ಡಾ| ಸಂಧ್ಯಾ ಎಸ್. ಪೈ, ಚೊಕ್ಕಾಡಿ ಸಹಿತ 6 ಮಂದಿಗೆ ಮಾಸ್ತಿ ಪ್ರಶಸ್ತಿ
Team Udayavani, Feb 16, 2021, 6:20 AM IST
ಬೆಂಗಳೂರು: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ನೀಡುವ 2020ನೇ ಸಾಲಿನ “ಮಾಸ್ತಿ ಪ್ರಶಸ್ತಿ’ಗಳನ್ನು ಪ್ರಕಟಿಸಲಾಗಿದ್ದು ತರಂಗ ವಾರ ಪತ್ರಿಕೆ ಮತ್ತು ತುಷಾರ ಮಾಸಿಕಗಳ ವ್ಯವಸ್ಥಾಪಕ ಸಂಪಾದಕರು, ಹಿರಿಯ ಲೇಖಕಿ ಡಾ| ಸಂಧ್ಯಾ ಎಸ್. ಪೈ (ಶಿಶು ಸಾಹಿತ್ಯ), ಸಾಹಿತಿ ಸುಬ್ರಾಯ ಚೊಕ್ಕಾಡಿ ಸಹಿತ ಆರು ಮಂದಿ ಆಯ್ಕೆ ಆಗಿದ್ದಾರೆ. ಮಾ. 27ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ವಿಮರ್ಶಕ ಎಸ್.ಆರ್. ವಿಜಯಶಂಕರ್ (ವಿಮರ್ಶೆ), ಪ್ರೊ| ಪುರುಷೋತ್ತಮ ಬಿಳಿಮಲೆ (ಸಂಶೋಧನೆ), ಸುಬ್ರಾಯ ಚೊಕ್ಕಾಡಿ (ಕಾವ್ಯ), ಕೇಶವ ರೆಡ್ಡಿ ಹಂದ್ರಾಳ (ಕಥೆ) ಮತ್ತು ಸ. ರಘುನಾಥ (ಸೃಜನಶೀಲ) ಅವರು ಮಾಸ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 129ನೇ ಸಂಸ್ಮರಣ ವರ್ಷ (ಮಾಸ್ತಿ ಪ್ರಶಸ್ತಿಯ 28ನೇ ವರ್ಷ)ದ ಅಂಗವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಮಾವಿನಕೆರೆ ರಂಗನಾಥ್ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಪ್ರೊ| ಎಂ.ಎಚ್. ಕೃಷ್ಣಯ್ಯ, ಜಿ.ಎನ್. ರಂಗನಾಥ್ ರಾವ್, ಬಿ.ಆರ್. ಲಕ್ಷ್ಮಣ ರಾವ್, ಡಾ| ಕೃಷ್ಣಮೂರ್ತಿ ಹನೂರು, ಉಷಾ ಕೇಸರಿ ಮತ್ತು ಡಿ.ಎಂ. ರವಿಕುಮಾರ್ ಸದಸ್ಯರಾಗಿದ್ದಾರೆ. ಪ್ರಶಸ್ತಿ 25 ಸಾವಿರ ರೂ. ನಗದು ಮತ್ತು ಫಲಕ ಒಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ
Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ
JDS protest: ಎಚ್‌ಡಿಕೆ ಕರಿಯ: ಜಮೀರ್ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ
Congress: “40 ಪರ್ಸೆಂಟ್ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.