ಬೃಹತ್ ಮೊತ್ತದ ಹೋರಾಟ: ಪಾಕಿಸ್ಥಾನ ಜಯಭೇರಿ
Team Udayavani, May 1, 2023, 6:12 AM IST
ರಾವಲ್ಪಿಂಡಿ: ಫಕಾರ್ ಜಮಾನ್ ಅವರ ಅದ್ಭುತ ಶತಕದ ಬಲದಿಂದ ಪಾಕಿಸ್ಥಾನ ತಂಡವು ಪ್ರವಾಸಿ ನ್ಯೂಜಿಲ್ಯಾಂಡ್ ತಂಡದೆದುರಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಏಳು ವಿಕೆಟ್‌ಗಳ ಜಯ ಸಾಧಿಸಿದೆ. ಬೃಹತ್ ಮೊತ್ತದ ಈ ಸೆಣಸಾಟದಲ್ಲಿ ಫಕಾರ್ ಜಮಾನ್ ಅವರ ಆಟವೇ ಆಕರ್ಷಣೆಯ ಕೇಂದ್ರವಾಗಿತ್ತು.
ಈ ಗೆಲುವಿನಿಂದ ಪಾಕಿಸ್ಥಾನವು ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಸರಣಿಯ ಮೂರನೇ ಪಂದ್ಯ ಕರಾಚಿಯಲ್ಲಿ ಮೇ 3ರಂದು ನಡೆಯಲಿದೆ. ಈ ಮೊದಲು ನಡೆದ ಪಂದ್ಯದಲ್ಲಿ ಪಾಕಿಸ್ಥಾನ 5 ವಿಕೆಟ್‌ಗಳಿಂದ ಗೆಲುವು ಸಾಧಿಸಿ ಶುಭಾರಂಭ ಮಾಡಿತ್ತು.
ಡ್ಯಾರಿಲ್ ಮಿಚೆಲ್ ಅವರ ಶತಕ ಮತ್ತು ಟಾಮ್ ಲಾಥಂ ಅವರ ಉತ್ತಮ ಆಟದಿಂದ ನ್ಯೂಜಿಲ್ಯಾಂಡ್ ತಂಡವು 5 ವಿಕೆಟಿಗೆ 336 ರನ್ನುಗಳಬೃಹತ್ ಮೊತ್ತ ಪೇರಿಸಿತು. ಮೊದಲ ಪಂದ್ಯದಲ್ಲೂ ಶತಕ ಬಾರಿಸಿದ್ದ ಮಿಚೆಲ್ ಇಲ್ಲಿ 129 ರನ್ ಹೊಡೆದಿದ್ದರೆ ಲಾಥಂ 98 ರನ್ ಗಳಿಸಿ ಎರಡು ರನ್ನಿನಿಂದ ಶತಕ ಗಳಿಸಲು ವಿಫಲರಾದರು.
ಗೆಲ್ಲಲು ಕಠಿನ ಗುರಿ ಪಡೆದಿದ್ದರೂ ಪಾಕಿಸ್ಥಾನ ಭರ್ಜರಿಯಾಗಿ ಆಡಿ 48.2 ಓವರ್‌ಗಳಲ್ಲಿ ಕೇವಲ ಮೂರು ವಿಕೆಟಿಗೆ 337 ರನ್ ಬಾರಿಸಿ ಜಯಭೇರಿ ಬಾರಿಸಿತು. ಮತ್ತೆ ಅದ್ಭುತವಾಗಿ ಆಡಿದ ಫಕಾರ್ ಜಮಾನ್ ಅಜೇಯ 180 ರನ್ ಬಾರಿಸಿ ಗಮನ ಸೆಳೆದರು. ಮೊದಲ ಪಂದ್ಯದಲ್ಲೂ ಅವರು ಶತಕ ಬಾರಿಸಿದ್ದರು.
ಸಂಕ್ಷಿಪ್ತ ಸ್ಕೋರು
ನ್ಯೂಜಿಲ್ಯಾಂಡ್ 5 ವಿಕೆಟಿಗೆ 336 (ಡ್ಯಾರಿಲ್ ಮಿಚೆಲ್ 129, ಟಾಮ್ ಲಾಥಂ 98, ಹ್ಯಾರಿಸ್ ರವೂಫ್ 78ಕ್ಕೆ 4); ಪಾಕಿಸ್ಥಾನ 48.2 ಓವರ್‌ಗಳಲ್ಲಿ 3 ವಿಕೆಟಿಗೆ 337 (ಫಕಾರ್ ಜಮಾನ್ 180 ಔಟಾಗದೆ, ಬಾಬರ್ ಅಜಂ 65, ಮೊಹಮ್ಮದ್ ರಿಜ್ವಾನ್ 54).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.