ಕೀನ್ಯಾದಿಂದ ಬಾಂಗ್ಲಾ ತನಕ ಮಾಸ್ಕ್ ನಿರ್ಮಾಣ ಗೃಹೋದ್ಯಮ


Team Udayavani, May 26, 2020, 11:25 AM IST

ಕೀನ್ಯಾದಿಂದ ಬಾಂಗ್ಲಾ ತನಕ ಮಾಸ್ಕ್ ನಿರ್ಮಾಣ ಗೃಹೋದ್ಯಮ

ಢಾಕಾ: ವಿಶ್ವಾದ್ಯಂತ ಕೋವಿಡ್‌-19 ಅಟ್ಟಹಾಸಗೈಯುತ್ತಿರುವಾಗ ಆಫ್ರಿಕದ ಕೀನ್ಯಾದಿಂದ ಏಷ್ಯದ ಬಾಂಗ್ಲಾದೇಶದವರೆಗೆ ಮುಖಗವಸು ತಯಾರಿಸುವ ಹಾಗೂ ವಿತರಿಸುವ ಗೃಹೋದ್ಯಮಗಳು ತಲೆಯೆತ್ತಿವೆ. ಈ ಮುಖಗವಸುಗಳನ್ನು ಮುಂಚೂಣಿ ಕಾರ್ಯಕರ್ತರು, ಟ್ಯಾಕ್ಸಿ ಚಾಲಕರು, ಅಂಗಡಿಕಾರರು ಮುಂತಾದವರಿಗೆ ಪೂರೈಸಲಾಗುತ್ತಿದೆ.

ಬಳಸಿ ಎಸೆಯಬಹುದಾದ ಫಿಲ್ಟರ್‌ನೊಂದಿಗೆ ಎರಡು ಪದರಗಳ ಬಟ್ಟೆಯನ್ನೊಳಗೊಂಡ ಮುಖಗವಸುಗಳನ್ನು ನಿರ್ಮಿಸುವ ಗೃಹೋದ್ಯಮಗಳು ಸ್ಥಳೀಯ ಆರ್ಥಿಕತೆಯ ಚೇತರಿಕೆಗೆ ಮಾತ್ರವಲ್ಲದೆ ಕೋವಿಡ್‌ ವಿರುದ್ಧ ಹೋರಾಟದಲ್ಲಿ ಜನತೆಗೆ ನೆರವಾಗುತ್ತಿವೆ.

ಮುಖಗವಸುಗಳ ಕೊರತೆ
ಬಾಂಗ್ಲಾದೇಶದಲ್ಲಿ ಕೋವಿಡ್‌ನ‌ 25,000ಕ್ಕೂ ಅಧಿಕ ದೃಢೀಕೃತ ಪ್ರಕರಣಗಳಿದ್ದರೂ ಶಾಪಿಂಗ್‌ ಮಾಲ್‌ಗ‌ಳು ಮತ್ತೆ ತೆರೆದಿವೆ ಹಾಗೂ ಜವುಳಿ ಕಾರ್ಖಾನೆಗಳು ಕಾರ್ಯಾರಂಭಿಸಿವೆ. ಆದರೆ ಅಲ್ಲಿ ಮುಖಗವಸುಗಳ ಕೊರತೆಯಿದ್ದು ಕಾರ್ಖಾನೆಗಳಲ್ಲಿ ಮುಖಗವಸು ಧರಿಸುವ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಯಮಗಳನ್ನು ಪಾಲಿಸಲಾಗುತ್ತಿಲ್ಲವೆಂದು ಕೆಲಸಗಾರರು ದೂರಿದ್ದಾರೆ.

ದೇಶಾದ್ಯಂತ ವೈಯಕ್ತಿಕ ಸುರಕ್ಷಾ ಸಾಧನಗಳ ಕೊರತೆಯಿರುವುದನ್ನು ಮನಗಂಡ ಮಾನವೀಯ ಸಂಘಟನೆಯೊಂದು ಜಲ ಸುರಕ್ಷಾ ಸಾಧನಗಳನ್ನು ನಿರ್ಮಿಸುವ ತನ್ನ ವರ್ಕ್‌ ಶಾಪನ್ನು ಮಾಸ್ಕ್ ತಯಾರಿಸುವ ಘಟಕವಾಗಿ ಬದಲಾಯಿಸಿದೆ. ಸಣ್ಣ ಮೀನುಗಾರಿಕಾ ಹಳ್ಳಿ ಶ್ಯಾಮಲಾಪುರದಲ್ಲಿರುವ ಈ ಘಟಕದಲ್ಲಿ ಈಗ ಮುಖಗವಸುಗಳನ್ನು ಹೊಲಿಯಲಾಗುತ್ತಿದ್ದು ಕಾಕ್ಸ್‌ ಬಜಾರ್‌ಗೆ ಹಾಗೂ ಸುತ್ತಮುತ್ತಲ ರೊಹಿಂಗ್ಯಾ ನಿರಾಶ್ರಿತರ ಶಿಬಿರಗಳಿಗೆ ಪೂರೈಸಲಾಗುತ್ತಿದೆ. ಈ ಶಿಬಿರಗಳಲ್ಲಿ 10 ಲಕ್ಷಕ್ಕೂ ಅಧಿಕ ರೊಹಿಂಗ್ಯಾಗಳಿದ್ದು ಕೋವಿಡ್‌ ಹರಡುವ ಕುರಿತು ನೆರವು ಕಾರ್ಯಕರ್ತರು ಭೀತಿ ವ್ಯಕ್ತಪಡಿಸಿದ್ದಾರೆ.

