PM ಮೋದಿ ಅಧಿಕಾರಾವಧಿಯಲ್ಲಿ ಭಾರೀ ಅಭಿವೃದ್ಧಿ: ಮಾರ್ಗನ್ ಸ್ಟಾನ್ಲ ವರದಿ
ಭಾರತ ಜಗತ್ತಿನ ಪ್ರಮುಖ ಶಕ್ತಿಗಳಲ್ಲಿ ಒಂದಾಗಿದೆ
Team Udayavani, Jun 1, 2023, 7:57 AM IST
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ ಒಂದು ದಶಕದ ಒಳಗಾಗಿ ಜಗತ್ತಿನ ಮಹತ್ವದ ಶಕ್ತಿಗಳಲ್ಲಿ ಒಂದಾಗಿ ಹೊರ ಹೊಮ್ಮಿದೆ. ಜತೆಗೆ ವಿಶ್ವದ ಆಗುಹೋಗುಗಳಲ್ಲಿ ತೀರ್ಮಾನ ಪ್ರಕಟಿಸುವ ಪ್ರಮುಖ ದೇಶವಾಗಿದೆ ಎಂದು ಜಾಗತಿಕ ಅಮೆರಿಕದ ಪ್ರಮುಖ ಹಣಕಾಸು ವಿಶ್ಲೇಷಣಾ ಸಂಸ್ಥೆ ಮಾರ್ಗನ್ ಸ್ಟಾನ್ಲ ತನ್ನ ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.
ವಿದೇಶಿ ಬಂಡವಾಳ ಹೂಡಿಕೆದಾರರು ಮತ್ತು ಇತರರು 2014ರ ಬಳಿಕ ಭಾರತದ ಮೇಲೆ ಹೊಂದಿದ್ದ ಭಾವನೆ ಈಗ ದೂರವಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಭಾರತ ಯಾವುದೇ ಸಾಧನೆ ಮಾಡಿಲ್ಲ ಎಂಬ ಟೀಕೆಗಳನ್ನು ತಳ್ಳಿ ಹಾಕಿರುವ ಮಾರ್ಗನ್ ಸ್ಟಾನ್ಲ , ಏಷ್ಯಾ ಮತ್ತು ಜಗತ್ತಿನ ಬೆಳವಣಿಗೆಯಲ್ಲಿ ಪ್ರಮುಖವಾಗಿರುವ ಭೂಮಿಕೆ ನಿಭಾಯಿಸುತ್ತಿದೆ ಎಂದು ಶ್ಲಾಘಿಸಿದೆ.
2013ರಲ್ಲಿ ಮತ್ತು ಹಾಲಿ ಪರಿಸ್ಥಿತಿಯನ್ನು ಹೋಲಿಕೆ ಮಾಡುವಾಗ ಭಾರಿ ಧನಾತ್ಮಕ ಬದಲಾವಣೆಯ ವ್ಯತ್ಯಾಸ ಕಂಡುಬರುತ್ತಿದೆ. ಹತ್ತು ಪ್ರಧಾನ ವ್ಯತ್ಯಾಸಗಳನ್ನು ಮಾರ್ಗನ್ ಸ್ಟಾನ್ಲ ಉಲ್ಲೇಖೀಸಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಫಲಾನುಭವಿಗಳ ಖಾತೆಗೆ ನೇರವಾಗಿ ನಗದು ವರ್ಗಾವಣೆ, ಮೂಲ ಸೌಕರ್ಯಗಳ ಕ್ಷೇತ್ರದಲ್ಲಿ ಭಾರೀ ಸುಧಾರಣೆ, ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮನಾಗಿ ಕಾರ್ಪೊರೇಟ್ ತೆರಿಗೆ ವ್ಯವಸ್ಥೆ, ದಿವಾಳಿ ಸಂಹಿತೆ, ಜಿಎಸ್‌ಟಿ ಜಾರಿ ಮತ್ತು ಅದರ ಸಂಗ್ರಹದಲ್ಲಿ ಏರಿಕೆ, ಡಿಜಿಟಲ್ ರೂಪದಲ್ಲಿ ವಹಿವಾಟು ಹೆಚ್ಚಳ, ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹೊಸತಾಗಿರುವ ಕಾನೂನು, ಬಹುರಾಷ್ಟ್ರೀಯ ಕಂಪನಿಗಳ ಸ್ನೇಹಿ ವಾತಾವರಣಗಳು, ವಿದೇಶಿ ನೇರ ಬಂಡವಾಳ ಹೂಡಿಕೆಗೆ ಆದ್ಯತೆ, ಉತ್ಪಾದನೆ ಮತ್ತು ಜಿಡಿಪಿ ಪ್ರಮಾಣದಲ್ಲಿ ಏರಿಕೆಯಲ್ಲಿ ಗಣನೀಯ ಸಾಧನೆ ಮಾಡಲಾಗಿದೆ ಎಂದು ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.