BJP ಟಿಕೆಟ್‌ಗಾಗಿ ನೇಕಾರರಿಂದ ದೆಹಲಿಯಲ್ಲಿ ಭಾರಿ ಕಸರತ್ತು
ಕೊನೆಯ ಹಂತದಲ್ಲೂ ನಿಲ್ಲದ ನೇಕಾರರ ಹೋರಾಟ
Team Udayavani, Apr 9, 2023, 5:19 PM IST
ರಬಕವಿ-ಬನಹಟ್ಟಿ : ಬಿಜೆಪಿಯಿಂದ ಹಾಲಿ ಶಾಸಕ ಸಿದ್ದು ಸವದಿಯವರಿಗೆ ಟಿಕೆಟ್ ನೀಡದೆ ಸ್ಥಳೀಯ ನೇಕಾರ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ದೆಹಲಿಯಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಿವಾಸದೆದುರು ಟಿಕೆಟ್‌ಗಾಗಿ ಭಾನುವಾರ ನೇಕಾರ ಮುಖಂಡರು ಹೋರಾಟ ನಡೆಸಿದರು.
ಸದ್ಯದಲ್ಲಿಯೇ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗುವ ನಿಟ್ಟಿನಲ್ಲಿ ರಾಷ್ಟ್ರೀಯ ಹೈಕಮಾಂಡ್ ಮಟ್ಟದಲ್ಲಿ ಅಭ್ಯರ್ಥಿಗಳ ಹೆಸರು ತೆರಳಿದ್ದು, ಶೀಘ್ರವೇ ಶರಾ ಬರೆಯುವ ಕೊನೆಯ ಕ್ಷಣದವರೆಗೂ ನೇಕಾರ ಸಮುದಾಯದಿಂದ ಟಿಕೆಟ್‌ಗಾಗಿ ಹೋರಾಟ ನಿಂತಿಲ್ಲ. ಆ ನಿಟ್ಟಿನಲ್ಲಿ ದೆಹಲಿಯಲ್ಲಿಯೂ ನೇಕಾರರಿಗೆ ಟಿಕೇಟ್ ನೀಡುವಂತೆ ಒತ್ತಾಯಿಸಿದರು.
ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಐತಿಹಾಸಿಕ ಪೈಪೋಟಿ ಹೊಂದಿದ್ದು, ಬಿಜೆಪಿ ಅಭ್ಯರ್ಥಿ ಆಯ್ಕೆಯೇ ಒಂದು ಸವಾಲಾಗಿ ಕಾಡುತ್ತಿದೆ.
ನೇಕಾರ ನಿಯೋಗದಲ್ಲಿ ಟಿಕೆಟ್ ಆಕಾಂಕ್ಷಿ ರಾಜೇಂದ್ರ ಅಂಬಲಿ, ಹಟಗಾರ ಸಮಾಜದ ಜಿಲ್ಲಾಧ್ಯಕ್ಷ ಸೋಮನಾಥ ಗೊಂಬಿ, ರಾಮಣ್ಣ ಹುಲಕುಂದ, ಸೈಜಿಂಗ್ ಘಟಕದ ಅಧ್ಯಕ್ಷ ಬ್ರಿಜ್‌ಮೋಹನ ಡಾಗಾ, ಕುಮಾರ ಕದಂ, ಪ್ರವೀಣ ಕೋಲಾರ ಸೇರಿದಂತೆ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Cricket: ಐಪಿಎಲ್ ಹರಾಜಿನಲ್ಲಿ 574 ಕ್ರಿಕೆಟಿಗರು
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Tennis: ಏಷ್ಯಾಡ್ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್ ನಿವೃತ್ತಿ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.