“ನಾವು ಬೇರೆ ದೇಶಗಳಲ್ಲಿ ಕೋವಿಡ್‌ ಎಷ್ಟು ಕ್ಷಿಪ್ರವಾಗಿ ವ್ಯಾಪಿಸುತ್ತಿದೆಯೆಂದು ನೋಡಿದಾಗ ಬಾಂಗ್ಲಾದೇಶದಲ್ಲಿ ಅದು ಹರಡುವುದನ್ನು ತಡೆಯಲು ನಾವು ನಮ್ಮ ಸಂಪನ್ಮೂಲಗಳನ್ನು ಹೇಗೆ ಬಳಸಬಹುದೆಂದು ಆಲೋಚಿಸಿದೆವು.ನಾವು ಕೆಲ ಅಧ್ಯಯನಗಳನ್ನು ನಡೆಸಿ ಮಾಸ್ಕ್ಗಳನ್ನು ನಿರ್ಮಿಸಲು ನಿರ್ಧರಿಸಿದೆವು’ ಎಂದು ಸಾಗರೋತ್ತರ ವಲಸಿಗ ನೆರವು ಕೇಂದ್ರ(ಮೋಸ್‌)ದ ಸಹಸ್ಥಾಪಕಿ ರೆಗಿನಾ ಕ್ಯಾರ್ಟಂಬೋನ್‌ ಹೇಳಿದರು. ಈ ಕೇಂದ್ರ ಬಾಂಗ್ಲಾದೇಶದಲ್ಲಿ 2017ರಿಂದೀಚೆ ಕೆಲಸ ಮಾಡುತ್ತಿದೆ.

“ನಾವು ಅನಂತರ 70 ಟೈಲರ್‌ಗಳ ತಂಡವೊಂದನ್ನು ರೂಪಿಸಿ ಹತ್ತಿಬಟ್ಟೆಯ ಮಾಸ್ಕ್ಗಳನ್ನು ತಯಾರಿಸುತ್ತಿದ್ದೇವೆ. ಇವು ಸರ್ಜರಿ ವೇಳೆ ಧರಿಸುವ ಅಥವಾ ಎನ್‌ 95 ಅಥವಾ ಎನ್‌3 ಮಾಸ್ಕ್ ಗಳಲ್ಲವಾದರೂ ಸುರಕ್ಷತೆಗೆ ಬೇರೆ ಹಾದಿಯಿಲ್ಲದಿರುವಾಗ ನೆರವಿಗೆ ಬರುತ್ತವೆ’ ಎಂದವರು ನುಡಿದರು.

80,900 ಮಾಸ್ಕ್ಗಳ ತಯಾರಿ
ಈ ಘಟಕದಲ್ಲಿ ಮಾ. 25ರಿಂದ ದರ್ಜಿಗಳು 80,900 ಮುಖಗವಸುಗಳನ್ನು ಹೊಲಿದಿದ್ದಾರೆ. ಕಾಕ್ಸ್‌ ಬಜಾರ್‌ನಲ್ಲಿ ಇನ್ನೊಂದು ಘಟಕವನ್ನು ತೆರೆಯಲು ಮೋಸ್‌ ಉದ್ದೇಶಿಸಿದೆ. ಮೂರು ತಿಂಗಳ ಅವಧಿಯಲ್ಲಿ ಇನ್ನೂ 2,00,000 ಮುಖಗವಸುಗಳನ್ನು ಹೊಲಿಯುವ ಗುರಿ ಹಾಕಿಕೊಂಡಿದೆ. ಈ ಮುಖಗವಸುಗಳನ್ನು ನರ್ಸ್‌ ಗಳು, ಅಗ್ನಿಶಾಮಕ ಸಿಬಂದಿ ಸಹಿತ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರವಲ್ಲ ನಿರಾಶ್ರಿತರಿಗೆ ಉಚಿತವಾಗಿ ಪೂರೈಸಲಾಗುವುದು.

