀ ಕೂಡ ಒಬ್ಬರಾಗಿದ್ದಾರೆ. ಪ್ರಧಾನಿ ಮೋದಿ ತಮ್ಮ 96ನೇ ಮನ್‌ ಕೀ ಬಾತ್‌ನಲ್ಲಿ ಕಲೆ-ಸಂಸ್ಕೃತಿಯ ರಕ್ಷಣೆಗೋಸ್ಕರ ಸೇವೆ ಸಲ್ಲಿಸಿದ ಕಲಾ ಚೇತನ ವೇದಿಕೆ ಅಧ್ಯಕ್ಷ ಕಾವೆಂಶ್ರೀ ಅವರನ್ನು ಶ್ಲಾಘಿಸಿದ್ದರು. 100ನೇ ಕಾರ್ಯಕ್ರಮ ಏ.26ರಂದು ಕರ್ತವ್ಯ ಪಥದಲ್ಲಿ ನಡೆಯಿತು.

ಟಾಪ್ ನ್ಯೂಸ್

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

army

Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ

RG ಕರ್‌ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್‌ ಶಿಕ್ಷೆ ಪ್ರಕಟ

RG ಕರ್‌ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್‌ ರಾಯ್ ಗೆ ಜೀವಾವಧಿ ಶಿಕ್ಷೆ

ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ

CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.