ಜನರಿಗೆ ಬೇರೆ ಆದಾಯಮೂಲಗಳಿಲ್ಲದ ಸ್ಥಿತಿಯಲ್ಲಿ ಮುಖಗವಸು ಹೊಲಿಯುವುದರಿಂದ ತಮ್ಮ ಕುಟುಂಬವನ್ನು ಪೋಷಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಕ್ಯಾರ್ಟಂಬೋನ್‌ ಹೇಳುತ್ತಾರೆ.

ಸ್ಯಾನಿಟರಿ ಪ್ಯಾಡ್‌ ಬದಲು ಮಾಸ್ಕ್ ತಯಾರಿ
ಉತ್ತರ ಕೀನ್ಯಾದ ಸಂಬುರು ಕೌಂಟಿಯಲ್ಲಿ ಅಳಿವಿನಂಚಿನಲ್ಲಿರುವ ಝೀಬ್ರಾಗಳ ರಕ್ಷಣೆಗಾಗಿರುವ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌ ಸ್ಥಳೀಯ ಬಾಲಕಿಯರಿಗಾಗಿ ನಿರ್ಮಿಸುತ್ತಿದ್ದ ಮರುಬಳಕೆಯ ಸ್ಯಾನಿಟರಿ ಪ್ಯಾಡ್‌ಗಳ ಬದಲು ಇಡೀ ಸಮುದಾಯಕ್ಕಾಗಿ ಝೀಬ್ರಾದ ಚಿತ್ರವುಳ್ಳ ಬಟ್ಟೆಯ ಮುಖಗವಸುಗಳನ್ನು ನಿರ್ಮಿಸುತ್ತಿದೆ.

ಟ್ರಸ್ಟ್‌ ವಾಂಬಾ ಪ್ರಾಂತದಲ್ಲಿ ಝೀಬ್ರಾಗಳ ಸಂಖ್ಯೆ ಮೇಲೆ ನಿಗಾ ಇರಿಸಲು ಬಾಲಕಿಯರು ಹಾಗೂ ಮಹಿಳೆಯರನ್ನು ನೇಮಿಸುತ್ತಿದೆ. ಅದು ಮಹಿಳೆಯರು ಹಾಗೂ ಬಾಲಕಿಯರಿಗೆ ಒಂದು ಆದಾಯ ಮೂಲವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಹೊಲಿಯುವ ಘಟಕವನ್ನೂ ನಿರ್ವಹಿಸುತ್ತಿದೆ ಮತ್ತು ಪ್ಯಾಡ್‌ಗಳನ್ನು ಶಾಲೆಗಳಲ್ಲಿ ಅಥವಾ ವಸತಿ ಪ್ರದೇಶಗಳಲ್ಲಿ ಮಾರಲಾಗುತ್ತಿದೆ. ಆದರೆ ಕೀನ್ಯಾದಲ್ಲಿ ಲಾಕ್‌ಡೌನ್‌ ಘೋಷಿಸಲಾದ ತತ್‌ಕ್ಷಣ ಟ್ರಸ್ಟ್‌ ಸ್ಥಳೀಯ ಜನರನ್ನು ರಕ್ಷಿಸುವ ಕ್ರಮವಾಗಿ ಸ್ಯಾನಿಟರಿ ಪ್ಯಾಡ್‌ಗಳ ಬದಲು ಮುಖಗವಸುಗಳ ನಿರ್ಮಾಣಕ್ಕೆ ಆರಂಭಿಸಿತು.

ಉಚಿತ ವಿತರಣೆಗಾಗಿ ವಾರಕ್ಕೆ 700-1,000 ಮುಖಗವಸುಗಳನ್ನು ನಿರ್ಮಿಸಲು ಟ್ರಸ್ಟ್‌ ಉದ್ದೇಶಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಮುದಾಯಿಕ ವ್ಯವಸ್ಥೆಯಲ್ಲಿ ಜನರು ವಾಸಿಸುತ್ತಿರುವುದರಿಂದ ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದಕ್ಕೆ ತುಂಬ ಕಷ್ಟ. ಮಾಸ್ಕ್ ಒಂದೇ ಇದಕ್ಕೆ ಪರಿಹಾರವಾಗಿದೆ ಎಂದು ಟ್ರಸ್ಟ್‌ ಹೇಳಿದೆ.

ಝೀಬ್ರಾ ಸಂರಕ್ಷಣೆ ಕುರಿತು ಜಾಗೃತಿ
ಟ್ರಸ್ಟ್‌ ಸಿದ್ಧಪಡಿಸುವ ಮಾಸ್ಕ್ ಹತ್ತಿಬಟ್ಟೆಯಲ್ಲಿ ಝೀಬ್ರಾದ ಮುದ್ರಣವನ್ನೊಳಗೊಂಡ ಎರಡು ಪದರಗಳನ್ನು ಒಳಗೊಂಡಿದ್ದು ಮಧ್ಯದಲ್ಲಿ ಫಿಲ್ಟರ್‌ ಪದರ ಇರುತ್ತದೆ. ಅಳಿವಿನಂಚಿನಲ್ಲಿರುವ ಝೀಬ್ರಾಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶ ಇದರ ಹಿಂದಿದೆ. ಉತ್ತರ ಮತ್ತು ಮಧ್ಯ ಕೀನ್ಯಾದಲ್ಲಿ ಝೀಬ್ರಾಗಳ ಸಂಖ್ಯೆ ತ್ವರಿತವಾಗಿ ಇಳಿಕೆಯಾಗುತ್ತಿದೆ ಮತ್ತು ಅಲ್ಲಿ ಈಗ ಕೇವಲ 3,000ದಷ್ಟು ಝೀಬ್ರಾಗಳಿವೆ.

ಕೀನ್ಯಾದಲ್ಲಿ ಜಗತ್ತಿನಲ್ಲೇ ಅತಿ ಕಟ್ಟುನಿಟ್ಟಿನ ಮುಖಗವಸು ನಿಯಮವಿದೆ. ಜನರು ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಮತ್ತು ಇದಕ್ಕೆ ತಪ್ಪಿದಲ್ಲಿ ಆರು ತಿಂಗಳ ಜೈಲುವಾಸ ಎದುರಿಸಬೇಕಾಗುತ್ತದೆ. ಟ್ರಸ್ಟ್‌ ಈಗ ತನ್ನ ಸದಸ್ಯರು ಹಾಗೂ ಅವರ ಕುಟುಂಬಗಳಿಗೆ ಸಾಲುವಷ್ಟು ಮುಖಗವಸುಗಳನ್ನು ನಿರ್ಮಿಸುತ್ತಿದೆ. ಮುಂದೆ ವಲಯದಲ್ಲಿನ ಇಡೀ ಸಮುದಾಯಕ್ಕೆ ಮುಖಗವಸು ಒದಗಿಸುವ ಗುರಿಯನ್ನು ಹೊಂದಿದೆ. ಕೀನ್ಯಾದಲ್ಲಿ ಮುಖಗವಸುಗಳಿಗೆ ಭಾರೀ ಬೇಡಿಕೆಯಿದೆ ಮತ್ತು ಅವು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿಲ್ಲ. ಕೆಲವೊಮ್ಮೆ ಆರೋಗ್ಯ ಕಾರ್ಯಕರ್ತರಿಗೆ ಕೂಡ ಮುಖಗವಸು ಪಡೆಯಲು ಕಷ್ಟವಾಗುತ್ತಿದೆ.

ಆಫ್ರಿಕದ ಐದು ರಾಷ್ಟ್ರಗಳಲ್ಲಿ ವಿತರಣೆ
ಆಫ್ರಿಕದ ಐದು ರಾಷ್ಟ್ರಗಳಲ್ಲಿ ಮುಂದಿನ ವರ್ಷದೊಳಗೆ 25 ಲಕ್ಷ ಜನರಿಗೆ ಕೋವಿಡ್‌ ಸೋಂಕು ತಗಲಬಹುದೆಂದು ಅಂದಾಜಿಸಲಾಗಿದೆ. ಈ ದೇಶಗಳಲ್ಲಿ ಸ್ವಯಂಸೇವಕರು ಉಚಿತವಾಗಿ ಸಹಸ್ರಾರು ಮುಖಗವಸುಗಳನ್ನು ಹಂಚುತ್ತಿದ್ದಾರೆ. ಕಾಂಗೋ, ಕೀನ್ಯಾ, ನೈಜೀರಿಯ ಮತ್ತು ಸೆನೆಗಲ್‌ನಲ್ಲಿ 7,000 ಮುಖಗವಸುಗಳನ್ನು ಹಂಚಲಾಗಿದ್ದು, ಶೀಘ್ರ ಇನ್ನೂ 3,000 ಮುಖಗವಸುಗಳನ್ನು ಹಂಚಲು ಉದ್ದೇಶಿಸಲಾಗಿದೆ.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Trump-musk

Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹತ್ಯೆ

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹ*ತ್ಯೆ

India cuts import duty on American Bourbon Whiskey

Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.